ಮೈದಾ ಅನ್ನುವ ವ್ಯರ್ಥ ಹಿಟ್ಟು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಗೊತ್ತೇ?

ಕೆನಡಾದ ವಿಶ್ವವಿದ್ಯಾಲಯವೊಂದು  ಮೈದಾ ಅಂದರೆ ರಿಫೈನ್ಡ್ ಫುಡ್  ಮೇಲೆ 17 ವರ್ಷದವರೆಗಿನ ವಿಸ್ತೃತ ಸಂಶೋಧನೆ ಮಾಡಿದೆ. ಮೈದಾ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಮೇಲೆ ತನ್ನ ವರದಿಯ ಮೂಲಕ ಅದು ಬೆಳಕು ಚೆಲ್ಲಿದೆ.

Written by - Ranjitha R K | Last Updated : Apr 6, 2023, 06:07 PM IST
  • ಇತ್ತೀಚಿಗೆ ಪಿಜ್ಜಾ , ಬರ್ಗರ್ , ನೂಡಲ್ಸ್, ಮೊಮೊಸ್ ತಿನ್ನುವ ಪ್ರವೃತಿ ಹೆಚ್ಚಾಗಿದೆ.
  • ಇದರ ರುಚಿಗೆ ಮಾರು ಹೋಗಿ ಬಹಳ ಜನರು ಇದನ್ನು ಸೇವಿಸುತ್ತಾರೆ.
  • 16 ವರ್ಷದ ಆ ಸಂಶೋಧನೆ ಹೇಳಿದ್ದೇನು..?
 ಮೈದಾ ಅನ್ನುವ ವ್ಯರ್ಥ ಹಿಟ್ಟು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಗೊತ್ತೇ? title=

ಬೆಂಗಳೂರು : ಇತ್ತೀಚಿಗೆ ಪಿಜ್ಜಾ , ಬರ್ಗರ್ , ನೂಡಲ್ಸ್, ಮೊಮೊಸ್  ತಿನ್ನುವ ಪ್ರವೃತಿ ಹೆಚ್ಚಾಗಿದೆ.  ಇದರ ರುಚಿಗೆ ಮಾರು ಹೋಗಿ ಬಹಳ ಜನರು ಇದನ್ನು ಸೇವಿಸುತ್ತಾರೆ. ಕೆಲವರು ಇದರ ರುಚಿಗೆ ಮಾರು ಹೋದರೆ ಇನ್ನು ಕೆಲವರಿಗೆ ಇದು ಸ್ಟೇಟಸ್ ಸಿಂಬಲ್. ಪಿಜ್ಜಾ , ಬರ್ಗರ್ ತಿನ್ನುವುದು ಎಂದರೆ ಅದೇನೋ ದೊಡ್ದಸ್ತಿಗೆ ಇದ್ದಂತೆ.  ಇನ್ನು ಕೆಲವರಿಗೆ ಪಪ್ಸ್, ಸಮೋಸಾ ಮೈದಾ ದೋಸೆ ತಿನ್ನುವ ಅಭ್ಯಾಸವಿರುತ್ತದೆ. ಇವೆಲ್ಲವೂ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇವುಗಳನ್ನು ತಯಾರಿಸಲು ಬಳಸುವ ಮೈದಾ ನಿಮ್ಮ  ದೇಹದ ಮೇಲೆ ಉಂಟು ಮಾಡುವ ಪರಿಣಾಮ ಏನು ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾದರೆ ಈ ಲೇಖನ ಓದಲೇ ಬೇಕು. 

16 ವರ್ಷದ ಆ ಸಂಶೋಧನೆ ಹೇಳಿದ್ದೇನು..?
ಕೆನಡಾದ ವಿಶ್ವವಿದ್ಯಾಲಯವೊಂದು  ಮೈದಾ ಅಂದರೆ ರಿಫೈನ್ಡ್ ಫುಡ್  ಮೇಲೆ 17 ವರ್ಷದವರೆಗಿನ ವಿಸ್ತೃತ ಸಂಶೋಧನೆ ಮಾಡಿದೆ. ಮೈದಾ ತಿನ್ನುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಮೇಲೆ ತನ್ನ ವರದಿಯ ಮೂಲಕ ಅದು ಬೆಳಕು ಚೆಲ್ಲಿದೆ.

 ಇದನ್ನೂ ಓದಿ : ಹಸಿರು ಬಟಾಣಿಗಳ ಆರೋಗ್ಯಕರ ಅದ್ಭುತ ಪ್ರಯೋಜನಗಳಿವು..!
 
ಸಂಶೋಧನೆ ಹೇಗೆ ನಡೆದಿತ್ತು ಗೊತ್ತಾ..?
ವಿವಿಧ ವಯೋಮಾನದ 1.37 ಲಕ್ಷ ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. 16 ವರ್ಷ ಸಂಶೋಧನೆ ನಡೆದಿತ್ತು. 1.37 ಲಕ್ಷ ಜನರಲ್ಲಿ ಒಂದಷ್ಟು ಜನರಿಗೆ ರಿಫೈನ್ಡ್ ಧಾನ್ಯ (ಮೈದಾ ಇತ್ಯಾದಿ), ಇನ್ನೊಂದಷ್ಟು ಜನರಿಗೆ ಪರಿಪೂರ್ಣ ಧಾನ್ಯ (ಅಂದರೆ ಗೋಧಿ, ಜೋಳ ಇತ್ಯಾದಿ) ಹಾಗೂ ಉಳಿದವರಿಗೆ ಅನ್ನವನ್ನು ತಿನ್ನಲು ನೀಡಲಾಗಿತ್ತು.  ಗೋಧಿ, ಜೋಳ, ಅನ್ನ ತಿಂದವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಆದರೆ, ಮೈದಾ ತಿಂದವರ ಆರೋಗ್ಯ  ಹದಗೆಟ್ಟಿದ್ದು ಸಂಶೋಧನೆಯಿಂದ  ದೃಢಪಡಿಸಿದೆ. 

ಮೈದಾ ಯಾಕೆ ಆರೋಗ್ಯಕ್ಕೆ ಹಾನಿಕರ..?
ಮೈದಾ ಮಾಡೋದು ಹೇಗೆ ಅನ್ನುವ ಜ್ಞಾನವೇ ನಮ್ಮಲ್ಲಿ ಅನೇಕರಿಗಿಲ್ಲ. ಧಾನ್ಯಗಳನ್ನು ಪ್ರೊಸೆಸಿಂಗ್  ಮಾಡಿ ಮೈದಾ ಉತ್ಪಾದಿಸಲಾಗುತ್ತದೆ. ಮೈದಾ ಒಂದು ರೀತಿಯಲ್ಲಿ ಸಂಸ್ಕರಿತ ಆಹಾರ . ಈ ರೀತಿ ಪ್ರೊಸೆಸಿಂಗ್ ಮಾಡುವಾಗ ಅದರಲ್ಲಿರುವ ಎಲ್ಲಾ ಪೌಷ್ಟಿಕಾಂಶಗಳು  ನಾಶವಾಗುತ್ತವೆ. ಅದರಲ್ಲಿ ಫೈಬರ್  ಸಂಪೂರ್ಣ ನಷ್ಟವಾಗುತ್ತದೆ. ಇನ್ನು ಸರಳವಾಗಿ ಹೇಳಬೇಕಾದರೆ ಮೈದಾ ಅನ್ನುವುದು ಪೌಷ್ಟಿಕಾಂಶಗಳೇ ಇಲ್ಲದ ವ್ಯರ್ಥ ಹಿಟ್ಟು. ಈ ಮೈದಾದಲ್ಲೇ ಬ್ರೆಡ್, ಬಿಸ್ಕಿಟ್, ಪಾಸ್ತಾ, ಪರೋಟಾ, ಪಿಜಾ, ಬರ್ಗರ್, ಪಪ್ಸ್ ಇತ್ಯಾದಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. 
 
ಇದನ್ನೂ ಓದಿ : Women Health Tips: ಸೆಕ್ಸ್ ಬಳಿಕ ಮಹಿಳೆಯರು ಈ 5 ಕೆಲಸಗಳನ್ನು ಮಾಡಬಾರದು, ಇಲ್ದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

ಮೈದಾ ಹಾನಿಕಾರಕ ಯಾಕೆ..?
ಅಧ್ಯಯನದ ಪ್ರಕಾರ ಮೈದಾ ಉತ್ಪನ್ನಗಳನ್ನು ಹೆಚ್ಚು ತಿಂದರೆ
1. ಬೊಜ್ಜು  ಬೆಳೆಯುತ್ತದೆ.
2. ಬಿಪಿ , ಶುಗರ್ ಹೆಚ್ಚಾಗುತ್ತದೆ.
3. ದೇಹದಲ್ಲಿ ಕ್ಯಾಲ್ಸಿಯಂ  ಕೊರತೆ ಉಂಟಾಗುತ್ತದೆ. ಅಂದರೆ ಇದರ ನೇರ ಪರಿಣಾಮ ಮೂಳೆಗಳ ಮೇಲೆ ಬೀಳುತ್ತದೆ. 
4. ಮೈದಾದಿಂದ ಮಾಡಿದ ಖಾದ್ಯಗಳು ಬೇಗ ಜೀರ್ಣವಾಗುವುದಿಲ್ಲ.
5. ಮೈದಾದಲ್ಲಿ ಬಹುಮುಖ್ಯವಾದ ಫೈಬರ್ ಅಂಶ ಇರುವುದೇ ಇಲ್ಲ. 

ಮೈದಾ ತಿಂದರೆ ಆಗುವ ದುಷ್ಪರಿಣಾಮಗಳೇನು..?
1. ಶೇ 27ರಷ್ಟು ಜನರು ಹೃದ್ರೋಗದಿಂದ ಸಾಯಬಹುದು
2. ಶೇ. 33 ರಷ್ಟು ಜನರಿಗೆ ಹೃದ್ರೋಗ  ಆವರಿಸಬಹುದು
3. ಶೇ. 46 ರಷ್ಟು  ಜನರಿಗೆ ಸ್ಟ್ರೋಕ್ ಉಂಟಾಗಬಹುದು. 

ಇದನ್ನೂ ಓದಿ : ಮನೆಯಲ್ಲಿಯೇ ನೈಸರ್ಗಿಕವಾಗಿ ಮೊಡವೆ ಕಲೆಗಳನ್ನು ತೆಗೆದುಹಾಕಲು ಇಲ್ಲಿವೆ ನೋಡಿ ಪರಿಹಾರಗಳು..!

ಆರೋಗ್ಯವೇ ಭಾಗ್ಯ ಎನ್ನುವುದಾದರೆ ಮೈದಾದಿನದ ದೂರವಿರಿ :  
ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ಮೈದಾ ಬಳಕೆ ಇರುವುದಿಲ್ಲ. ಮೈದಾ ಒಳ್ಳೆಯದಲ್ಲ ಅನ್ನೋದು ಅಮ್ಮನಿಗೆ ಚೆನ್ನಾಗಿ ಗೊತ್ತು. ಆದರೆ, ಬೇಕರಿ ತಿನಿಸುಗಳನ್ನು ಮೈದಾದಿಂದಲೇ ಮಾಡಲಾಗುತ್ತದೆ. ಹಾಗಾಗಿ, ಬಾಯಿ ರುಚಿಗಾಗಿ ಬೇಕರಿಯನ್ನು ಅವಲಂಬಿಸುವುದು ಕಡಿಮೆ ಮಾಡಿ. ಅಮ್ಮನ ಕೈಯಡುಗೆಯನ್ನೇ ತಿನ್ನಿ.

 

ಗಮನಿಸಿ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News