ಹತ್ತು ದಶಕಗಳ ಬಳಿಕ ಬೃಹಸ್ಪತಿಯ ರಾಶಿಯಲ್ಲಿ 4 ಮಹಾಯೋಗಗಳ ನಿರ್ಮಾಣ, ಈ ರಾಶಿಗಳ ಜನರಿಗೆ ಬಂಪರ್ ಧನಲಾಭ!

Four Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಹತ್ತು ದಶಕಗಳ ಬಳಿಕ ದೇವಗುರು ಬೃಹಸ್ಪತಿಯ ಮನೆಯಲ್ಲಿ 4 ರಾಜಯೋಗಗಳು ರೂಪುಗೊಂಡಿವೆ. ಇದರಿಂದ ಒಟ್ಟು 5 ರಾಶಿಗಳ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿದ್ದು, ಅವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಅದೃಷ್ಟವಂತ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ, 
 

Four Rajyogs In Pisces: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ, ಅದರ ಪರಿಣಾಮವು ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಸುಮಾರು 10 ದಶಕಗಳ ನಂತರ, ಮೀನ ರಾಶಿಯಲ್ಲಿ 4 ಮಹಾ ಯೋಗಗಳು ರೂಪುಗೊಂಡಿವೆ, ಇವುಗಳಲ್ಲಿ ಗಜಕೇಸರಿ, ನೀಚಭಂಗ, ಬುಧಾದಿತ್ಯ ಮತ್ತು ಹಂಸ ರಾಜಯೋಗಳು ಶಾಮೀಲಾಗಿವೆ.  ಇವುಗಳ ಪ್ರಭಾವವು ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಕಂಡುಬರಲಿದೆ. ಆದರೆ 5 ರಾಶಿಗಳ ಜನರಿಗೆ ಈ ಅವಧಿಯಲ್ಲಿ  ಹಠಾತ್ ವಿತ್ತೀಯ ಲಾಭ ಮತ್ತು ವೃತ್ತಿ-ವ್ಯವಹಾರದಲ್ಲಿ ಯಶಸ್ಸಿನ ಸಾಧ್ಯತೆಗಳು ನಿರ್ಮಾಣಗೊಂಡಿವೆ. ಈ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

 

ಇದನ್ನೂ ಓದಿ-ಈ‌ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿವೆ ಮುಂದಿನ 23 ದಿನಗಳು, ಸೂರ್ಯನ ಕೃಪೆಯಿಂದ ಜೀವನದಲ್ಲಿ ಅಪಾರ ಧನಾಗಮನ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಿಥುನ ರಾಶಿ- ನಿಮ್ಮ ಜಾತಕದ ಕರ್ಮ ಭಾವದಲ್ಲಿ ಗಜಕೇಸರಿ, ನೀಚ್ ಭಂಗ್, ಬುಧಾದಿತ್ಯ ಮತ್ತು ಹಂಸ ರಾಜಯೋಗಗಳು ರೂಪುಗೊಳ್ಳುತ್ತಿವೆ. ಹೀಗಾಗಿ ನೀವು ಕೆಲಸ-ವ್ಯವಹಾರದಲ್ಲಿ ಅಪಾರ ಯಶಸ್ಸನ್ನು ಪಡೆಯಬಹುದು. ಅಲ್ಲದೆ, ನಿರುದ್ಯೋಗಿಗಳು ಈ ಅವಧಿಯಲ್ಲಿ  ಹೊಸ ಉದ್ಯೋಗಾವಕಾಶ ಪಡೆಯಲಿದ್ದಾರೆ. ಅಲ್ಲದೆ, ಸೇವೆಯಲ್ಲಿರುವವರಿಗೆ ಮಾರ್ಚ್ ನಂತರ ಬಡ್ತಿ ಸಿಗಬಹುದು. ಬಯಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಸಿಗಬಹುದು. ಇದರೊಂದಿಗೆ, ವೃತ್ತಿ ವ್ಯವಹಾರದಲ್ಲಿ ಹಿರಿಯ ಅಧಿಕಾರಿಗಳ ಬೆಂಬಲ ಇರಲಿದೆ. ಇದರೊಂದಿಗೆ ಲಾಭ, ನಿರ್ವಹಣೆ ಮತ್ತು ಆಡಳಿತದ ವಿಷಯಗಳು ನಿಮ್ಮ ಪರವಾಗಿರಲಿವೆ. ತಂದೆಯೊಂದಿಗಿನ ಬಾಂಧವ್ಯ ಉತ್ತಮವಾಗಿರುತ್ತದೆ. ಅಲ್ಲದೆ, ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ನೀವು ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು.  

2 /5

ಕನ್ಯಾ ರಾಶಿ- ನಾಲ್ಕು ಮಹಾ ಯೋಗಗಳ ರಚನೆಯಿಂದ, ಕನ್ಯಾ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಂಡಿವೆ. ಏಕೆಂದರೆ ಈ 4 ರಾಜಯೋಗಗಳು ನಿಮ್ಮ ರಾಶಿಯಿಂದ ಸಪ್ತಮ ಭಾವದಲ್ಲಿ  ರಚನೆಯಾಗುತ್ತಿವೆ. ನಿಮ್ಮ ಲಾಭದ ಅಧಿಪತಿ ಏಳನೇ ಮನೆಯಲ್ಲಿ ವಿರಾಜಮಾನನಾಗಿದ್ದಾನೆ.  ಇದರೊಂದಿಗೆ, ಸಂತೋಷ-ಸಾಧನ ಮತ್ತು ಆಸ್ತಿಯ ಅಧಿಪತಿ ಕೂಡ ಏಳನೇ ಭಾವದಲ್ಲಿ ಕುಳಿತಿದ್ದಾನೆ. ಹೀಗಾಗಿ  ನೀವು ಈ ಸಮಯದಲ್ಲಿ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬಹುದು. ಪಾಲುದಾರಿಕೆ ಕೆಲಸದಲ್ಲಿ ಯಶಸ್ಸು ಕಾಣಬಹುದು. ಇದೇ ವೇಳೆ, ನಿಮ್ಮ ಬಾಳಸಂಗಾತಿಯ ಬೆಂಬಲವನ್ನು ನೀವು ಪಡೆಯುವಿರಿ. ಅಲ್ಲದೆ, ಬಾಳಸಂಗಾತಿಯ ಪ್ರಗತಿಯನ್ನು ಕೂಡ ನೀವು ಕಾಣಬಹುದು. ಪ್ರೇಮ  ಜೀವನವೂ ಚೆನ್ನಾಗಿರುತ್ತದೆ. ಅಲ್ಲದೆ, ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು.  

3 /5

ಧನು ರಾಶಿ- ಗಜಕೇಸರಿ, ನೀಚಭಂಗ, ಬುಧಾದಿತ್ಯ ಮತ್ತು ಹಂಸ ರಾಜಯೋಗದ ರಚನೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ಯೋಗವು ನಿಮ್ಮ ರಾಶಿಯ ಚತುರ್ಥ ಭಾವದಲ್ಲಿ ರೂಪಗೊಳ್ಳುತ್ತಿದೆ.  ಇದು ಸಂತೋಷ ಮತ್ತು ಸಂಪತ್ತಿನ ಸ್ಥಾನವೆಂದು ಪರಿಗಣಿಸಲಾಗಿದೆ. ಹೀಗಾಗ ನೀವು ಈ ಸಮಯದಲ್ಲಿ ಯಾವುದೇ ಭೂಮಿ-ಆಸ್ತಿಯನ್ನು ಖರೀದಿಸಬಹುದು. ಇದರೊಂದಿಗೆ ಪಿತ್ರಾರ್ಜಿತ ಆಸ್ತಿಯಿಂದಲೂ ನೆಮ್ಮದಿ ಸಿಗಬಹುದು. ಇದೇ ವೇಳೆ, ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಇದರೊಂದಿಗೆ ಅದೃಷ್ಟ ಕೂಡ ನಿಮ್ಮೊಂದಿಗೆ ಇರಲಿದೆ. ಈ ಸಮಯದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಜನರು ಉತ್ತಮ ಯಶಸ್ಸನ್ನು ಪಡೆಯಬಹುದು.  

4 /5

ವೃಷಭ ರಾಶಿ- 4 ಮಹಾ ರಾಜಯೋಗಗಳು ನಿಮ್ಮ ಪಾಲಿಗೆ ಮಂಗಳಕರ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯ ಲಾಭದ ಸ್ಥಳದಲ್ಲಿ ಈ 4 ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದೇ ವೇಳೆ, ನಿಮ್ಮ ಸಂಪತ್ತಿನ ಅಧಿಪತಿ ಲಾಭದಾಯಕ ಸ್ಥಳದಲ್ಲಿ ಸ್ಥಿತನಿದ್ದಾರೆ, ನಿಮ್ಮ ಪ್ರಗತಿ, ಬುದ್ಧಿವಂತಿಕೆ, ಆಕಸ್ಮಿಕ ಧನಲಾಭದ ಅಧಿಪತಿ ಲಾಭದಾಯಕ ಸ್ಥಳದಲ್ಲಿ ಸ್ಥಿತನಾಗಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವವು ಸುಧಾರಿಸುತ್ತದೆ. ಈ ಅವಧಿಯಲ್ಲಿ ಆದಾಯ ಹೆಚ್ಚಾಗುತ್ತದೆ. ಇದರೊಂದಿಗೆ, ಹೊಸ ಆದಾಯದ ಮೂಲಗಳು ನಿರ್ಮಾಣಗೊಳ್ಳಲಿವೆ. ಇನ್ನೊಂದೆಡೆ ನೀವು ಹಳೆಯ ಹೂಡಿಕೆಗಳಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೆ, ಈ ಸಮಯದಲ್ಲಿ ನೀವು ಮಗುವಿನ ಕಡೆಯಿಂದ ಯಾವುದೇ ಒಳ್ಳೆಯ ಸಮಾಚಾರ ಪಡೆಯಬಹುದು. ಇದರೊಂದಿಗೆ ಹಠಾತ್ ಧನಲಾಭದ ಸಾಧ್ಯತೆಗಳೂ ಸೃಷ್ಟಿಯಾಗುತ್ತಿವೆ. ಈ ಅವಧಿಯು ವಿದ್ಯಾರ್ಥಿಗಳಿಗೆ ಮಂಗಳಕರವೆಂದು ಸಾಬೀತಾಗಲಿದೆ.  

5 /5

ಕುಂಭ ರಾಶಿ- ನಾಲ್ಕು ರಾಜಯೋಗಗಳ ರಚನೆಯೊಂದಿಗೆ, ಕುಂಭ ರಾಶಿಯವರಿಗೆ ಒಳ್ಳೆಯ ದಿನಗಳು ಅಂಭಗೊಂಡಿವೆ. ಏಕೆಂದರೆ ಈ 4 ರಾಜಯೋಗಗಳು ನಿಮ್ಮ ಸಂಕ್ರಮಣ ಜಾತಕದ ಅದೃಷ್ಟದ ಭಾವದಲ್ಲಿ ರೂಪುಗೊಂಡಿವೆ. ಹೀಗಾಗಿ ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಇದರೊಂದಿಗೆ ಆಗದೇ ಇದ್ದ ಕಾಮಗಾರಿಗಳು ಆರಂಭವಾಗಲಿವೆ. ಈ ಅವಧಿಯಲ್ಲಿ, ಉಳಿತಾಯ ಬ್ಯಾಂಕಿಂಗ್ ಕೆಲಸಗಳು ಪೂರ್ಣಗೊಳ್ಳಲಿವೆ. ಕಾರ್ಯಕ್ಷೇತ್ರದಲ್ಲಿ ಅಪೇಕ್ಷಿತ ಪ್ರಸ್ತಾವನೆಗಳು ಬರಲಿವೆ. ಇದರೊಂದಿಗೆ, ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಈ ಅವಧಿಯಲ್ಲಿ, ನೀವು ವಿದೇಶಕ್ಕೆ ಪ್ರಯಾಣಿಸಬಹುದು, ಅದು ನಿಮಗೆ ಮಂಗಳಕರವಾಗಿರುತ್ತದೆ. ಅಲ್ಲದೆ, ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯವು ಮಂಗಳಕರವಾಗಿರುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)