Health Tips: ಹಾಗಲಕಾಯಿ ಜ್ಯೂಸ್ ಸೇವಿಸುವುದರ ಅದ್ಭುತ ಆರೋಗ್ಯ ಪ್ರಯೋಜನಗಳು

ಮಧುಮೇಹ ರೋಗಿಗಳಿಗೆ ಹಾಗಲಕಾಯಿ ಜ್ಯೂಸ್: ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಮಧುಮೇಹವು ವೇಗವಾಗಿ ಹೆಚ್ಚುತ್ತಿದೆ. ವಿಶೇಷವಾಗಿ ಭಾರತದಲ್ಲಿ ಕೋಟ್ಯಂತರ ರೋಗಿಗಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹದ ಸಂದರ್ಭದಲ್ಲಿ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹದಲ್ಲಿ ಹಾಗಲಕಾಯಿ ಹೇಗೆ ಪ್ರಯೋಜನಕಾರಿ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Mar 30, 2023, 09:29 PM IST
  • ಇಂದಿನ ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ
  • ಅನೇಕ ಜನರು ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯಕ್ಕೆ ಬಲಿಯಾಗುತ್ತಿದ್ದಾರೆ
  • ಹಾಗಲಕಾಯಿ ಜ್ಯೂಸ್ ಮಧುಮೇಹ ರೋಗಿಗಳಿಗೆ ರಾಮಬಾಣವಾಗಿದೆ
Health Tips: ಹಾಗಲಕಾಯಿ ಜ್ಯೂಸ್ ಸೇವಿಸುವುದರ ಅದ್ಭುತ ಆರೋಗ್ಯ ಪ್ರಯೋಜನಗಳು title=
ಮಧುಮೇಹ ರೋಗಿಗಳಿಗೆ ಹಾಗಲಕಾಯಿ ಜ್ಯೂಸ್

ನವದೆಹಲಿ: ಇಂದಿನ ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ ಜನರು ರಕ್ತದೊತ್ತಡ, ಮಧುಮೇಹ ಮತ್ತು ಸ್ಥೂಲಕಾಯಕ್ಕೆ ಬಲಿಯಾಗುತ್ತಿದ್ದಾರೆ. ಮಧುಮೇಹವು ಒಂದು ರೀತಿಯ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದನ್ನು ಔಷಧಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದ ಮಾತ್ರ ನಿಯಂತ್ರಿಸಬಹುದು. ಮಧುಮೇಹವು ಕ್ರಮೇಣ ಇತರ ಅಂಗಗಳ ಮೇಲೂ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ಹೀಗಾಗಿಯೇ ಇದನ್ನು ಸೈಲೆಂಟ್ ಕಿಲ್ಲರ್ ಅಂತಲೂ ಕರೆಯುತ್ತಾರೆ.

ಮಧುಮೇಹ ರೋಗಿಗಳಿಗೆ ಕಣ್ಣುಗಳಲ್ಲಿ ಸಮಸ್ಯೆ, ಮೂತ್ರಪಿಂಡ, ಯಕೃತ್ತಿನ ಕಾಯಿಲೆ ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು ಸಾಮಾನ್ಯ. ಮಧುಮೇಹ ನಿಯಂತ್ರಿಸಲು ಸಹಾಯ ಮಾಡುವ ಅನೇಕ ಆಹಾರಗಳಿವೆ. ಈ ಪೈಕಿ ಹಾಗಲಕಾಯಿ ಕೂಡ ಒಂದು. ಇದರ ಜ್ಯೂಸ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ.

ಇದನ್ನೂ ಓದಿ: ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ

ಹಾಗಲಕಾಯಿ ಮಧುಮೇಹ ರೋಗಿಗಳಿಗೆ ರಾಮಬಾಣ

1. ಹಾಗಲಕಾಯಿಯನ್ನು ತಿನ್ನುವುದರ ಪ್ರಯೋಜನಗಳು: ಹಾಗಲಕಾಯಿ ಕಹಿಯಾಗಿದ್ದರೂ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಲಕಾಯಿ ತರಕಾರಿ ಅಥವಾ ಜ್ಯೂಸ್ ಎಲ್ಲರಿಗೂ ಇಷ್ಟವಾಗುವುದಿಲ್ಲ. ಹಾಗಲಕಾಯಿಯ ಹೆಸರು ಕೇಳಿದ್ರೆ ಮಕ್ಕಳು ಓಡಿ ಹೋಗುತ್ತಾರೆ. ಮಧುಮೇಹಿಗಳು ಹಾಗಲಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಿದರೆ, ಈ ರೋಗದ ವಿರುದ್ಧ ಹೋರಾಡಬಹುದು. ಹಾಗಲಕಾಯಿ ಜ್ಯೂಸ್ ಸ್ವಾಭಾವಿಕವಾಗಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಅನ್ನು ಸಕ್ರಿಯಗೊಳಿಸುತ್ತದೆ.

2. ಹಾಗಲಕಾಯಿಯಲ್ಲಿ ಮಧುಮೇಹ ವಿರೋಧಿ ಗುಣಗಳಿವೆ: ಮಧುಮೇಹ ವಿರೋಧಿ ಗುಣಗಳು ಹಾಗಲಕಾಯಿಯಲ್ಲಿ ಕಂಡುಬರುತ್ತವೆ. ಇದರಲ್ಲಿರುವ ಕ್ರೊಮಾಟಿನ್ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗಲಕಾಯಿಯಲ್ಲಿ ಪಾಲಿಪೆಪ್ಟೈಡ್-ಪಿ ಅಥವಾ ಪಿ-ಇನ್ಸುಲಿನ್ ಸಹ ಕಂಡುಬರುತ್ತದೆ, ಇದು ನೈಸರ್ಗಿಕ ರೀತಿಯಲ್ಲಿ ಮಧುಮೇಹವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ಕೇವಲ ಏಳು ದಿನಗಳಲ್ಲಿ ತೂಕ ಕಳೆದುಕೊಳ್ಳಲು ಅನುಸರಿಸಿ ಈ ಸುಲಭ ವಿಧಾನ

ಹಾಗಲಕಾಯಿ ಜ್ಯೂಸ್ ಮಾಡುವುದು ಹೇಗೆ?

ಹಾಗಲಕಾಯಿ ಜ್ಯೂಸ್ ತಯಾರಿಸಲು ತಾಜಾ ಹಾಗಲಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಇದರ ಬೀಜಗಳನ್ನು ಬೇರ್ಪಡಿಸಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಬೇಕು. ಇದರ ನಂತರ ಹಾಗಲಕಾಯಿಯನ್ನು ಜ್ಯೂಸರ್‌ನಲ್ಲಿ ಹಾಕಿ ಅಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಅರ್ಧ ಚಮಚ ಉಪ್ಪನ್ನು ಸೇರಿಸಿ. ಹಾಗಲಕಾಯಿಯ ಕಹಿ ಕಡಿಮೆ ಮಾಡಲು ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ನಿಯಮಿತವಾಗಿ ಸೇವಿಸುವವರು ತಮ್ಮ ದೇಹ ಮತ್ತು ಆರೋಗ್ಯ ಪ್ರಯೋಜನ ಪಡೆಯುತ್ತಾರೆ.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News