ಮುಂಬೈ: ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್, ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂಟ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ವೀಡಿಯೋಕಾನ್ ಸಂಸ್ಥೆಗೆ ಐಸಿಐಸಿಐನಿಂದ ಸಾಲ ನೀಡಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಮುಂಬೈ, ಔರಾಂಗಾಬಾದ್ ಹಾಗೂ ಮಹಾರಾಷ್ಟ್ರದಲ್ಲಿರುವ ವಿಡಿಯೋಕಾನ್ ಮುಖ್ಯಕಚೇರಿಗಳ ಮೇಲೆ ದಾಳಿ ನಡೆಸಿದೆ.
2012ರಲ್ಲಿ ವಿಡಿಯೋಕಾನ್ ಗ್ರೂಪ್ಗೆ 3,250 ಕೋಟಿ ರೂಪಾಯಿ ಸಾಲ ಅಕ್ರಮವಾಗಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ನ ಸಿಇಒ, ಎಂಡಿ ಸ್ಥಾನದಿಂದ ಕಳೆದ ವರ್ಷ ಹೊರ ನಡೆದಿದ್ದರು. ವಿಡಿಯೋಕಾನ್ ಗ್ರೂಪ್ಗೆ ಅಕ್ರಮ ಸಾಲ ನೀಡುವ ಒಪ್ಪಂದದಲ್ಲಿ ಚಂದಾ ಕೊಚ್ಚಾರ್, ಆಕೆಯ ಪತಿ ದೀಪಕ್ ಕೊಚ್ಚಾರ್ ಮತ್ತು ಅವರ ಕುಟುಂಬ ಲಾಭ ಪಡೆದಿದೆ ಎಂದು ವಿಶಲ್ ಬ್ಲೋವರ್ ಆರೋಪಿಸಿದ್ದರು.