Red Sandal Benefits: ದೇವರನ್ನು ಪೂಜಿಸುವಾಗ ಕೆಂಪು ಚಂದನದಿಂದ ತಿಲಕ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ದೇವರು ಬಹುಬೇಗ ಪ್ರಸನ್ನನಾಗುತ್ತಾನೆ ಮತ್ತು ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ. ಎಂದು ಹೇಳಲಾಗುತ್ತದೆ. ಇಂದು ನಾವು ನಿಮಗೆ ರಕ್ತ ಚಂದನಕ್ಕೆ ಸಂಬಂಧಿಸಿದ 5 ಪರಿಹಾರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅವುಗಳನ್ನು ಅನುಸರಿಸಿದರೆ ನಿಮ್ಮ ಅದೃಷ್ಟ ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಆ ಉಪಾಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ
ಪ್ರಾಣ ದೇವರಿಗೆ ಕೆಂಪು ಚಂದನದಿಂದ ತಿಲಕವಿಡಿ
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೇವರನ್ನು ಪೂಜಿಸುವಾಗ, ಮುಖ್ಯ ಪ್ರಾಣನಿಗೆ ಕೆಂಪು ಚಂದನದ ತಿಲಕವನ್ನು ಅನ್ವಯಿಸಿ. ನಂತರ ಅವರನ್ನು ಸಂಪೂರ್ಣ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ ಪೂಜಿಸಿ. ಬಳಿಕ ನಿಮ್ಮ ಹಣೆಯ ಮೇಲೆ ಕೆಂಪು ಚಂದನದಿಂದ ತಿಲಕವನ್ನಿಡಿ. ಇದನ್ನು ಮಾಡುವುದರಿಂದ ಮುಖ್ಯಪ್ರಾಣನ ಕ್ರುಪಾವೃಷ್ಟಿ ನಿಮ್ಮ ಮೇಲಾಗುತ್ತದೆ ಮತ್ತು ಮನೆಯು ಸಂತೋಷದಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.
ನಿಮ್ಮ ಆದಾಯವು ವೇಗವಾಗಿ ಹೆಚ್ಚಾಗಲು ನೀವು ಬಯಸುತ್ತಿದ್ದರೆ, ಹಳದಿ ದಾರದಲ್ಲಿ 9 ಗೋಪಿ ಶ್ರೀಗಂಧವನ್ನು ಕಟ್ಟಿ ಗುರುವಾರ ಬಾಳೆ ಮರಕ್ಕೆ ನೇತುಹಾಕಿ. ಈ ಪರಿಹಾರವು ಆದಾಯವನ್ನು ಹೆಚ್ಚಿಸುತ್ತದೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಸಾಲಬಾಧೆಯಿಂದ ಮುಕ್ತಿಗಾಗಿ ಈ ಉಪಾಯ ಮಾಡಿ
ಒಂದು ವೇಳೆ ನೀವೂ ಕೂಡ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಸಾಲದ ಹೊರೆ ಕಡಿಮೆಯಾಗುತ್ತಿಲ್ಲ ಎಂದರೆ, ಮಂಗಳವಾರದಂದು ಕೆಂಪು ಗುಲಾಬಿಗೆ ಕೆಂಪು ಚಂದನವನ್ನು ಬೆರೆಸಿ ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ. ಇದರ ನಂತರ, ಆ ಬಟ್ಟೆಯನ್ನು ತಾಯಿ ಲಕ್ಷ್ಮಿಯ ವಿಗ್ರಹದ ಮುಂದೆ ಇರಿಸಿ ಮತ್ತು ಅವಳಿಗೆ ಪ್ರದಕ್ಷಿಣೆ ಹಾಕಿ. ನಂತರ ಆ ಬಟ್ಟೆಯನ್ನು ನೀವು ನಿಮ್ಮ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಈ ಉಪಾಯದಿಂದ ಮನೆಯ ಆರ್ಥಿಕ ಬಿಕ್ಕಟ್ಟು ದೂರಾಗುತ್ತದೆ.
ಶನಿಯ ಮಹಾದೆಸೆಯಿಂದ ಬಳಲುತ್ತಿರುವವರು ಕೆಂಪು ಚಂದನದ ಪರಿಹಾರವನ್ನು ಮಾಡಿ ಪ್ರಯೋಜನವನ್ನು ಪಡೆಯಬಹುದು. ಶನಿ ದೆಸೆಯಿಂದ ಪೀಡಿತ ವ್ಯಕ್ತಿಗಳು ಪ್ರತಿದಿನ ಶ್ರೀಗಂಧದ ಮರದಲ್ಲಿ ನೀರನ್ನು ಅರ್ಪಿಸಿದ ಬಳಿಕ ಉಳಿದ ನೀರಿನಿಂದ ಸ್ನಾನ ಮಾಡಬೇಕು. ವಾಸ್ತು ತಜ್ಞರ ಪ್ರಕಾರ, ಈ ಉಪಾಯವನ್ನು 40 ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ, ಶನಿ ದೆಸೆಯ ಪ್ರಭಾವ ಕಡಿಮೆಯಾಗುತ್ತದೆ ಮತ್ತು ನಿಮ್ಮ ಜೀವನವು ಸುಖಮಯವಾಗುತ್ತದೆ.
ಇದನ್ನೂ ಓದಿ-Vastu Tips: ಊಟ ಮಾಡುವಾಗ ವಾಸ್ತು ಶಾಸ್ತ್ರದ ಈ ಸಲಹೆಗಳನ್ನು ಮರೆಯಬೇಡಿ!
ವ್ಯವಹಾರದಲ್ಲಿ ಉನ್ನತಿಗಾಗಿ ಈ ಉಪಾಯ ಅನುಸರಿಸಿ
ಸಾಕಷ್ಟು ಕಷ್ಟಪಟ್ಟು ದುಡಿದರೂ ಕೂಡ ವ್ಯಾಪಾರದಲ್ಲಿ ಯಾವುದೇ ಪ್ರಗತಿ ಕಾಣಿಸದಿದ್ದರೆ, ಗುರುವಾರದಂದು ಮನೆ ಹಾಗೂ ಕೆಲಸದ ಸ್ಥಳದ ಮುಖ್ಯದ್ವಾರದಲ್ಲಿ ಗಂಗಾಜಲ ಮಿಶ್ರಿತ ಕೆಂಪು ಚಂದನ ಮತ್ತು ಅರಿಶಿನವನ್ನು ಸಿಂಪಡಿಸಬೇಕು. ಈ ಉಪಾಯದಿಂದ ದುಷ್ಟ ಶಕ್ತಿಗಳ ಪ್ರವೇಶ ನಿಲ್ಲುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ವ್ಯಾಪಾರ ವೇಗ ಪಡೆದುಕೊಳ್ಳುತ್ತದೆ.
ಇದನ್ನೂ ಓದಿ-Marriage Tips: ಕಂಕಣ ಬಲ ಕೂಡಿಬರುತ್ತಿಲ್ಲವೇ, ಈ ಉಪಾಯ ಟ್ರೈ ಮಾಡಿ ನೋಡಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.