Shani vakri Effect 2023 : ಕುಂಭ ರಾಶಿಯಲ್ಲಿ ಶನಿ ಜೂನ್ ತಿಂಗಳಿನಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ನಂತರ ನವೆಂಬರ್ ವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರಲಿದೆ.
ಬೆಂಗಳೂರು : ಯಾವುದೇ ಗ್ರಹದ ಹಿಮ್ಮುಖ ಚಲನೆ ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಶನಿಯು ಬಹಳ ನಿಧಾನವಾಗಿ ಚಲಿಸುತ್ತದೆ. ಕುಂಭ ರಾಶಿಯಲ್ಲಿ ಶನಿ ಜೂನ್ ತಿಂಗಳಿನಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ನಂತರ ನವೆಂಬರ್ ವರೆಗೆ ಹಿಮ್ಮುಖ ಚಲನೆಯಲ್ಲಿಯೇ ಇರಲಿದೆ. ಶನಿ ಮಹಾದೆಸೆ, ಶನಿ ಧೈಯಾ, ಶನಿ ಸಾಡೇಸಾತಿ ಇವೆಲ್ಲವೂ ಪ್ರತಿಯೊಬ್ಬರ ಜಾತಕದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದರ ಪರಿಣಾಮ ಪ್ರತಿಯೊಬ್ಬರ ಜೀವನದ ಮೇಲೆ ಕೂಡಾ ಕಂಡುಬರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಸಿಂಹ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿ ಜನರಿಗೆ ವಿಶೇಷ ಲಾಭವಾಗುವುದು. ಶನಿಗ್ರಹದ ಹಿಮ್ಮುಖ ಚಲನೆ ಈ ರಾಶಿಯವರ ಮೇಲೆ ಧನಾತ್ಮಕ ಪರಿಣಾಮವನ್ನೇ ಬೀರುವುದು. ಹೆಜ್ಜೆ ಹೆಜ್ಜೆಗೂ ನಿಮಗೆ ಸಿಗುವ ಯಶಸ್ಸನ್ನು ನೋಡಿದರೆ ನಿಮ್ಮ ಜೀವನದ ಮೇಲೆ ಶನಿಯ ಆಶೀರ್ವಾದ ಇದೆ ಎನ್ನುವುದು ನಿಮಗೇ ತಿಳಿಯುತ್ತದೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ.
ಕನ್ಯಾ ರಾಶಿ: ಶನಿಯ ಹಿಮ್ಮುಖ ಚಲನೆ ಈ ರಾಶಿಯವರ ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಧಾರ ನಿಮ್ಮ ಪರವಾಗಿ ಇರಲಿದೆ. ಉದ್ಯೋಗ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ. ಹಣಕಾಸಿನ ಸಮಸ್ಯೆಗಳು ಬಗೆಹರಿಯಲಿವೆ. ಹೂಡಿಕೆ ಮಾಡುವ ಬಗ್ಗೆ ಯೋಚನೆ ಇದ್ದರೆ ಇದು ಉತ್ತಮ ಸಮಯ.
ತುಲಾ ರಾಶಿ : ಇಲ್ಲಿಯವರೆಗೆ ನಿಮ್ಮನ್ನು ಕಾಡಿದ್ದ ಶನಿದೇವ ಈಗ ನಿಮ್ಮ ಮೇಲೆ ಕೃಪಾ ದೃಷ್ಟಿ ಹರಿಸುತ್ತಾನೆ. ಇಲ್ಲಿಯವರೆಗೆ ಅನುಭವಿಸಿದ್ದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಣದ ಕೊರತೆ ನಿವಾರಣೆಯಾಗುವುದು. ಭವಿಷ್ಯದ ದೃಷ್ಟಿಯಿಂದ ಮಾಡುವ ಹೂಡಿಕೆ ಲಾಭದಾಯಕವಾಗಿರುವುದು.
ಮಕರ ರಾಶಿ: ಈ ಸಮಯವು ಕುಂಭ ರಾಶಿಯವರಿಗೂ ಅನುಕೂಲಕರವಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ನಿಮ್ಮದಾಗುವುದು. ವಿದ್ಯಾರ್ಥಿಗಳ ಮೇಲೆ ಶನಿಯ ಕೃಪೆ ಅಧಿಕವಾಗಿರಲಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ.