/kannada/photo-gallery/anchor-anushree-marriage-video-goes-viral-on-social-media-249530  Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?! Anchor Anushree: ಸದ್ದಿಲ್ಲದೇ ನಡೆದೇ ಹೋಯ್ತು ಆಂಕರ್‌ ಅನುಶ್ರೀ ಮದುವೆ.. ಕನ್ನಡದ ʼಈʼ ಸ್ಟಾರ್‌ ನಟನನ್ನು ವರಿಸಿದ ಖ್ಯಾತ ನಿರೂಪಕಿ! ಆತ ಯಾರು ಗೊತ್ತೇ?! 249530

ನನ್ನ ಜನರೇ ನನಗೆ ʼಈಶ್ವರ ಸ್ವರೂಪಿʼ, ನಾನು ಅವರ ಕೊರಳಲ್ಲಿರುವ ʼನಾಗ ಸರ್ಪʼ..!

Karnataka Election 2023 : ಕಾಂಗ್ರೆಸ್ಸಿಗರು ನನ್ನನ್ನು ಹಾವಿಗೆ ಹೋಲಿಕೆ ಮಾಡುತ್ತಿದ್ದಾರೆ. ನಾನು ಇದನ್ನ ಸ್ವೀಕಾರ ಮಾಡುವೆ, ಏಕೆಂದರೆ ಶಿವನ ಕೊರಳಲ್ಲಿ ಇರುವುದು ಇದೇ ನಾಗಸರ್ಪ. ನನಗೆ ಈ ದೇಶದ ಜನತೆಯೇ ಈಶ್ವರ ಸ್ವರೂಪಿ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪಿಎಂ ನಮೋ ಪ್ರತ್ಯುತ್ತರ ನೀಡಿದ್ದಾರೆ.

Written by - Krishna N K | Last Updated : Apr 30, 2023, 06:11 PM IST
  • ನನ್ನನ್ನ ಅವರು ಹಾವುವಿಗೆ ಹೋಲಿಕೆ ಮಾಡುತ್ತಿದ್ದಾರೆ.
  • ನಾನು ಇದನ್ನ ಸ್ವೀಕಾರ ಮಾಡುತ್ತೇನೆ.
  • ಏಕೆಂದರೆ ಶಿವನ ಕೊರಳಲ್ಲಿ ಇರುವುದು ಇದೇ ನಾಗಸರ್ಪ.
ನನ್ನ ಜನರೇ ನನಗೆ ʼಈಶ್ವರ ಸ್ವರೂಪಿʼ, ನಾನು ಅವರ ಕೊರಳಲ್ಲಿರುವ ʼನಾಗ ಸರ್ಪʼ..! title=

ಕೋಲಾರ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ವಿಷ ಸರ್ಪ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ನನ್ನನ್ನ ಅವರು ಹಾವುವಿಗೆ ಹೋಲಿಕೆ ಮಾಡುತ್ತಿದ್ದಾರೆ. ನಾನು ಇದನ್ನ ಸ್ವೀಕಾರ ಮಾಡುತ್ತೇನೆ. ಏಕೆಂದರೆ ಶಿವನ ಕೊರಳಲ್ಲಿ ಇರುವುದು ಇದೇ ನಾಗಸರ್ಪ. ನನಗೆ ಈ ದೇಶದ ಜನತೆಯೇ ಈಶ್ವರ ಸ್ವರೂಪಿ ಎಂದು ಟಾಂಗ್‌ ನೀಡಿದರು. 

ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪಿಎಂ ಮೋದಿ, ಭ್ರಷ್ಟಾಚಾರದ ವಿರುದ್ದ ನಾನು ಹೋರಾಟ ಮಾಡುತ್ತಿದ್ದೆನೆ. ಇದರಿಂದ ತೊಂದರೆಯಾಗಿರಯವುದು ಕಾಂಗ್ರೇಸ್ ನವರಿಗೆ. ಹೀಗಾಗಿ ನನ್ನ ಮೇಲೆ ಅವರಿಗೆ ಸಿಟ್ಟು, ಇದರಿಂದ ನನ್ನ ವಿರುದ್ದ ಆರೋಪಗಳನ್ನ ಮಾಡೋಕೆ ಮುಂದಾಗಿದ್ದಾರೆ. ಇದೀಗ ನನಗೆ ಬೆದರಿಕೆ ಹಾಕಲು ಮುಂದಾಗಿದ್ದಾರೆ. ನಿಮ್ಮ ಸಮಾಧಿಗೆ ಹಳ್ಳ ತೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಅಭಿವೃದ್ದಿ ಬಗ್ಗೆ ಚರ್ಚೆ ಮಾಡುವುದು ಬಿಟ್ಟು. ಅವರು ಹಾವು, ಹಾವಿನ ವಿಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ:ಚುನಾವಣೆ ಹಿನ್ನೆಲೆ ಅಕ್ರಮ: 40 ಅಕ್ಕಿ ಪಾಕೇಟ್ ವಶಕ್ಕೆ

ಅಲ್ಲದೆ, ಕಾಂಗ್ರೆಸ್ಸಿಗರು ನನ್ನನ್ನು ಹಾವಿಗೆ ಹೋಲಿಕೆ ಮಾಡುತ್ತಿದ್ದಾರೆ. ನಾನು ಇದನ್ನ ಸ್ವೀಕಾರ ಮಾಡುವೆ, ಏಕೆಂದರೆ ಶಿವನ ಕೊರಳಲ್ಲಿ ಇರುವುದು ಇದೇ ನಾಗಸರ್ಪ. ನನಗೆ ಈ ದೇಶದ ಜನತೆಯೇ ಈಶ್ವರ ಸ್ವರೂಪಿ. ನಾನು ಹಾವಾಗಿ ಅವರ ಕೊರಳನ್ನ ಸುತ್ತಿಕೊಳ್ಳಲು ಯಾವ ದುಖವೂ ಇಲ್ಲ‌. ಈ ರೀತಿಯ ಮಾತುಗಳನ್ನು ಕರ್ನಾಟಕ ಜನತೆ ಎಂದಿಗೂ ಖಂಡಿತ ಕ್ಷಮಿಸೋಲ್ಲ. ಜನರ ಮನಸ್ಸಲ್ಲಿ ಆಕ್ರೋಶ, ಸಿಟ್ಟಿದೆ ಅದನ್ನ ಮೇ10 ರಂದು ಅದನ್ನ ಬಿಜೆಪಿಗೆ ಮತ ಚಲಾವಣೆ ಮಾಡುವುದರೊಂದಿಗೆ ವ್ಯಕ್ತಪಡಿಸುತ್ತಾರೆ‌ ಎಂದರು.

ಕಾಂಗ್ರೆಸ್‌ಗೆ ಭ್ರಷ್ಟಾಚಾರದ ವಿರುದ್ಧ ಯಾವುದೇ ಕಾರ್ಯಕ್ರಮ ಮಾಡೋಕೆ ಸಾಧ್ಯ ಆಗೋಲ್ಲ. ಯಾಕಂದ್ರೆ ಅವರ ಕೈಗೊಳ್ಳುವ ಪ್ರತಿಯೊಂದು ಯೋಜನೆಯಲ್ಲಿ ಭ್ರಷ್ಟಾಚಾರ ಇದೆ‌. ಸಾವಿರಾರು ಕೋಟಿ ನುಂಗಿರುವ ಹಗರಣದಲ್ಲಿ ಬೇಲ್ ಮೇಲೆ ಇದ್ದಾರೆ.  ಇಂತಹ ವ್ಯಕ್ತಿಗಳು ಭ್ರಷ್ಟಾಚಾರದ ವಿರುದ್ಧ ಯಾವ ಕಾರ್ಯಕ್ರಮ ಮಾಡಲು ಸಾಧ್ಯ. 
2014 ಮುಂಚೆ ಒಂಬತ್ತು ವರ್ಷ ಕಾಂಗ್ರೆಸ್‌ ಸರ್ಕಾರ ಇತ್ತು. ಆಸಮಯದಲ್ಲಿ ಭ್ರಷ್ಟಾಚಾರಿಗಳನ್ನ ಹಿಡಿದಯ ಅವರು ವಸೂಲಿ ಮಾಡಿರುವುದು 5 ಸಾವಿರ ಕೋಟಿ. ನಾವು ಅಧಿಕಾರಕ್ಕೆ ಬಂದ ನಂತರ ಒಂದು ಲಕ್ಷ ಕೋಟಿ ರೂಪಾಯಿ ವಸೂಲಿ ಮಾಡಿದ್ದೇವೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ:ಮೋದಿ ಅವರು ತಮ್ಮ ವಿರುದ್ಧದ ಟೀಕೆಗಳ ಲೆಕ್ಕ ನೀಡುವ ಬದಲು ರಾಜ್ಯಕ್ಕೆ ಕೊಟ್ಟ ಕೊಡುಗೆಗಳ ಲೆಕ್ಕ ನೀಡಲಿ- ಡಿ.ಕೆ.ಶಿವಕುಮಾರ್

ಅಲ್ಲದೆ, ಕಾಂಗ್ರೆಸ್‌ ಸರ್ಕಾರದ ವಂಚನೆಗೆ ಹೆಚ್ಚು ಒಳಗಾದವರು ಎಸ್.ಸಿ- ಎಸ್ಟಿ, ಓಬಿಸಿ ಹಾಗೂ ಮಹಿಳಾ ವರ್ಗದವರು. ನಮ್ಮ‌ ಸರ್ಕಾರ ಬಂದ ನಂತರ, ಕೋಟ್ಯಾಂತರ ಮನೆಗಳನ್ನ ನೀಡಿದ್ದೇವೆ. ಹತ್ತು ಕೋಟಿಗೂ ಹೆಚ್ಚು ಮನೆಗಳಿಗೆ ಶೌಚಾಲಯ ಕಟ್ಟಿಸಿದ್ದೇವೆ. 9 ಕೋಟಿ ಮಹಿಳೆಯರಿಗೆ ಉಚಿತವಾಗಿ ಅಡುಗೆ ಅನಿಲವನ್ನ ನೀಡಿದ್ದೇವೆ. 
2.5 ಕೋಟಿ ಮನೆಗಳಿಗೆ ನೇರವಾಗಿ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಮಾಡಿದ್ದೇವೆ. ಕಾಂಗ್ರೆಸ್‌ ರಾಜ್ಯ ಪರಿವಾರ ಸುಳ್ಳು ಭರವಸೆ ಕೊಡುವಂತಹದ್ದು ಎಂದು ನಮೋ ಗುಡಿಗಿದರು.

ಕಾಂಗ್ರೇಸ್‌ನವರು ಸುಳ್ಳು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಇದು ಯಾವತ್ತೂ ಸಹ ಆಗಿಲ್ಲ, 2005 ರಲ್ಲಿ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಕೊಟ್ಟರು. ಪ್ರತಿಯೊಂದು ಹಳ್ಳಿಗೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದಿದ್ದರು. ಆದರೆ ಈ ಒಂದು ಗ್ಯಾರಂಟಿ ಕೊಟ್ಟಿದ್ದರ ಕಡೆ ಗಮನವೇ ಇಲ್ಲ. ನಾವು ಅಧಿಕಾರಕ್ಕೆ ಬಂದಾಗ ಕಾಂಗ್ರೇಸ್ ಮಾಡಿರುವ ಸ್ಥಿತಿ ಸರಿಯಿರಲಿಲ್ಲ‌. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿರಲಿಲ್ಲ‌. ಒಂದು ಸಾವಿರ ದಿನದಲ್ಲಿ ನಾವು 18 ಸಾವಿರ ಮನೆಗಳಿಗೆ ವಿದ್ಯುತ್ ತಲುಪಿಸಿದ್ದೇವೆ. ಅವರ ಗ್ಯಾರಂಟಿಯನ್ನ ಪೂರ್ಣ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಅವರ ಗ್ಯಾರಂಟಿ ಕಾರ್ಡ್ ಬಗ್ಗೆ ವಿಶ್ವಾಸ ನಂಬಿಕೆ ಇಲ್ಲ ಬರೀ ಮೋಸ ಮಾಡುವುದು ಕಲಿತಿದ್ದಾರೆ ಎಂದು ನರೇಂದ್ರ ಮೋದಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಮುಂದಾದ ಸ್ಯಾಂಡಲ್‌ವುಡ್ ಸ್ಟಾರ್ಸ್, ಯಾರ್ಯಾರು ಗೊತ್ತಾ?

ಇನ್ನೋಂದು ಕಾಂಗ್ರೆಸ್‌ ಆಶ್ವಾಸನೆ ಅಂದ್ರೆ, 2004 ರಲ್ಲಿ ಘೋಷಣಾ ಪತ್ರವನ್ನ ನೀಡಿದ್ದರು‌‌. ಈ ದೇಶದ ರೈತರಿಗೆ ನೇರ ವರಮಾನ ಸಹಾಯಕ ಯೋಜನೆ ನೀಡುವುದಾಗಿ ಹೇಳಿದ್ದರು. 2009 ರಲ್ಲಿ ಇದೇ ಘೋಷಣಾ ಪತ್ರವನ್ನೆ ಮರಳಿ ಹೇಳಿದ್ರು, ಆದರೆ ಯಾವುದೇ ಯೋಜನೆ ಜಾರಿಗೆ ತರಲಿಲ್ಲ. 2014 ರಲ್ಲಿ ನಾವು ಕಿಸಾನ್ ಸಮ್ಮಾನ್ ಯೋಜನೆಯನ್ನ ಜಾರಿಗೆ ತಂದೆವು. ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಿದೆವು. 2.5 ಲಕ್ಷ ಕೋಟಿ ಜಮಾ ಆಗಿದೆ. ಗ್ಯಾರಂಟಿ ಕೊಟ್ಟಿದ್ದು ಕಾಂಗ್ರೆಸ್‌, ಇದನ್ನ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಜನರಿಗೆ ಆಶ್ವಾಸನೆ ಮೋಸ ಕಾಂಗ್ರೇಸ್ ಮಾಡುತ್ತಿದೆ, ಜನರ ಆಶ್ವಾಸನೆಗೆ ಸಹಕಾರ ಬಿಜೆಪಿ ನೀಡುತ್ತಿದೆ ಎಂದು ಪಿಎಂ ಮೋದಿ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.