ಬೆಂಗಳೂರು : ಪ್ರಸ್ತುತ ತೆಲುಗಿನ ಆರ್ಯ ಸಿನಿಮಾದಲ್ಲಿ ನಟಿಸುತ್ತಿರುವ 'ಕಿರಿಕ್ ಪಾರ್ಟಿ' ಖ್ಯಾತಿಯ ನಾಯಕಿ ಸಂಯುಕ್ತ ಹೆಗಡೆ, ತೆಲುಗಿನಲ್ಲಿ ರಿಮೇಕ್ ಆಗುತ್ತಿರುವ ಕಿರಿಕ್ ಪಾರ್ಟಿ ಚಿತ್ರದಲ್ಲಿಯೂ ಬಣ್ಣ ಹಚ್ಚಲಿದ್ದಾರೆ. ನಿಖಿಲ್ ಸಿದ್ದಾರ್ಥ್ ಈ ಚಿತ್ರದ ನಾಯಕರಾಗಲಿದ್ದಾರೆ. ಅಷ್ಟೇ ಅಲ್ಲದೆ ತಮಿಳಿನಲ್ಲಿ ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರ ಜೊತೆಗೂ ಸಹ ಹೆಜ್ಜೆ ಹಾಕಲಿದ್ದಾರೆ.
ಕಲಾವಿದರಿಗೆ ಭಾಷೆ ಯಾವುದೇ ಕಾರಣಕ್ಕೂ ಅಡ್ಡಿಯಾಗುವುದಿಲ್ಲ ಎಂದು ಹೇಳಿದ ಸಂಯುಕ್ತ, ಕನ್ನಡ ಚಿತ್ರರಂಗದ ಉತ್ತಮ ಗುನಮತ್ತದಿಂದಾಗಿ ನಮಗೆ ಅನ್ಯ ಭಾಷೆಗಳಲ್ಲೂ ಅವಕಾಶ ದೊರೆಯುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಭುದೇವ ಅವರ ಜೊತೆ ಹೆಜ್ಜೆ ಹಾಕಲು ಹರ್ಷ ವ್ಯಕ್ತಪಡಿಸಿದ ಸಂಯುಕ್ತ, ಅವರಲ್ಲಿರುವ ಡಾನ್ಸ್ ಪ್ರತಿಭೆಯನ್ನು ಗುರುತಿಸಿ ಅವರಿಗೆ ಈ ಅವಕಾಶ ದೊರೆತಿದೆ ಎಂದು ಹೇಳಿದರು. ಪ್ರಭುದೇವ ಅವರ ಜೊತೆ ನಟಿಸುವುದು ನನ್ನ ಕನಸು. ನನ್ನ ಕನಸು ನನಸಾಗುವ ಸಂದರ್ಭ ಈಗ ನನಗೆ ಒದಗಿದೆ. ಅಕ್ಟೋಬರ್ 10ರಿಂದ ಅವರೊಂದಿಗೆ ನಟಿಸುತ್ತಿದ್ದೇನೆ ಎಂಬುದಷ್ಟೇ ನನಗೆ ಗೊತ್ತು ಎಂದು ಹೇಳಿದ್ದಾರೆ.
ಸಂಯುಕ್ತ ಹೆಗಡೆ ಅವರಿಗೆ ದೊರೆಯುತ್ತಿರುವ ಎಲ್ಲಾ ಅವಕಾಶಗಳಿಗೆ ಮೂಲ ಕಾರಣ ಕನ್ನಡ ಚಿತ್ರರಂಗ. ಇದರ ಕ್ರೆಡಿಟ್ ಕನ್ನಡ ಚಿತ್ರರಂಗಕ್ಕೆ ಸಲ್ಲಬೇಕು ಎಂದು ಹೇಳಿದರು.