ಬೆಂಗಳೂರು: ಬೊಮ್ಮಾಯಿ ಅವರ ಸರ್ಕಾರಕ್ಕೆ ನಂದಿನಿ ಉತ್ಪನ್ನಗಳಿಂದ 40% ಕಮಿಷನ್ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಅವರು ನಂದಿನಿಯನ್ನು ಅಮೂಲ್ ಜತೆ ವಿಲೀನಗೊಳಿಸಲು ಮುಂದಾಗಿದೆ" ಎಂದು ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವಕ್ತಾರರಾದ ಗೌರವ್ ವಲ್ಲಭ್ ಮಾತನಾಡಿದ್ದಿಷ್ಟು..
ಕಳೆದ 10 ದಿನಗಳಿಂದ ಬಿಜೆಪಿ ಕರ್ನಾಟಕದ ಅಸ್ಮಿತೆ ಮೇಲೆ ನಿರಂತರ ದಾಳಿ ಮಾಡುತ್ತಲೇ ಬಂದಿದೆ. ಮಹಾರಾಷ್ಟ್ರ ಗಡಿ ಭಾಗದ 865 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ ಜಾರಿ ವಿಚಾರದಿಂದ, ಅಮೂಲ್ ಮೂಲಕ ನಂದಿನಿ ಸಂಸ್ಥೆಯನ್ನು ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇನ್ನು ಸಿಆರ್ ಪಿಎಫ್ ಕಾನ್ಸ್ ಟೇಬಲ್ ನೇಮಕಾತಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವವರೆಗೆ ಪ್ರತಿ ಹಂತದಲ್ಲಿ ಕನ್ನಡಿಗರ ಮೇಲೆ ಅನ್ಯಾಯವಾಗುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಬೊಮ್ಮಾಯಿ ಅವರ ಸರ್ಕಾರ ಹಾಗೂ ಬಿಜೆಪಿ ಸಂಸದರು ಮೌನಕ್ಕೆ ಶರಣಾಗಿದ್ದಾರೆ.
ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ
ಬಿಜೆಪಿಯ ಎಲ್ಲ ನಾಯಕರರು ಮೋದಿ ಹಾಗೂ ಅಮಿತ್ ಶಾ ಅವರ ಷಡ್ಯಂತ್ರದ ಪರವಾಗಿ ನಿಂತಿದ್ದಾರೆಯೇ ಹೊರತು, ನಂದಿನಿ ಸಂಸ್ಥೆ ಹಾಗೂ ರೈತರ ಪರವಾಗಿ ಯಾರೊಬ್ಬರೂ ನಿಲ್ಲುತ್ತಿಲ್ಲ. ನಂದಿನಿ ಸಂಸ್ಥೆ 1 ಲೀಟರ್ ಮೊಸರಿನ ಬೆಲೆ 47 ರೂ. ಇದ್ದರೆ ಅಮೂಲ್ ಸಂಸ್ಥೆಯ ಮೊಸರ ಬೇಲೆ 66 ರೂ. ಇದೆ. ಅಮೂಲ್ ಸಂಸ್ಥೆಯ 66 ರೂ. ನಲ್ಲಿ 40% ಕಮಿಷನ್ ಕಳೆದರೆ ಸಿಗುವ ಮೊತ್ತ 47 ರೂ.
ಬೊಮ್ಮಾಯಿ ಅವರ ಸರ್ಕಾರಕ್ಕೆ ನಂದಿನಿ ಉತ್ಪನ್ನಗಳಿಂದ 40% ಕಮಿಷನ್ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಅವರು ನಂದಿನಿಯನ್ನು ಅಮೂಲ್ ಜತೆ ವಿಲೀನಗೊಳಿಸಲು ಮುಂದಾಗಿದೆ. ಬೊಮ್ಮಾಯಿ ಅವರ ಸರ್ಕಾರಕ್ಕೆ 40% ಮೇಲೆ ಅನೇನು ವ್ಯಾಮೋಹವೋ ಏನೋ, ಈ ಸರ್ಕಾರ 40% ಬಿಡಲು ಸಿದ್ಧವೇ ಇಲ್ಲ. ಇನ್ನು ಬಿಡಿಎಯಲ್ಲಿ ಕಾಮಗಾರಿ ಆಗದಿದ್ದರೂ 40 ಕೋಟಿ ಹಣವನ್ನು ನೀಡಲಾಗಿದೆ. ಈ ಸರ್ಕಾರದ ಭ್ರಷ್ಟಾಚಾರ ಗಿನ್ನಿಸ್ ದಾಖಲೆ ಪುಸ್ತಕ ಸೇರಬೇಕಿದೆ.
ಇದನ್ನೂ ಓದಿ: ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ
ಬಿಜೆಪಿ ಸರ್ಕಾರ ಈ 40ರ ಸಂಖ್ಯೆಗೆ ಎಷ್ಟು ಅಂಟಿಕೊಂಡಿದೆ ಎಂದರೆ ಮೇ 13ರಂದು ರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ 40 ಸ್ಥಾನಗಳಿಗೆ ಕುಸಿಯಲಿದೆ. ಆಮೂಲಕ 40 ಎಂಬ ಅಂಕಿ ಬಿಜೆಪಿ ಜತೆ ಶಾಶ್ವತವಾಗಿ ಉಳಿಯಲಿದೆ.ಬಿಜೆಪಿಯಲ್ಲಿ ಎಲ್ಲರೂ ಮುಖ್ಯಮಂತ್ರಿ ಆಗಬೇಕು ಎಂದು ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ಯಾರೋಬ್ಬರು ಗೃಹ ಮಂತ್ರಿಗಳ ಮುಂದೆ ಧ್ವನಿ ಎತ್ತುವ ಧೈರ್ಯ ತೋರುತ್ತಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ