ನಮ್ಮ ಮೆಟ್ರೋದಲ್ಲಿ ಇನ್ನೊಂದು ಅವಘಡ; ಒಂದೂವರೆ ವರ್ಷದ ಹೆಣ್ಣು ಮಗು ಸಾವು

ಅಜ್ಜಿಯ ಕೈಯಿಂದ ಜಾರಿ ಎಸ್ಕಲೇಟರ್ ಮೇಲಿನಿಂದ ಬಿದ್ದು ಗಾಯಗೊಂಡಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಸೋಮವಾರ ಮೃತಪಟ್ಟಿದೆ.

Last Updated : Jan 28, 2019, 11:41 AM IST
ನಮ್ಮ ಮೆಟ್ರೋದಲ್ಲಿ ಇನ್ನೊಂದು ಅವಘಡ; ಒಂದೂವರೆ ವರ್ಷದ ಹೆಣ್ಣು ಮಗು ಸಾವು title=
Representational Image

ಬೆಂಗಳೂರು: ಇತ್ತೀಚೆಗೆ ಯುವಕನೊಬ್ಬ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆನ್ನಲ್ಲೇ ನಮ್ಮ ಮೆಟ್ರೋದಲ್ಲಿ ಇನ್ನೊಂದು ಅವಘಡ ಸಂಭವಿಸಿದೆ. ಅಜ್ಜಿಯ ಕೈಯಿಂದ ಜಾರಿ ಎಸ್ಕಲೇಟರ್ ಮೇಲಿನಿಂದ ಬಿದ್ದು ಗಾಯಗೊಂಡಿದ್ದ ಒಂದೂವರೆ ವರ್ಷದ ಹೆಣ್ಣು ಮಗು ಸೋಮವಾರ ಮೃತಪಟ್ಟಿದೆ.

ಭಾನುವಾರ ರಾತ್ರಿ ಶ್ರೀರಾಮಪುರದ ಮೆಟ್ರೋ ನಿಲ್ದಾಣದಲ್ಲಿ ಒಂದೂವರೆ ವರ್ಷದ ಹಾಸಿನಿ ಎಂಬ ಮಗು ಅಜ್ಜಿ ಜೊತೆ ಎಸ್ಕಲೇಟರ್ ಮೂಲಕ ಇಳಿಯುತ್ತಿದ್ದಾಗ, ಅಜ್ಜಿಯ ಕಂಕುಳಿನಲ್ಲಿದ್ದ ಮಗು ಕೈ ಜಾರಿ ಏಕಾಏಕಿ ಕೆಳಗೆ ಬಿದ್ದಿದೆ. ಮಗು ಕೆಳಗೆ ಬೀಳುವುದನ್ನು ನೋಡಿದ ರೈಲು ಸಿಬ್ಬಂದಿ ಕೂಡಲೇ ಎಸ್ಕಲೇಟರ್ ಸ್ಥಗಿತಗೊಳಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
 

Trending News