IPL 2023 : ಮುಂಬೈ ತಂಡಕ್ಕೆ ಅತ್ಯಂತ ಅಪಾಯಕಾರಿ ಬೌಲರ್‌ನ ಎಂಟ್ರಿ..!

Mumbai Indians News : ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಪರಿಚಯಿಸಿದ ಮಾರಣಾಂತಿಕ ಬೌಲರ್, ಈತ ಬೌಲಿಂಗ್ ಮಾಡಲು ಪಿಚ್‌ಗೆ ಬಂದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಕಾಲುಗಳು ನಡುಗುತ್ತವೆ ಅಷ್ಟು ಭಯಂಕರವಿದೆ. ಐಪಿಎಲ್ 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬೌಲರ್, ಯಾಕೆ ಈತನಿಗೆ ಇಷ್ಟು ಬಿಲ್ಡಪ್ ಈ ಕೆಳಗಿದೆ ನೋಡಿ ಸಂಪೂರ್ಣ ಮಾಹಿತಿ..

Written by - Channabasava A Kashinakunti | Last Updated : Mar 27, 2023, 10:15 AM IST
  • ಮುಂಬೈ ಟೀಂಗೆ ಅತ್ಯಂತ ಅಪಾಯಕಾರಿ ಬೌಲರ್‌ನ ಎಂಟ್ರಿ
  • ದೇಶಕ್ಕೆ ವಿಶ್ವಕಪ್ ಗೆದ್ದು ಕೊಟ್ಟಿದ್ದಾನೆ ಈ ಆಟಗಾರ
  • ಐಪಿಎಲ್ 2023 ಗಾಗಿ ಮುಂಬೈ ಇಂಡಿಯನ್ಸ್‌ನ ಪೂರ್ಣ ತಂಡ
IPL 2023 : ಮುಂಬೈ ತಂಡಕ್ಕೆ ಅತ್ಯಂತ ಅಪಾಯಕಾರಿ ಬೌಲರ್‌ನ ಎಂಟ್ರಿ..! title=

Mumbai Indians : ಐಪಿಎಲ್ 2023 ರ ಸೀಸನ್ ನಲ್ಲಿ, ಮುಂಬೈ ಇಂಡಿಯನ್ಸ್‌ನ ಎದುರಾಳಿ ತಂಡಗಳಿಗೆ ಅಪಾಯಕಾರಿ ವೇಗದ ಬೌಲರ್ ಶತ್ರುವಾಗಲಿದ್ದಾನೆ. ಐಪಿಎಲ್ 2023 ರ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಇದ್ದಕ್ಕಿದ್ದಂತೆ ಅಪಾಯಕಾರಿ ಬೌಲರ್ ಒಬ್ಬನಿಗೆ ಎಂಟ್ರಿ ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ ಪರಿಚಯಿಸಿದ ಮಾರಣಾಂತಿಕ ಬೌಲರ್, ಈತ ಬೌಲಿಂಗ್ ಮಾಡಲು ಪಿಚ್‌ಗೆ ಬಂದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳ ಕಾಲುಗಳು ನಡುಗುತ್ತವೆ ಅಷ್ಟು ಭಯಂಕರವಿದೆ. ಐಪಿಎಲ್ 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬೌಲರ್, ಯಾಕೆ ಈತನಿಗೆ ಇಷ್ಟು ಬಿಲ್ಡಪ್ ಈ ಕೆಳಗಿದೆ ನೋಡಿ ಸಂಪೂರ್ಣ ಮಾಹಿತಿ..

ಮುಂಬೈ ಟೀಂಗೆ ಅತ್ಯಂತ ಅಪಾಯಕಾರಿ ಬೌಲರ್‌ನ ಎಂಟ್ರಿ

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಬೇಕಾಗಿದೆ. ಇದಕ್ಕೂ ಮೊದಲು ಜಸ್ಪ್ರೀತ್ ಬುಮ್ರಾಗಿಂತ ಹೆಚ್ಚು ಅಪಾಯಕಾರಿ ಬೌಲರ್ ಒಬ್ಬ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರವೇಶಿಸಿದ್ದಾರೆ. ಈ ಆಟಗಾರ ತನ್ನ ದೇಶಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದಾನೆ. ಐಪಿಎಲ್ 2023 ರಲ್ಲಿ, ಇಂಗ್ಲೆಂಡ್‌ನ ಮಾರಕ ಬೌಲರ್‌ಗಳಲ್ಲಿ ಒಬ್ಬರಾದ ಜೋಫ್ರಾ ಆರ್ಚರ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಲಿದ್ದಾರೆ. ಜೋಫ್ರಾ ಆರ್ಚರ್ ಮುಂಬೈ ಇಂಡಿಯನ್ಸ್ 8 ಕೋಟಿ ರೂ.ಗೆ ಖರೀದಿಸಿತು.

ಇದನ್ನೂ ಓದಿ : WPL 2023 : ಮೊದಲ WPL ಚಾಂಪಿಯನ್ ತಂಡವಾದ ಮುಂಬೈ : ಧೋನಿಗೆ ಸರಿಸಾಟಿ ಹರ್ಮನ್‌ಪ್ರೀತ್!

ದೇಶಕ್ಕೆ ವಿಶ್ವಕಪ್ ಗೆದ್ದು ಕೊಟ್ಟಿದ್ದಾನೆ ಈ ಆಟಗಾರ

ಆರ್ಚರ್‌ನ ಕಿಲ್ಲರ್ ಬೌಲಿಂಗ್ ಅನ್ನು ಆಡುವುದು ಯಾರಿಗೂ ಸುಲಭವಲ್ಲ. ಮುಂಬೈ ಇಂಡಿಯನ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಈಗ ಅವರ ಕಣ್ಣು ಆರನೇ ಪ್ರಶಸ್ತಿಯ ಮೇಲಿದೆ. ಆರ್ಚರ್ ತನ್ನದೇ ಆದ ಪಂದ್ಯಗಳನ್ನು ಬದಲಾಯಿಸಲು ಹೆಸರುವಾಸಿಯಾಗಿದ್ದಾನೆ. ಜೋಫ್ರಾ ಆರ್ಚರ್ ಅತ್ಯಂತ ಅಪಾಯಕಾರಿ ಬೌಲರ್. ಇಂಗ್ಲೆಂಡ್ ವಿಶ್ವಕಪ್ 2019 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ವಿಶ್ವಕಪ್ ಗೆಲ್ಲುವಲ್ಲಿ ಆರ್ಚರ್ ಅಪಾರ ಕೊಡುಗೆ ನೀಡಿದ್ದಾರೆ. ಜೋಫ್ರಾ ಆರ್ಚರ್ ಇಂಗ್ಲೆಂಡ್ ಪರ ಎಲ್ಲಾ ಮೂರು ಮಾದರಿಗಳಲ್ಲಿ ಆಡುತ್ತಿದ್ದಾರೆ. ಆರ್ಚರ್ ಐಪಿಎಲ್‌ನಲ್ಲಿ 35 ಪಂದ್ಯಗಳಲ್ಲಿ 46 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2023 ಗಾಗಿ ಮುಂಬೈ ಇಂಡಿಯನ್ಸ್‌ನ ಪೂರ್ಣ ತಂಡ:

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಡೆವಾಲ್ಡ್ ಬ್ರೂವಿಸ್, ತಿಲಕ್ ವರ್ಮಾ, ಜೋಫ್ರಾ ಆರ್ಚರ್, ಟಿಮ್ ಡೇವಿಡ್, ಮೊಹಮ್ಮದ್ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಟ್ರಿಸ್ಟಾನ್ ಸ್ಟಬ್ಸ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಾಲ್ ಗ್ರೀನ್, ಜ್ಯೆ ರಿಚರ್ಡ್ಸನ್, ಪಿಯೂಷ್ ಚಾವ್ಲಾ, ಡ್ವೇನ್ ಜಾನ್ಸನ್, ವಿಷ್ಣು ವಿನೋದ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ರಾಘವ್ ಗೋಯಲ್.

ಇದನ್ನೂ ಓದಿ : Team India : ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನ ಅಂತ್ಯ! ತಂಡದಿಂದ ಕೈಬಿಟ್ಟ ಆಯ್ಕೆಗಾರರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News