Match Highlights: ಐಪಿಎಲ್ ಸೀಸನ್’ನಿಂದ ಡೆಲ್ಲಿ ಕ್ಯಾಪಿಟಲ್ಸ್ ಔಟ್! ಟ್ರೋಫಿ ಕನಸು ಹೈದರಾಬಾದ್’ಗೆ ಜೀವಂತ

Delhi Capitals vs Sunrisers Hyderabad Highlights: ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡ ನಿಗದಿತ 20 ಓವರ್‌ ಗಳಲ್ಲಿ 6 ವಿಕೆಟ್‌ ಗೆ 197 ರನ್ ಗಳಿಸಿತು. ಇದಾದ ಬಳಿಕ ಡೆಲ್ಲಿ ತಂಡ 6 ವಿಕೆಟ್‌ ಗೆ 188 ರನ್ ಗಳಿಸಿ 9 ರನ್‌ಗಳಿಂದ ಸೋಲನುಭವಿಸಿತು.

Written by - Bhavishya Shetty | Last Updated : Apr 30, 2023, 06:13 AM IST
    • ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯ
    • ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು
    • ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದು ಬಹುತೇಕ ಅಸಾಧ್ಯವಾಗಿದೆ
Match Highlights: ಐಪಿಎಲ್ ಸೀಸನ್’ನಿಂದ ಡೆಲ್ಲಿ ಕ್ಯಾಪಿಟಲ್ಸ್ ಔಟ್! ಟ್ರೋಫಿ ಕನಸು ಹೈದರಾಬಾದ್’ಗೆ ಜೀವಂತ title=
IPL 2023

Delhi Capitals vs Sunrisers Hyderabad Highlights: ಶನಿವಾರದಂದು ನಡೆದ ಐಪಿಎಲ್-2023ರ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ತನ್ನ ಆರನೇ ಸೋಲನ್ನು ಅನುಭವಿಸಿದೆ. ಡೇವಿಡ್ ವಾರ್ನರ್ ಸಾರಥ್ಯದ ಈ ತಂಡ ಶನಿವಾರ ನಡೆದ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ 9 ರನ್‌ ಗಳಿಂದ ಪರಾಭವಗೊಂಡಿತು. ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದು ಬಹುತೇಕ ಅಸಾಧ್ಯವಾಗಿದೆ.

ಇದನ್ನೂ ಓದಿ: BCCIನಿಂದ ಮಹಾಪ್ರಮಾದ! WTC ಫೈನಲ್’ನಲ್ಲಿ ಈ ಫ್ಲಾಪ್ ಆಟಗಾರನಿಗೆ ಸ್ಥಾನ: ತಂಡಕ್ಕೆ ಮುಳುವಾಗುತ್ತಾ ಈತನ ಆಯ್ಕೆ?

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಏಡನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡ ನಿಗದಿತ 20 ಓವರ್‌ ಗಳಲ್ಲಿ 6 ವಿಕೆಟ್‌ ಗೆ 197 ರನ್ ಗಳಿಸಿತು. ಇದಾದ ಬಳಿಕ ಡೆಲ್ಲಿ ತಂಡ 6 ವಿಕೆಟ್‌ ಗೆ 188 ರನ್ ಗಳಿಸಿ 9 ರನ್‌ಗಳಿಂದ ಸೋಲನುಭವಿಸಿತು. ಪ್ರಸಕ್ತ ಋತುವಿನಲ್ಲಿ 8 ಪಂದ್ಯಗಳಲ್ಲಿ ದೆಹಲಿಯ ಆರನೇ ಸೋಲು ಇದಾಗಿದೆ. ಇನ್ನೊಂದೆಡೆ ಹೈದರಾಬಾದ್ 8 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದೆ. ಈ ಮೂಲಕ 6 ಅಂಕಗಳನ್ನು ಪಡೆದಿದೆ. 10 ತಂಡಗಳ ಪಟ್ಟಿಯಲ್ಲಿ ಡೆಲ್ಲಿ ಕೊನೆಯ ಸ್ಥಾನದಲ್ಲಿದ್ದು, ಹೈದರಾಬಾದ್ ಎರಡು ಸ್ಥಾನ ಮೇಲಿದ್ದು 8ನೇ ಸ್ಥಾನದಲ್ಲಿದೆ.

198 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಇನಿಂಗ್ಸ್‌ ನ ಎರಡನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ ಆಘಾತ ನೀಡಿತು. ಈ ಮೂಲಕ ನಾಯಕ ಡೇವಿಡ್ ವಾರ್ನರ್ (0) ಔಟ್ ಆದರು. ಇದರ ನಂತರ ವಿಕೆಟ್ ಕೀಪರ್ ಫಿಲಿಪ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ ಎರಡನೇ ವಿಕೆಟ್‌’ಗೆ 112 ರನ್ ಸೇರಿಸಿದರು. ಈ ಜೊತೆಯಾಟವನ್ನು ಮಯಾಂಕ್ ಮಾರ್ಕಂಡೇಯ ಬ್ರೇಕ್ ಮಾಡಿದರು. ಅವರು ಇನ್ನಿಂಗ್ಸ್‌ ನ 12 ನೇ ಓವರ್‌ ನ ಎರಡನೇ ಎಸೆತದಲ್ಲಿ ಸಾಲ್ಟ್‌ ಗೆ ಕ್ಯಾಚ್ ನೀಡಿದರು. ಸಾಲ್ಟ್ 35 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ 59 ರನ್ ಗಳಿಸಿದರು.

ಇದಾದ ಬಳಿಕ ಡೆಲ್ಲಿ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಬೀಳುತ್ತಲೇ ಇದ್ದವು. ಹೈದರಾಬಾದ್ ಪರ ಮಯಾಂಕ್ ಮಾರ್ಕಂಡೇಯ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಅಕಿಲ್ ಹುಸೇನ್, ಟಿ ನಟರಾಜನ್ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: WTC Final: ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: WTC ಫೈನಲ್’ಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ MS Dhoni!

ಇದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಹಾಗೂ ಹೆನ್ರಿಚ್ ಕ್ಲಾಸೆನ್ ಅರ್ಧಶತಕ ಬಾರಿಸಿದ್ದರು. ಅಭಿಷೇಕ್ ಆರಂಭಿಕರಾಗಿ ಇಳಿದು 36 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ ನಿಂದ 67 ರನ್ ಗಳಿಸಿದರು. ಕ್ಲಾಸೆನ್ 27 ಎಸೆತಗಳಲ್ಲಿ 53 ರನ್ ಗಳಿಸಿ ಅಜೇಯರಾಗಿ ಮರಳಿದರು. 2 ಬೌಂಡರಿ ಮತ್ತು 4 ಸಿಕ್ಸರ್‌ ಗಳನ್ನು ಬಾರಿಸಿದ್ದರು. ಅಬ್ದುಲ್ ಸಮದ್ 21 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 28 ರನ್ ಸೇರಿಸಿದರು. ಡೆಲ್ಲಿ ಪರ ಮಿಚೆಲ್ ಮಾರ್ಷ್ 4 ಓವರ್ ಗಳಲ್ಲಿ 27 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ಅನುಭವಿ ವೇಗಿ ಇಶಾಂತ್ ಶರ್ಮಾ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News