Rahu-Guru Yuti 2023: 36 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ರಾಹು-ಗುರು ಮೈತ್ರಿ, 7 ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ!

Rahu-Guru Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, 36 ವರ್ಷಗಳ ಸುದೀರ್ಘ ಅವಧಿಯ ಬಳಿಕ, ಮೇಷ ರಾಶಿಯಲ್ಲಿ ಗುರು ಮತ್ತು ರಾಹುವಿನ ಮೈತ್ರಿ ನೆರವೇರಲಿದೆ. ಜ್ಯೋತಿಷ್ಯದಲ್ಲಿ, ಬೃಹಸ್ಪತಿಗೆ ದೇವಗುರುವಿನ ಸ್ಥಾನಮಾನ ನೀಡಲಾಗಿದೆ, ಆದರೆ ರಾಹುವನ್ನು ಛಾಯಾ ಗ್ರಹ  ಮತ್ತು ದುಷ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಆದರೆ, ಜಾತಕದಲ್ಲಿ ಗುರು ಮತ್ತು ರಾಹು ಸ್ಥಾನಕ್ಕೆ ಅನುಗುಣವಾಗಿಯೇ ವ್ಯಕ್ತಿ ಶುಭ ಅಶುಭ ಪಃಲಿತಾಂಶಗಳನ್ನು ಪಡೆಯುತ್ತಾನೆ. ಮೇಷ ರಾಶಿಯಲ್ಲಿ ಈ ಎರಡು ಪ್ರಮುಖ ಗ್ರಹಗಳ ಮೈತ್ರಿ ತುಂಬಾ ವಿಶೇಷ ಮತ್ತು ಒಂದು ಪ್ರಮುಖ ಮೈತ್ರಿ ಎಂದು ಪರಿಗಣಿಸಲಾಗುತ್ತದೆ.  

Written by - Nitin Tabib | Last Updated : Apr 29, 2023, 01:33 PM IST
  • ಒಂದೆಡೆ ಗುರುವನ್ನು ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಿದರೆ, ಮತ್ತೊಂದೆಡೆ ರಾಹುವನ್ನು
  • ಗೊಂದಲ, ಅನುಮಾನ, ಸಂದೇಹ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ.
  • ಇಂತಹ ಪರಿಸ್ಥಿತಿಯಲ್ಲಿ ಮೇಷ, ಮಿಥುನ, ಸಿಂಹ, ತುಲಾ, ಧನು, ಕುಂಭ, ಮತ್ತು ಮೀನ ರಾಶಿಯ ಜನರು ಈ ಮೈತ್ರಿಯ ಸಕಾರಾತ್ಮಕ ಲಾಭಗಳು ಸಿಗಲಿವೆ.
Rahu-Guru Yuti 2023: 36 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ರಾಹು-ಗುರು ಮೈತ್ರಿ, 7 ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ! title=
ರಾಹು-ಗುರು ಯುತಿ 2023

Jupiter-Rahu Conjunction 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 36 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇವಗುರು ಗುರು ಮತ್ತು ಛಾಯಾ ಗ್ರಹ ರಾಹುವಿನ ಈ ಮೈತ್ರಿ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ವಿಶೇಷ ಪರಿಣಾಮ ಬೀರುವುದು ಸಹಜ. ಹಾಗೆ ನೋಡಿದರೆ ಈ ಮೈತ್ರಿ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಇದರ ಪ್ರಭಾವಕ್ಕೆ ಎಲ್ಲಾ ದ್ವಾದಶ ರಾಶಿಗಳು ಬರುತ್ತವೆ. ಜ್ಯೋತಿಷ್ಯದಲ್ಲಿ, ಗುರು ಮತ್ತು ರಾಹು ಗ್ರಹಗಳಿಗೆ ತುಂಬಾ ವಿಶೇಷ ಸ್ಥಾನಮಾನವಿದೆ.  ಆದಾಗ್ಯೂ, ಈ ಗ್ರಹಗಳ ಸಂಯೋಜನೆಯು ತುಂಬಾ ಅಶುಭ ಚಂಡಾಲ ಯೋಗವನ್ನು ಸೃಷ್ಟಿಸುತ್ತದೆ. ಒಂದೆಡೆ ಗುರುವನ್ನು ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಿದರೆ, ಮತ್ತೊಂದೆಡೆ ರಾಹುವನ್ನು ಗೊಂದಲ, ಅನುಮಾನ, ಸಂದೇಹ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೇಷ, ಮಿಥುನ, ಸಿಂಹ, ತುಲಾ, ಧನು, ಕುಂಭ, ಮತ್ತು ಮೀನ ರಾಶಿಯ ಜನರು ಈ ಮೈತ್ರಿಯ ಸಕಾರಾತ್ಮಕ ಲಾಭಗಳು ಸಿಗಲಿವೆ.
 
ಮೇಷ ರಾಶಿ- ಗುರು-ರಾಹುವಿನ ಈ ಸಂಯೋಗವು ಮೇಷ ರಾಶಿಯ ಜನರ ಲಗ್ನ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ, ಹೀಗಾಗಿ ನಿಮ್ಮ ಆರೋಗ್ಯದಲ್ಲಿ ಉತ್ತಮ ಮತ್ತು ಶುಭ ಫಲಿತಾಂಶಗಳು ಕಂಡುಬರಲಿವೆ. ಉದ್ಯೋಗಿಗಳ ಕೆಲಸದ ಸ್ಥಳದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ಕಾಣಬಹುದು. ಕೌಟುಂಬಿಕ ವಿಚಾರದಲ್ಲಿ ಶುಭ ಫಲಿತಾಂಶಗಳನ್ನು ಪಡೆಯುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. 

ಮಿಥುನ ರಾಶಿ- ಸಂತಾನದ ವಿಷಯದಲ್ಲಿ ಈ ಅವಧಿ ಸಾಕಷ್ಟು ಪ್ರಗತಿಪರವಾಗಿದೆ.ಅವಿವಾಹಿತರಿಗೆ ಸೂಕ್ತ ಸಂಗಾತಿಯ ಜೊತೆಗೆ ವಿವಾಹ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆರ್ಥಿಕ ಲಾಭದ ಪ್ರಬಲ ಸಾಧ್ಯತೆಗಳಿವೆ. ಇದರೊಂದಿಗೆ, ಆರೋಗ್ಯದಲ್ಲಿ ಅನುಕೂಲಕರ ಬದಲಾವಣೆಗಳು ಕಂಡುಬರುತ್ತವೆ. 

ಸಿಂಹ ರಾಶಿ- ಸಿಂಹ ರಾಶಿಯವರ ಆರೋಗ್ಯ ಸುಧಾರಿಸಲಿದೆ. ನಿಮ್ಮ ಮಕ್ಕಳ ವಿಷಯದಲ್ಲಿ ಪ್ರಗತಿಯ ಲಕ್ಷಣಗಳಿವೆ. ಮದುವೆಯಾಗಲು ಬಯಸುವ ಅಥವಾ ಕುಟುಂಬವನ್ನು ವೃದ್ಧಿಸಲು ಬಯಸುವ ಈ ರಾಶಿಯ ಜನರಿಗೆ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ.

ತುಲಾ ರಾಶಿ- ಈ ಸಮಯದಲ್ಲಿ, ನಿಮ್ಮ ಜೀವನದಿಂದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳು ದೂರವಾಗುತ್ತವೆ. ನೀವು ಮದುವೆಯಾಗಲು ಯೋಜಿಸುತ್ತಿದ್ದರೆ, ಈ ಅವಧಿಯಲ್ಲಿ ನೀವು ಶುಭ ಪ್ರಸ್ತಾಪವನ್ನು ಪಡೆಯಬಹುದು. ನೀವು ದೊಡ್ಡ ನಿರ್ಧಾರ ಅಥವಾ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಬಯಸಿದರೆ, ಸಾಕಷ್ಟು ಯೋಚಿಸಿ, ಗುರುಹಿರಿಯರು ಅಥವಾ ಬಲ್ಲವರ ಸಲಹೆ ಪಡೆದ ನಂತರವೇ ಒಂದು ಹೆಜ್ಜೆ ಮುಂದಕ್ಕೆ ಇರಿಸಿ.

ಧನು ರಾಶಿ- ಧನು ರಾಶಿಯವರ ಜೀವನದಲ್ಲಿ ಈ ಅವಧಿಯಲ್ಲಿ ಮಾನಸಿಕ ಸ್ಥಿತಿ ಮತ್ತು ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ಉದ್ಯೋಗಸ್ಥರ ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ಜೀವನ ಅದ್ಭುತವಾಗಿರುತ್ತದೆ.

ಕುಂಭ ರಾಶಿ- ಮದುವೆಯಾಗಲು ಯೋಜಿಸುತ್ತಿರುವ ಮತ್ತು ಸಂತಾನ ಭಾಗ್ಯ ಪಡೆಯಲು ಬಯಸುವವರೆಗೆ ಈ ಅವಧಿಯಲ್ಲಿ ಶುಭ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಒಟ್ಟಾರೆಯಾಗಿ ಈ ಸಮಯ ಕುಂಭ ರಾಶಿಯ ಜಾತಕದವರ ಪಾಲಿಗೆ ಸಾಕಷ್ಟು ಅನುಕೂಲಕರವಾಗಿರಲಿದೆ. ಈ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ವಿದ್ಯಾರ್ಥಿಗಳಿಗೆ ಸಮಯ ಉತ್ತಮವಾಗಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆವಹಿಸಿ.

ಇದನ್ನೂ ಓದಿ-Zodiac Signs: ಈ ರಾಶಿಗಳ ಹುಡುಗಿಯರನ್ನು ತಾಯಿ ಲಕ್ಷ್ಮಿಯ ರೂಪ ಎಂದು ಭಾವಿಸಲಾಗುತ್ತದೆ!

ಮೀನ ರಾಶಿ- ಮೀನ ರಾಶಿಯ ಜನರು ಆರ್ಥಿಕ ವೇದಿಕೆ, ಶಿಕ್ಷಣ ಇತ್ಯಾದಿಗಳಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಧರ್ಮ ಮತ್ತು ಆಧ್ಯಾತ್ಮಿಕತೆಯತ್ತ ನಿಮ್ಮ ಒಲವು ಹೆಚ್ಚಾಗಲಿದೆ. 

ಇದನ್ನೂ ಓದಿ-Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News