ಬೆಂಗಳೂರು: ರಾಜ್ಯ ಪೊಲೀಸರ ಮುಕಟಕ್ಕೆ ಮತ್ತೊಂದು ಗರಿ ಬಂದಿದೆ. ನೊಂದು ಬೆಂದು ತಮ್ಮನರಿಸಿ ಬರುವ ಜನರಿಗೆ ನ್ಯಾಯ ಕೊಡಿಸುವುದರಲ್ಲಿ ಕರ್ನಾಟಕ ಪೊಲೀಸರು ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದಾರೆ.
ಹೌದು ತ್ವರಿತ ಗತಿಯಲ್ಲಿ ಕೆಲಸ ಮಾಡಿ ನೊಂದವರಿಗೆ ನ್ಯಾಯ ಒದಗಿಸುವ ರಾಜ್ಯ ಯಾವುದು ಎಂದು ದೇಶದ ಪ್ರತಿಷ್ಟಿತ ಟಾಟಾ ಸಂಸ್ಥೆ ಸರ್ವೇ ನಡೆಸಿತ್ತು. ಈ ಸರ್ವೆಯಲ್ಲಿ ಕರ್ನಾಟಕ ಪೊಲೀಸರು ತ್ವರಿತ ಗತಿಯಲ್ಲಿ ಅಪರಾಧ ಕೃತ್ಯಗಳಿಂದ ಹತಾಶರಾದವರಿಗೆ ನ್ಯಾಯ ಕೊಡಿಸುವಲ್ಲಿ ಸಾಕಷ್ಟು ಸಫಲರಾಗಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿಯಿಂದ ಎಸ್,ಎಲ್ ಭೈರಪ್ಪ, ಸುಧಾಮೂರ್ತಿ ಗೆ ಪದ್ಮಭೂಷಣ ಪ್ರಧಾನ
ಇದಕ್ಕಾಗಿ ಕರ್ನಾಟಕ ಶ್ರಮ ಸಾಕಷ್ಟಿದೆ. ಹೀಗಾಗಿ ಕರ್ನಾಟಕ ಪೊಲೀಸರಿಗೆ 10 ಕ್ಕೆ 6.38 ಅಂಕದೊಂದಿಗೆ ಮೊದಲ ಸ್ಥಾನ ನೀಡಿದೆ. ಇನ್ನೂಳಿದಂತೆ ಛತ್ತೀಸ್ಗಢ, ಓಡಿಶಾ,ಆಂಧ್ರಪ್ರದೇಶ,
ತಮಿಳು ನಾಡಿಗೆ ಕರ್ನಾಟಕದ ನಂತರದ ಸ್ಥಾನ ಲಭಿಸಿವೆ. ಒಟ್ಟಾರೆಯಾಗಿ ಪೊಲೀಸರು ಎಂದರೆ ಮೂಗು ಮುರಿಯುವ ಕಾಲದ ನಡುವೆ ಇದೊಂದು ಸರ್ವೇ ರಾಜ್ಯ ಪೊಲೀಸರ ಮೇಲೆ ನಂಬಿಕೆ ಹೆಚ್ಚಾಗುವಂತೆ ಮಾಡಿರುವುದಂತೂ ಸುಳ್ಳಲ್ಲ.
ಇದನ್ನೂ ಓದಿ: Animals News: ಇಡೀ ಮನುಕುಲಕ್ಕೆ ಮಾದರಿಯಾಯಿತು ಈ ಮಂಗನ ಕಾರ್ಯ ! ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.