ನವದೆಹಲಿ: ದಕ್ಷಿಣ ಧ್ರುವಕ್ಕೆ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎನ್ನುವ ಖ್ಯಾತಿಗೆ ಡಿಐಜಿ ಮತ್ತು ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಅಧಿಕಾರಿ ಅಪರ್ಣಾ ಕುಮಾರ್ ಪಾತ್ರರಾಗಿದ್ದಾರೆ.ಹಿಮದಲ್ಲಿ 111 ಕಿಲೋಮೀಟರ ನಡೆಯುವ ಮೂಲಕ ದಕ್ಷಿಣ ಧ್ರುವ ತಲುಪಿದ್ದಾರೆ.ಈ ಯಾತ್ರೆಯ ಸಂದರ್ಭದಲ್ಲಿ ಅವರು 35 ಕೆಜಿ ತೂಕದ ಸಲಕರಣೆಗಳನ್ನು ಹೊಂದಿದ್ದಳು ಎನ್ನಲಾಗಿದೆ.
Welcome home...
Ms Aparna kumar IPS, DIG, Frontier HQ ITBP Dehradun being welcomed by ITBP officials at IGI Airport, New Delhi today. She completed her 111 mile trek on 13 January, 2019 to become the 1st IPS and ITBP #women officer to reach to the South Pole.#Himveer pic.twitter.com/WdCgQaCmcO— ITBP (@ITBP_official) January 19, 2019
ದಕ್ಷಿಣ ಧ್ರುವ ತಲುಪಿದ ನಂತರ ಭಾರತಕ್ಕೆ ಬಂಧಿಳಿದ ಅಪರ್ಣಾ ಕುಮಾರ್ ಅವರನ್ನು ಶನಿವಾರದಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐಟಿಬಿಪಿ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು. ಐಟಿಬಿಪಿ ಅಧಿಕಾರಿಗಳು ಪುಷ್ಪಗುಚ್ಛ ಮತ್ತು ವಾದ್ಯವೃಂದವನ್ನು ಸ್ವಾಗತದ ಮೂಲಕ ಅವರನ್ನು ಬರಮಾಡಿಕೊಂಡರು.
Welcoming Ms Aparna Kumar IPS DIG ITBP on her arrival from successful expedition to South Pole at IGI Airport, New Delhi. pic.twitter.com/3ULYb8ETm1
— ITBP (@ITBP_official) January 19, 2019
ಈಗ ಕುರಿತಾಗಿ ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿಯೂ ಕೂಡ ಅಪರ್ಣಾ ಅವರಿಗೆ ಸ್ವಾಗತ ಕೋರಿದೆ.ಇನ್ನೊಂದೆಡೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪರ್ಣಾ ಅವರ ಸಾಧನೆಯ ಬಗ್ಗೆ ಕೊಂಡಾಡಿದ್ದಾರೆ.ಅಪರ್ಣಾ ಕುಮಾರ್ ಅವರು 2002 ಬ್ಯಾಚ್ ಯುಪಿ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ, ಡೆಹ್ರಾಡೂನ್ನಲ್ಲಿ ಐಟಿಬಿಪಿಯ ಉತ್ತರದ ಫ್ರಾಂಟಿಯರ್ ಮುಖ್ಯ ಕಚೇರಿಯಲ್ಲಿದ್ದಾರೆ. ಐಟಿಬಿಪಿಯು ವಿಶ್ವದಾದ್ಯಂತದ 211 ಯಶಸ್ವಿ ಪರ್ವತಾರೋಹಣ ಮಾಡುವ ಮೂಲಕ ಖ್ಯಾತಿ ಪಡೆದಿದೆ.
ಐಟಿಬಿಪಿಯು ಕೇಂದ್ರೀಯ ಸಶಸ್ತ್ರ ಪೋಲಿಸ್ ಫೋರ್ಸ್ ಆಗಿದ್ದು, 1962 ರಿಂದ ಹಿಮಾಲಯದ ಗಡಿ ಪ್ರದೇಶಗಳನ್ನು ಸುರಕ್ಷಿತವಾಗಿ ನಿಯೋಜಿಸಲು ಇದನ್ನು ಸ್ಥಾಪಿಸಲಾಗಿದೆ.