ಭುವನೇಶ್ವರ್: ಒಡಿಶಾದ ಬಸುದೀಪುರ್ ಗ್ರಾಮದ ಕುರುಂಡ ಗ್ರಾಮ ಪಂಚಾಯತ್ನಲ್ಲಿ 68 ವರ್ಷದ ವೃದ್ಧ ಮಹಿಳೆಯೊಬ್ಬರನ್ನು ನಿರ್ದಯವಾಗಿ ಥಳಿಸಿರುವ ಘಟನೆ ಸಂಭವಿಸಿದೆ. ವಯಸ್ಸಾದ ಈ ಮಹಿಳೆಯನ್ನು ಥಳಿಸುವುದು ಮಾತ್ರವಲ್ಲದೆ, ಬಳಿಕ 5 ಗಂಟೆಗಳ ಕಾಲ ಆಕೆಯನ್ನು ಮರಕ್ಕೆ ಕಟ್ಟಲಾಗಿತ್ತು. ನಾಲ್ಕು ತಿಂಗಳುಗಳ ಹಿಂದೆ ಕಾಲಿಹ್ ಗ್ರಾಮದ ಮಹಿಳೆ (ದೀಬಕರ್ ಬಾರಿಕ್) ಬಸುದ್ಬಪುರ್ ನ ಅಭಯ್ ಜೈನ್ ಅವರಿಂದ ಟ್ರ್ಯಾಕ್ಟರ್ ಅನ್ನು ಕೃಷಿಗಾಗಿ ಬಾಡಿಗೆಗೆ ಪಡೆದಿದ್ದರು ಎನ್ನಲಾಗಿದೆ. ಟ್ರಾಕ್ಟರ್ಗಾಗಿ, ದೀಬಕರ್ 540 ರೂ. ಬಾಡಿಗೆಗೆ ಪಾವತಿಸಬೇಕಾಗಿತ್ತು, ಆದರೆ ಆ ಬಾಡಿಗೆ ನೀಡಲು ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ.
ಬಾಡಿಗೆ ಸಿಗದ ಕಾರಣ ಅಸಮಧಾನಗೊಂಡಿದ್ದ ವ್ಯಕ್ತಿ:
ಬಹಳಷ್ಟು ಬಾರಿ ಹೇಳಿದ್ದರೂ, ಟ್ರಾಕ್ಟರ್ನ ಬಾಡಿಗೆಗೆ ಸಿಗದ ನಂತರ ಅಭಯ್ ಅವರು ಬಹಳ ಕೋಪಗೊಂಡಿದ್ದರು. ಅಲ್ಲದೆ ವೃದ್ಧ ಮಹಿಳೆಯಿಂದ ಹಣ ಪಡೆಯಲು ವ್ಯಕ್ತಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಹಣ ನೀಡದ ಕಾರಣ ಒಂದೆರಡು ಬಾರಿ ಹೊಡೆದಿದ್ದರೂ ಎನ್ನಲಾಗಿದೆ. ಅದಾಗ್ಯೂ ಆತನಿಗೆ ಬಾಡಿಗೆ ಸಿಗದ ಕಾರಣ ಆತ ಬಹಳ ಅಸಮಧಾನಗೊಂಡಿದ್ದರು ಎನ್ನಲಾಗಿದೆ.
ಮರದ ಹಲಗೆಯಿಂದ ಹಲ್ಲೆ:
ಬುಧವಾರ ದೀಬಕರ್ ಬಾರಿಕ್ ಅವರು ಅಭಯ್ ಜೈನ್ ಅವರ ಗ್ರಾಮದ ಮುಂದೆ ಹಾದು ಹೋಗುವ ಸಂದರ್ಭದಲ್ಲಿ ಅಭಯ್ ಆಕೆಯ ಮೇಲೆ ಮರದ ಹಲಗೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ಬಳಿಕ ಕುಸಿದು ಬಿದ್ದ ಮಹಿಳೆಯನ್ನು ಅಭಯ್ ಐದು ಘಂಟೆಗಳ ಕಾಲ ಮರಕ್ಕೆ ಕಟ್ಟು ಹಾಕಿದ್ದರು ಎನ್ನಲಾಗಿದೆ. ಈ ಮಾಹಿತಿ ತಿಳಿದೊಡನೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಘಟನೆ ಬಗ್ಗೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.