ರೈತರಿಗಾಗಿ ಮತ್ತೊಂದು ಯೋಜನೆ ಹೊರ ತಂದ ಕೇಂದ್ರ ಸರ್ಕಾರ ! ನೀಡುವುದು 15 ಲಕ್ಷ ರೂಪಾಯಿಗಳ ನೆರವು

PM Kisan FPO Yojana 2023: ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಮೋದಿ ಸರ್ಕಾರವು 'ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ಕೃಷಿ ಉದ್ಯಮ ಆರಂಭಿಸಲು 15 ಲಕ್ಷ ರೂಪಾಯಿಗಳನ್ನು ನೀಡಲಾಗುವುದು. 

Written by - Ranjitha R K | Last Updated : Apr 13, 2023, 01:54 PM IST
  • ರೈತರ ಅಭಿವೃದ್ದಿಗಾಗಿ ಪಿಎಂ ಕಿಸಾನ್ ಯೋಜನೆ
  • 14 ನೇ ಕಂತಿನ ಹಣ ಬಿಡುಗಡೆಗೆ ಸಿದ್ದತೆ
  • ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯೂ ಜಾರಿಯಲ್ಲಿದೆ.
 ರೈತರಿಗಾಗಿ ಮತ್ತೊಂದು ಯೋಜನೆ ಹೊರ ತಂದ ಕೇಂದ್ರ ಸರ್ಕಾರ ! ನೀಡುವುದು 15 ಲಕ್ಷ  ರೂಪಾಯಿಗಳ ನೆರವು  title=

PM Kisan FPO Yojana 2023 : ಪ್ರಧಾನ ಮಂತ್ರಿ ಕಿಸಾನ್ ನಿಧಿಯ 14 ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರಿ ಇಲಾಖೆಗಳು ಸಿದ್ಧತೆ  ನಡೆಸುತ್ತಿವೆ.  ಈ ಕಂತಿನ ಹಣ ಏಪ್ರಿಲ್ ಮತ್ತು ಜುಲೈ ತಿಂಗಳೊಳಗೆ ರೈತರ ಖಾತೆಗೆ ಬರಬೇಕಿದೆ. ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಸರಕಾರದಿಂದ ಹಲವು ಯೋಜನೆಗಳನ್ನು ಕೂಡಾ ಜಾರಿಗೊಳಿಸಲಾಗಿದೆ. ಹೊಸ ಕೃಷಿ ಉದ್ಯಮ ಆರಂಭಿಸಲು ರೈತರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂಪಾಯಿಯನ್ನು ನೀಡಲಾಗುತ್ತಿದೆ.

ಕೃಷಿ ಉದ್ಯಮ ಆರಂಭಿಸಲು ಆರ್ಥಿಕ ನೆರವು  :
ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಮೋದಿ ಸರ್ಕಾರವು 'ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯಡಿ ಕಿಸಾನ್ ಪ್ರೊಡ್ಯುಸರ್ ಆರ್ಗನೈಸೆಶನ್ ಗೆ  15 ಲಕ್ಷ ರೂ. ನೀಡುತ್ತಿದೆ. ಈ ಮೂಲಕ ಹೊಸ ಕೃಷಿ ಉದ್ಯಮ ಆರಂಭಿಸಲು ದೇಶದಾದ್ಯಂತ ರೈತರಿಗೆ ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯ ಲಾಭ ಪಡೆಯಲು 11 ರೈತರು ಒಟ್ಟಾಗಿ ಸಂಘಟನೆಯನ್ನು ರಚಿಸಬೇಕಾಗುತ್ತದೆ.  ಇದರೊಂದಿಗೆ, ರೈತರಿಗೆ ಕೃಷಿ ಉಪಕರಣಗಳು ಅಥವಾ ರಸಗೊಬ್ಬರ, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸುವುದು ಸುಲಭವಾಗುತ್ತದೆ.

ಇದನ್ನೂ ಓದಿ : PPF vs EPF ಎರಡರಲ್ಲಿ ಯಾವುದು ಉತ್ತಮ ನಿವೃತ್ತಿ ಯೋಜನೆ

ಈ ಯೋಜನಗೆ ಅರ್ಜಿ ಸಲ್ಲಿಸುವುದು ಹೇಗೆ ? : 
- ಮೊದಲನೆಯದಾಗಿ ನೀವು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
-ಮುಖಪುಟದಲ್ಲಿ ನೀಡಿರುವ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-ಇಲ್ಲಿ 'ನೋಂದಣಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ  ಫಾರ್ಮ್  ಕಾಣಿಸಿಕೊಳ್ಳುತ್ತದೆ. 
-ಫಾರ್ಮ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ನಮೂದಿಸಿ.
-ಇದರ ನಂತರ, ಪಾಸ್‌ಬುಕ್ ಅಥವಾ ರದ್ದುಪಡಿಸಿದ ಚೆಕ್ ಅಥವಾ ಐಡಿಯನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ.
-ಕೊನೆಯದಾಗಿ  ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

ಈ ರೀತಿ ಲಾಗಿನ್ ಮಾಡಬೇಕಾಗುತ್ತದೆ :
- ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
- ನಂತರ, ಮುಖಪುಟದಲ್ಲಿ ನೀಡಲಾದ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-ಈಗ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-ನಂತರ ಲಾಗಿನ್ ಫಾರ್ಮ್ ನಿಮ್ಮ ಮುಂದೆ ತೆರೆಯುತ್ತದೆ.
-ಅದರಲ್ಲಿ ಬಳಕೆದಾರ ಹೆಸರು ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
 -ಇಷ್ಟಾದ ಮೇಲೆ ಲಾಗಿನ್ ಆಗುತ್ತದೆ. 
 
 ಇದನ್ನೂ ಓದಿ ಕೇವಲ ಡಿಎ ಮಾತ್ರವಲ್ಲ ಈ ಭತ್ಯೆಗಳಲ್ಲಿಯೂ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News