ಚುನಾವಣೆಗೆ ಹಂಚಲು ಫುಡ್ ಕಿಟ್ ಸಂಗ್ರಹ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಫ್ಐಆರ್

Karnataka Assembly Election: ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕೃಷ್ಣಯ್ಯ ಶೆಟ್ಟಿ ಮತ್ತು ಗಾಂಧಿನಗರ ಕ್ಷೇತ್ರದ ಹೆಸರನ್ನೊಳಗೊಂಡ ಸುಮಾರು ಏಳೆಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

Written by - VISHWANATH HARIHARA | Edited by - Yashaswini V | Last Updated : Apr 3, 2023, 11:04 AM IST
  • ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮೇಲೆ ಎಫ್ಐಆರ್ ದಾಖಲು
  • ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
  • ಚುನಾವಣಾ ಅಧಿಕಾರಿ ಲಕ್ಷ್ಮಣ್ ನೀಡಿದ ದೂರಿನನ್ವಯ ಎಫ್ಐಆರ್
ಚುನಾವಣೆಗೆ ಹಂಚಲು ಫುಡ್ ಕಿಟ್ ಸಂಗ್ರಹ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಎಫ್ಐಆರ್ title=

Karnataka Assembly Election 2023: ಎಲೆಕ್ಷನ್ ಘೋಷಣೆಯಾದ ಬೆನ್ನಲ್ಲೇ ಕೆಲ ನಾಯಕರು ಕ್ಷೇತ್ರದ ಮತದಾರರನ್ನು ಸೆಳೆಯಲು ಅನೇಕ ಆಮಿಷ ಒಡ್ಡುತ್ತಿದ್ದಾರೆ. ಸದ್ಯ ಚುನಾವಣೆಗಾಗಿ ಮತದಾರರಿಗೆ  ಹಂಚಲು ದಿನಬಳಕೆ ವಸ್ತುಗಳ ಕಿಟ್ ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಚುನಾವಣಾಧಿಕಾರಿ ಲಕ್ಷ್ಮಣ್ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಗಾಂಧಿನಗರ ಕ್ಷೇತ್ರದ ಟೆಕೆಟ್ ಆಕಾಂಕ್ಷಿಯಾಗಿರುವ ಕೃಷ್ಣಯ್ಯ ಶೆಟ್ಟಿ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಅಕ್ಕಿ, ಬೆಳೆ, ಬೆಲ್ಲ, ಡ್ರೈಫ್ರೂಟ್ಸ್, ಅಡುಗೆ ಎಣ್ಣೆ ಸೇರಿದಂತೆ ಗೃಹ ಬಳಕೆಯ ವಸ್ತುಗಳ ಕಿಟ್ ಸಂಗ್ರಹಿಸಿಟ್ಟಿದ್ದರು. ಈ ಕಿಟ್ ಮೇಲೆ ಗಾಂಧಿನಗರ ಕ್ಷೇತ್ರದ ಹೆಸರು ಮತ್ತು ಕೃಷ್ಣಯ್ಯ ಶೆಟ್ಟಿ ಹೆಸರಲ್ಲಿ ಪುಡ್ ಕಿಟ್ ತಯಾರಿ ಮಾಡಲಾಗ್ತಿತ್ತು.

ಇದನ್ನೂ ಓದಿ- ಚಾಮರಾಜನಗರದಲ್ಲಿ ಮಹಿಳಾ ಮತದಾರರೇ ಅಧಿಕ: ಹೊಸ ವೋಟರ್ಸ್ 12 ಸಾವಿರ

ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕೃಷ್ಣಯ್ಯ ಶೆಟ್ಟಿ ಮತ್ತು ಗಾಂಧಿನಗರ ಕ್ಷೇತ್ರದ ಹೆಸರನ್ನೊಳಗೊಂಡ ಸುಮಾರು ಏಳೆಂಟು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ- ಬೆಂಗಳೂರಿನಲಿ 2217 ಬೂತ್ ಗಳು ಅತಿ ಸೂಕ್ಷ್ಮ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಸದ್ಯ ಚುನಾವಣಾಧಿಕಾರಿಗಳ ದೂರಿನನ್ವಯ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃಷ್ಣಯ್ಯ ಶೆಟ್ಟಿಗೆ ನೊಟೀಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News