"ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕು"-ಬಿಜೆಪಿ ವಿರುದ್ದ ಸಿದ್ಧು ಕಿಡಿ 

ಚುನಾವಣಾ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ಈಗ ರಾಜಕೀಯ ಪಕ್ಷಗಳು ಹಾಗೂ ನಾಯಕರು ತಮ್ಮ ಹೇಳಿಕೆಗಳನ್ನು ತೀಕ್ಷ್ಣಗೊಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಮನವಮಿಯ ನಿಮಿತ್ತ ಶುಭಾಶಯಗಳನ್ನು ಕೋರಿದ್ದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.

Written by - Manjunath N | Last Updated : Mar 30, 2023, 03:35 PM IST
  • "ಆದರ್ಶ ಪುರುಷ ಶ್ರೀರಾಮನು ಹಾಕಿಕೊಟ್ಟ ಪ್ರೀತಿ, ಸಹಾನುಭೂತಿ, ಅಂತಃಕರಣ, ನ್ಯಾಯಪರಿಪಾಲನೆಯ ಹಾದಿಯಲ್ಲಿ ಮುನ್ನಡೆಯೋಣ.
  • ಪಾನಕ, ಕೋಸಂಬರಿಯ ಜೊತೆ ಸ್ನೇಹ, ಸೌಹಾರ್ದತೆ ಮಿಳಿತಗೊಳ್ಳಲಿ,
  • ಮನುಷ್ಯಪ್ರೇಮದ ಬೆಳಕು ಜಗದಗಲ ಬೆಳಗಲಿ.ನಾಡಿನ ಸಮಸ್ತ ಜನತೆಗೆ ರಾಮನವಮಿಯ ಶುಭಹಾರೈಕೆಗಳು
  "ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣಾ ಸರಕು"-ಬಿಜೆಪಿ ವಿರುದ್ದ ಸಿದ್ಧು ಕಿಡಿ  title=

ಬೆಂಗಳೂರು: ಚುನಾವಣಾ ದಿನಾಂಕ ನಿಗದಿಯಾಗಿರುವ ಬೆನ್ನಲ್ಲೇ ಈಗ ರಾಜಕೀಯ ಪಕ್ಷಗಳು ಹಾಗೂ ನಾಯಕರು ತಮ್ಮ ಹೇಳಿಕೆಗಳನ್ನು ತೀಕ್ಷ್ಣಗೊಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಮನವಮಿಯ ನಿಮಿತ್ತ ಶುಭಾಶಯಗಳನ್ನು ಕೋರಿದ್ದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.

ಸಿದ್ದರಾಮಯ್ಯನವರು ರಾಮನವಮಿಯ ನಿಮಿತ್ತ "ಆದರ್ಶ ಪುರುಷ ಶ್ರೀರಾಮನು ಹಾಕಿಕೊಟ್ಟ ಪ್ರೀತಿ, ಸಹಾನುಭೂತಿ, ಅಂತಃಕರಣ, ನ್ಯಾಯಪರಿಪಾಲನೆಯ ಹಾದಿಯಲ್ಲಿ ಮುನ್ನಡೆಯೋಣ.ಪಾನಕ, ಕೋಸಂಬರಿಯ ಜೊತೆ ಸ್ನೇಹ, ಸೌಹಾರ್ದತೆ ಮಿಳಿತಗೊಳ್ಳಲಿ, ಮನುಷ್ಯಪ್ರೇಮದ ಬೆಳಕು ಜಗದಗಲ ಬೆಳಗಲಿ.ನಾಡಿನ ಸಮಸ್ತ ಜನತೆಗೆ ರಾಮನವಮಿಯ ಶುಭಹಾರೈಕೆಗಳು" ಎಂದು ಶುಭಹಾರೈಸಿದ್ದರು.

ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ 21 ವರ್ಷದ ತ್ರಿವೇಣಿ ಬಳ್ಳಾರಿ ಮೇಯರ್ ಆಗಿ ಆಯ್ಕೆ!

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಈಗ "ಪ್ರಭು ಶ್ರೀ ರಾಮಚಂದ್ರನ ಅಸ್ತಿತ್ವವನ್ನೇ ಪ್ರಶ್ನಿಸುವ..ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ವಿರುದ್ಧವೇ ಸಮರ ಸಾರಿದ…ಪ್ರಭು ಶ್ರೀ ರಾಮಚಂದ್ರನ ರಾಮರಾಜ್ಯವನ್ನು ಟೀಕಿಸುವ…ಅಲ್ಪರ ಗುಂಪಿನ ‘Poster Boy’ @siddaramaiah ನವರು ಇಂದು ‘ರಾಮಭಕ್ತನ’ ವೇಷ ತೊಟ್ಟು, ‘ಚುನಾವಣಾ ನಿಮಿತ್ತ ಬಹುಕೃತವೇಷ’ವೆಂಬ ನುಡಿಯ ಗೌರವ ಹೆಚ್ಚಿಸಿದ್ದಾರೆ.ಎಂದು ಟೀಕಿಸಿದೆ.

ಇದನ್ನೂ ಓದಿ : "ಬಿಜೆಪಿಯಲ್ಲಿ ಇದ್ರೆ ಸೇಫ್, ಇಲ್ಲೆ ಇದ್ದು ಗೆದ್ದು ಸಂತಸದಿಂದ ಮಂತ್ರಿಯಾಗೋದು ಒಳ್ಳೆಯದು"-ಯತ್ನಾಳ್

ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಮಹಾತ್ಮ ಗಾಂಧಿಯವರು ನಂಬಿದ್ದ ಮಾನವೀಯ ಗುಣಗಳ, ಮಾತೃಹೃದಯದ, ಸರ್ವವನ್ನೂ ಪ್ರೀತಿಸುವ ರಾಮನ ಅನುಯಾಯಿ ನಾನು.ರಾಮನ ಹೆಸರಿನಲ್ಲಿ ದ್ವೇಷಬಿತ್ತಿ, ಮನಸುಗಳನ್ನು ಒಡೆದು ಚುನಾವಣೆಯಲ್ಲಿ ಲಾಭ ಪಡೆಯುವವರು ನೀವು.ನನ್ನ ರಾಮ ಅಂತಃಕರಣ ಸ್ವರೂಪಿ,ನಿಮಗೆ ರಾಮ ಚುನಾವಣಾ ಸರಕು.ಶ್ರೀರಾಮನೇ ನಿಮಗೆ ಸದ್ಬುದ್ಧಿ ನೀಡಲಿ" ಎಂದು ಕಿಡಿ ಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News