ನ್ಯೂಯಾರ್ಕ್: ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ 21 ನೇ ಶತಮಾನದ ಅಂತ್ಯಕ್ಕೆ ಭೂಮಿಯ ನೀಲಿ ಮೇಲ್ಮೈ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹವಾಮಾನ ಬದಲಾವಣೆಯು ಗಮನಾರ್ಹವಾಗಿ ಫೈಟೋಪ್ಲಾಂಕ್ಟ ಮೇಲೆ ಪರಿಣಾಮ ಬೀರಿದೆ ಇದರಿಂದಾಗಿ ಸಮುದ್ರದಲ್ಲಿನ ಬಣ್ಣ ಬದಲಾವಣೆಗೆ ಕಾರಣವಾಗಿದೆ ಎಂದು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಯನ ತಿಳಿಸಿದೆ. 21ನೇ ಶತಮಾನದ ಅಂತ್ಯದ ವೇಳೆಗೆ ಸಮುದ್ರದ ಶೇ 50 ರಷ್ಟು ಬಣ್ಣದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ " ಎಂದು MIT ನಲ್ಲಿ ಪ್ರಮುಖ ಸಂಶೋಧನಾ ವಿಜ್ಞಾನಿ ಸ್ಟಿಫೇನಿ ಡಟ್ಕಿವಿಸ್ಜ್ ಹೇಳಿದ್ದಾರೆ.
ವಿಭಿನ್ನ ರೀತಿಯ ಫೈಟೊಪ್ಲಾಂಕ್ಟನ್ ಬೆಳಕನ್ನು ಹೀರಿಕೊಳ್ಳುತ್ತವೆ ಮತ್ತು ಹವಾಮಾನ ಬದಲಾವಣೆಯು ಒಂದು ಸಮುದಾಯದ ಫಿಟೊಪ್ಲಾಂಕ್ಟನ್ನನ್ನು ಮತ್ತೊಂದಕ್ಕೆ ಬದಲಾಯಿಸಿದರೆ, ಅದಕ್ಕೆ ಪೂರಕವಾಗಿರುವ ಆಹಾರದ ಜಾಲಗಳ ಪ್ರಕಾರಗಳನ್ನು ಸಹ ಬದಲಾಯಿಸುತ್ತದೆ" ಎಂದು ತಿಳಿಸಿದ್ದಾರೆ.2100 ರ ವೇಳೆಗೆ ಜಾಗತಿಕ ತಾಪಮಾನವು 3 ಡಿಗ್ರಿಯಷ್ಟು ಹೆಚ್ಚಳವಾಗಲಿದೆ.ಈ ಎಲ್ಲ ಕಾರಣದಿಂದ ಭೂಮಿ ಮೇಲ್ಮೈ ನೀಲಿಯ ಭಾಗವು ಬದಲಾಗಲಿದೆ ಎಂದು ಅಧ್ಯಯನ ತಿಳಿಸಿದೆ.