ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಪಂಚರತ್ನ ರಥಯಾತ್ರೆ ಯಶಸ್ವಿ ಆಗಿದೆ. ಮೈಸೂರಿನಲ್ಲಿ ಸಮಾರೋಪ ಸಮಾವೇಶ ಯಶಸ್ವಿ ಆಗಿದೆ. ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ತೆಗೆದುಕೊಂಡು ಹೋಗಿ. ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಿ ಎಂದು ಅಭ್ಯರ್ಥಿಗಳಿಗೆ ಸೂಚಿಸಿದರು.

Written by - Prashobh Devanahalli | Edited by - Manjunath N | Last Updated : Apr 1, 2023, 04:55 PM IST
  • ಚುನಾವಣೆ ಘೋಷಣೆ ನಂತರ ಎಲ್ಲ ಶಾಸಕರು, ಅಭ್ಯರ್ಥಿಗಳ ಆನ್ಲೈನ್ ಸಭೆ ನಡೆಸಿದ ಮಾಜಿ ಮುಖ್ಯಮಂತ್ರಿ
  • ಪಂಚರತ್ನ ರಥಯಾತ್ರೆ ಯಶಸ್ವಿ ಆಗಿದೆ.
  • ಮೈಸೂರಿನಲ್ಲಿ ಸಮಾರೋಪ ಸಮಾವೇಶ ಯಶಸ್ವಿ ಆಗಿದೆ.
  • ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ತೆಗೆದುಕೊಂಡು ಹೋಗಿ.
ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ title=
file photo

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಿದ್ಧತೆಯ ಭಾಗವಾಗಿ ಶನಿವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಎಲ್ಲ ಶಾಸಕರು, ಅಭ್ಯರ್ಥಿಗಳಿಗೆ ಆನ್ಲೈನ್ ವೇದಿಕೆಯ ಮೂಲಕ ಮಹತ್ವದ ಟಿಪ್ಸ್ ನೀಡಿದರು.

ಇದನ್ನೂ ಓದಿ- Health Tips: ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಸೇವಿಸಿ ಆರೋಗ್ಯವಂತರಾಗಿರಿ

ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಜೆಪಿ ನಗರದ ತಮ್ಮ ನಿವಾಸದಿಂದಲೇ ಸಭೆ ನಡೆಸಿದ ಅವರು, ಕೆಲ ಅಭ್ಯರ್ಥಿಗಳಿಗೆ ಚಾಟಿ ಬೀಸಿದರು. ಅಲ್ಲದೆ, ಚುನಾವಣೆಯನ್ನು ಲಘುವಾಗಿ ಪರಿಗಣಿಸಬಾರದು ಹಾಗೂ ಗೆಲುವಿನ ಅವಕಾಶ ಕಳೆದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ- ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ

ಪಕ್ಷದ ಕಚೇರಿಯಿಂದ ಬರುವ ಸೂಚನೆಗಳನ್ನು ಪಾಲಿಸಲು ಸೂಚನೆ ನೀಡಿದ ಮಾಜಿ ಮುಖ್ಯಮಂತ್ರಿಗಳು, ಮತದಾನಕ್ಕೆ ಇನ್ನೂ 37 ದಿನ ಇದೇ, ಇದು ನಿಮಗೆಲ್ಲ ಅಗ್ನಿಪರೀಕ್ಷೆ. ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಿ. ಕಾರ್ಯಕರ್ತರು, ಮುಖಂಡರನ್ನು ಒಟ್ಟಿಗೆ ಕರೆದುಕೊಂಡು ಹೋಗಿ ಎಂದು ಅಭ್ಯರ್ಥಿಗಳಿಗೆ ತಿಳಿಸಿದರು.

ಪಂಚರತ್ನ ರಥಯಾತ್ರೆ ಯಶಸ್ವಿ ಆಗಿದೆ. ಮೈಸೂರಿನಲ್ಲಿ ಸಮಾರೋಪ ಸಮಾವೇಶ ಯಶಸ್ವಿ ಆಗಿದೆ. ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ತೆಗೆದುಕೊಂಡು ಹೋಗಿ. ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಿ ಎಂದು ಅಭ್ಯರ್ಥಿಗಳಿಗೆ ಸೂಚಿಸಿದರು.

ಇದೇ ವೇಳೆ ಅಭ್ಯರ್ಥಿಗಳ ಪ್ರಶ್ನೆಗಳಿಗೆ ಕುಮಾರಸ್ವಾಮಿ ಅವರು ಉತ್ತರ ನೀಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News