Trigrahi Yoga Effect: ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯನ್ನು ಸಹ ವಿಶೇಷವೆಂದು ಪರಿಗಣಿಸಲಾಗುತ್ತದೆ. ಯಾವುದಾದರೂ ಒಂದು ರಾಶಿಯಲ್ಲಿ ಮೂರು ಗ್ರಹಗಳಿದ್ದರೆ ಅದನ್ನು ತ್ರಿಗ್ರಾಹಿ ಯೋಗ ಎನ್ನುತ್ತಾರೆ. ಮಾರ್ಚ್ 31 ರಂದು ಮೇಷ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ರೂಪುಗೊಂಡಿದೆ. ಈ ರಾಶಿಯಲ್ಲಿ ರಾಹು, ಬುಧ ಮತ್ತು ಶುಕ್ರರ ಸಂಯೋಗದಿಂದ ಈ ತ್ರಿಗ್ರಾಹಿ ಯೋಗವು ರೂಪುಗೊಂಡಿದೆ.
ಜ್ಯೋತಿಷ್ಯದಲ್ಲಿ, ಶುಕ್ರನನ್ನು ಸಂತೋಷ ಮತ್ತು ಅದೃಷ್ಟದ ಗ್ರಹ ಎಂದು ಪರಿಗಣಿಸಲಾಗುತ್ತದೆ. ಮತ್ತೆ ಬುಧ ವ್ಯಾಪಾರ, ಬುದ್ಧಿವಂತಿಕೆಯ ಗ್ರಹ. ಮತ್ತೊಂದೆಡೆ, ರಾಹುವನ್ನು ದುಷ್ಟ ಮತ್ತು ನೆರಳು ಗ್ರಹ ಎಂದು ಗುರುತಿಸಲಾಗಿದೆ. ಈ ಮೂರು ಗ್ರಹಗಳ ಒಕ್ಕೂಟದಿಂದ ಉಂಟಾಗುವ ತ್ರಿಗ್ರಾಹಿ ಯೋಗವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಇದು ಮೂರು ರಾಶಿಯವರ ಸ್ಥಳೀಯರ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವೆಲ್ಲಾ ರಾಶಿಯವರು ಜಾಗರೂಕರಾಗಿರಬೇಕು ಎಂದು ತಿಳಿಯೋಣ...
ವೃಷಭ ರಾಶಿ:
ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ಒಳ್ಳೆಯದು ಎಂದು ಹೇಳಲಾಗುವುದಿಲ್ಲ . ಮೇಷ ರಾಶಿಯಲ್ಲಿ ತ್ರಿಗ್ರಾಹಿ ಯೋಗವು ಪಾಲುದಾರಿಕೆ ವ್ಯವಹಾರ ಮಾಡುವ ಜನರಿಗೆ ಒಳ್ಳೆಯದಲ್ಲ ಎಂಬ ಸಂಕೇತವಾಗಿದೆ. ವ್ಯಾಪಾರ ಪಾಲುದಾರರಿಂದ ನೀವು ಮೋಸ ಹೋಗಬಹುದು. ಈ ಸಂಯದಲ್ಲಿ ನಿಮ್ಮ ದುಂದುವೆಚ್ಚಗಳು ಹೆಚ್ಚಾಗುವುದು. ಕೆಲವು ಕೆಲಸಗಳನ್ನು ಮಾಡಲು ನೀವು ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ, ಆಗ ಮಾತ್ರ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಸಂಬಂಧಗಳಲ್ಲಿಯೂ ಮೋಸಕ್ಕೆ ಬಲಿಯಾಗಬಹುದು.
ಇದನ್ನೂ ಓದಿ- ಏಪ್ರಿಲ್‌ನಲ್ಲಿ ರೂಪುಗೊಳ್ಳಲಿವೆ 2 ವಿನಾಶಕಾರಿ ಯೋಗ: ಈ ರಾಶಿಯವರು ಜಾಗರೂಕರಗಿರಿ
ಕನ್ಯಾ ರಾಶಿ:
ತ್ರಿಗ್ರಾಹಿ ಯೋಗವು ಈ ರಾಶಿಯವರಿಗೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು. ನೀವು ಹೊಸ ಉದ್ಯೋಗವನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದರೆ, ಇದೀಗ ಅದನ್ನು ರದ್ದುಗೊಳಿಸಿ. ಈಗ ನಿಮ್ಮ ತಲೆಯಿಂದ ಆರ್ಥಿಕ ಚಿಂತೆಗಳನ್ನು ಹೊರಹಾಕಿ. ಇಲ್ಲದಿದ್ದರೆ, ಆರ್ಥಿಕ ನಷ್ಟವನ್ನು ತಡೆಯಲು ಸಾಧ್ಯವಿಲ್ಲ. ವೃತ್ತಿ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ಲಾಭಗಳಿರುತ್ತವೆ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ವೈಮನಸ್ಯ ಉಂಟಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನೀವು ಸಮಸ್ಯೆಗಳು ಉಲ್ಬಣಗೊಳ್ಳಬಹುದು.
ಇದನ್ನೂ ಓದಿ- ವರ್ಷದ ಮೊದಲ ಸೂರ್ಯ ಗ್ರಹಣದ ಪರಿಣಾಮ: ಈ ರಾಶಿಯವರು ತುಂಬಾ ಎಚ್ಚರಿಕೆಯಿಂದಿರಿ
ವೃಶ್ಚಿಕ ರಾಶಿ:
ತ್ರಿಗ್ರಾಹಿ ಯೋಗವು ನಿಮ್ಮ ಕೆಲವು ಸಮಸ್ಯೆಗಳನ್ನು ಮೊದಲಿಗಿಂತಲೂ ಹೆಚ್ಚಿಸಬಹುದು. ಈ ಯುತಿಯು ನಿಮಗೆ ಕಾನೂನು-ನ್ಯಾಯಾಲಯದ ಪ್ರಕರಣಗಳಲ್ಲಿ ನಿರಾಶೆಯನ್ನು ನೀಡಬಹುದು. ಇದಲ್ಲದೆ, ಆರ್ಥಿಕ ಜೀವನದಲ್ಲಿ ಬಲವಾದ ಏರಿಳಿತಗಳು ಕಂಡುಬರುತ್ತವೆ. ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಬಹಳ ಎಚ್ಚರಿಕೆಯಿಂದ ಓಡಾಡಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.