ನಿತ್ಯ ಬೆಳಿಗ್ಗೆ ಈ ಕೆಲಸ ಮಾಡಿದರೆ ದುಪ್ಪಟ್ಟು ಹೆಚ್ಚಾಗುತ್ತೆ ಮುಖದ ಕಾಂತಿ

                         

Skin Care Tips: ಒಮ್ಮೊಮ್ಮೆ ಬಿರು ಬಿಸಿಲು, ಕೆಲವೊಮ್ಮೆ ತುಂತುರು ಮಳೆ ಹೀಗೆ ಬದಲಾಗುತ್ತಿರುವ ವಾತಾವರಣದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ನೀವು ನಿತ್ಯ ಅದರಲ್ಲೂ ಬೆಳಿಗ್ಗೆ ಹೊತ್ತು ನಿಮ್ಮ ಮುಖದ ಬಗ್ಗೆ ಒಂದಿಷ್ಟು ಕಾಳಜಿ ವಹಿಸಿದರೆ ಬೇಸಿಗೆಯಲ್ಲಿಯೂ ಕೂಡ ಕಾಂತಿಯುತ ಚರ್ಮವನ್ನು ಹೊಂದಲು ಸಹಾಯಕವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಒಮ್ಮೊಮ್ಮೆ ಬಿರು ಬಿಸಿಲು, ಕೆಲವೊಮ್ಮೆ ತುಂತುರು ಮಳೆ ಹೀಗೆ ಬದಲಾಗುತ್ತಿರುವ ವಾತಾವರಣದಲ್ಲಿ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಬದಲಾಗುತ್ತಿರುವ ವಾತಾವರಣದಲ್ಲಿ ನಿತ್ಯ ಈ ಕೆಲವು ಸರಲ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಮುಖದ ಕಾಂತಿ ದುಪ್ಪಟ್ಟಾಗುವುದರಲ್ಲಿ ಅನುಮಾನವೇ ಇಲ್ಲ. 

2 /5

ನಿಮಗೆ ಸಾಧ್ಯವಾದರೆ ಬೆಳಿಗ್ಗೆ ಹೊತ್ತು ನೀವು ಫೇಸ್ ಸ್ಟೀಮಿಂಗ್ - ಫೇಸ್ ಮಸಾಜ್ - ಫೇಸ್ ಎಕ್ಸ್‌ಫೋಲಿಯೇಶನ್, ಫೇಸ್ ಮಾಯಿಶ್ಚರೈಸಿಂಗ್ ಅನ್ನು ತಪ್ಪದೇ ಮಾಡಿ. 

3 /5

ಫೇಸ್ ಸ್ಟೀಮಿಂಗ್ ಮಾಡುವುದರಿಂದ ರಂಧ್ರಗಳು ತೆರೆದುಕೊಳ್ಳುವುದರ ಜೊತೆಗೆ ಚರ್ಮವು ಆಳವಾಗಿ ಸ್ವಚ್ಛವಾಗುತ್ತದೆ. ಇದಕ್ಕಾಗಿ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಸ್ವಚ್ಛವಾದ ಬಟ್ಟೆಯನ್ನು ಅದರಲ್ಲಿ ಅಡ್ಡಿ ಬಳಿಕ ನೀರನ್ನು ಹಿಂಡಿ, ಆ ಬಟ್ಟೆಯಲ್ಲಿ ಲಘುವಾಗಿ ಮುಖವನ್ನು ಸ್ವಚ್ಛಗೊಳಿಸಿ. 

4 /5

ಫೇಸ್ ಸ್ಟೀಮಿಂಗ್ ಬಳಿಕ ಸ್ನಾಯುಗಳು ಸಕ್ರಿಯವಾಗುತ್ತವೆ. ಈ ಸಮಯದಲ್ಲಿ ಕನಿಷ್ಠ 5  ನಿಮಿಷವಾದರೂ ಫೇಸ್ ಮಸಾಜ್ ಮಾಡಿ. ಇದರಿಂದ ಮುಖದಲ್ಲಿ ರಕ್ತ ಪರಿಚಲನೆ ಸುಧಾರಿಸುವುದಲ್ಲದೆ, ಡೆಡ್ ಸೆಲ್ಸ್ ಕೂಡ ತೆರೆದುಕೊಳ್ಳುತ್ತದೆ. 

5 /5

ಮಾಯಿಶ್ಚರೈಸರ್ ಬಳಕೆಯಿಂದ ಚರ್ಮ ಮೃದುವಾಗುವುದಲ್ಲದೆ, ಚರ್ಮಕ್ಕೆ ತೇವಾಂಶ ದೊರೆಯುತ್ತದೆ. ಹಾಗಾಗಿಯೇ, ನಿತ್ಯ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ ಒಂದೆರಡು ನಿಮಿಷ ಲಘುವಾಗಿ ಮಸಾಜ್ ಮಾಡಿ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.