Shukra Gochar: ಮೇ ತಿಂಗಳಿನಲ್ಲಿ ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ

                                   

Shukra Gochar Bad Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸುಖ-ಸಂಪತ್ತು, ಐಷಾರಾಮಿ ಜೀವನಕಾರಕ ಎಂದು ಹೇಳಲಾಗುತ್ತದೆ. ಆದಾಗ್ಯೂ ಶುಕ್ರನು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾರೆ ಜೀವನವೂ ಸಹ ಏರುಪೇರುಗಳಿಂದ ಕೂಡಿರುತ್ತದೆ ಎನ್ನಲಾಗುತ್ತದೆ. ಇದೀಗ ಅತಿ ಶೀಘ್ರದಲ್ಲಿ ಎಂದರೆ 02 ಮೇ 2023ರಂದು ಶುಕ್ರನು ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದನ್ನು ಕೆಲವು ರಾಶಿಯವರಿಗೆ ಕೆಟ್ಟ ಸಮಯ ಎಂದು ಹೇಳಲಾಗುತ್ತಿದೆ. ಹಾಗಾಗಿ, ಮೇ ತಿಂಗಳಿನಲ್ಲಿ ಶುಕ್ರ ರಾಶಿ ಪರಿವರ್ತನೆ ಬಳಿಕ ಕೆಲವು ರಾಶಿಯವರು ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶುಕ್ರನನ್ನು ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಆದರೂ, ವ್ಯಕ್ತಿಯ ಜಾತಕದಲ್ಲಿ ಶುಕ್ರನು ಅಶುಭ ಸ್ಥಾನದಲ್ಲಿದ್ದರೆ ಅಮಂಗಳಕರ ಫಲಗಳನ್ನೇ ನೀಡುತ್ತಾನೆ. ಇದೀಗ 02 ಮೇ 2023ರಂದು ಶುಕ್ರ ರಾಶಿ ಪರಿವರ್ತನೆ ಹೊಂದಿ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದ್ದಾನೆ. ಮಿಥುನ ರಾಶಿಗೆ ಶುಕ್ರನ ಪ್ರವೇಶದ ಬಳಿಕ ಯಾವ ರಾಶಿಯವರು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ತಿಳಿಯಿರಿ. 

2 /5

ಶುಕ್ರನ ರಾಶಿ ಪರಿವರ್ತನೆಯು ವೃಷಭ ರಾಶಿಯವರ ಆತ್ಮ ವಿಶ್ವಾಸವನ್ನು ಕುಗ್ಗಿಸಬಹುದು. ಈ ಸಮಯದಲ್ಲಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿದೆ. ಇದರಿಂದ ನಿಮ್ಮ ಆರೋಗ್ಯವೂ ಹದಗೆಡಬಹುದು. ದುಂದು ವೆಚ್ಚಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಭಾರೀ ಆರ್ಥಿಕ ಸಮಸ್ಯೆಗಳು ಎದುರಾಗಬಹುದು, ಎಚ್ಚರದಿಂದಿರಿ. 

3 /5

ಸಿಂಹ ರಾಶಿಯವರಿಗೆ ಶುಕ್ರನ ಸಂಚಾರದಿಂದ ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ಪಿತೃ ಸಮಾನರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದಾಗ್ಯೂ, ನಿಮ್ಮ ಕೋಪಕ್ಕೆ ಕಡಿವಾಣ ಹಾಕದಿದ್ದರೆ ಸಮಸ್ಯೆಗಳು ಇನ್ನೂ ಬಿಗಡಾಯಿಸಬಹುದು. 

4 /5

ಮೇ ತಿಂಗಳಿನಲ್ಲಿ ಮಿಥುನ ರಾಶಿಗೆ ಶುಕ್ರನ ಸಂಚಾರವು ವೃಶ್ಚಿಕ ರಾಶಿಯವರಿಗೂ ಕೂಡ ಅಷ್ಟು ಶುಭ ಎಂದು ಹೇಳಲಾಗುವುದಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಮಾತಿನ ಮೇಲೆ ಸಂಯಮವನ್ನು ಕಾಯ್ದುಕೊಳ್ಳುವುದು ತುಂಬಾ ಅಗತ್ಯ. ನಿರೀಕ್ಷಿತ ಫಲಿತಾಂಶಗಳಿಗಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡಿ. ಖಂಡಿತ ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ. 

5 /5

ಶುಕ್ರ ರಾಶಿ ಪರಿವರ್ತನೆ ಮಕರ ರಾಶಿಯವರಿಗೂ ಕೂಡ ಮಂಗಳಕರವಾಗಿಲ್ಲ. ಈ ಸಮಯದಲ್ಲಿ ಆತ್ಮವಿಶ್ವಾಸದಿಂದಿರಿ. ಆದರೆ, ಅತಿಯಾದ ಆತ್ಮವಿಶ್ವಾಸವು ನಿಮ್ಮ ಕೆಲಸಕ್ಕೆ ಧಕ್ಕೆ ತರಬಹುದು. ನಿಮ್ಮ್ ಪೋಷಕರ ಆರೋಗ್ಯದ ವಿಷಯದಲ್ಲಿ ಹೆಚ್ಚು ಹಣ ಖರ್ಚಾಗಬಹುದು.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.