ಬೆಂಗಳೂರು : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸುಮಾರು 100 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಅಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ. ಎಲ್ಲಾ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡಲಾಗುವುದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಶಾಸಕರನ್ನು ಕೈಬಿಡಲು ಕಾಂಗ್ರೆಸ್ ತೀರ್ಮಾನಿಸಿದೆ.
ದೆಹಲಿಯಲ್ಲಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ನ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ಮುದ್ರೆ ಬಿದ್ದಿದೆ.
ಇದನ್ನೂ ಓದಿ : KSRTC Employees : ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ!
ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಪಕ್ಷ ಯಾವುದೇ ಮೈತ್ರಿಗೆ ಹೋಗುವುದಿಲ್ಲ. 224 ಸ್ಥಾನಗಳಿಗೆ ಕಾಂಗ್ರೆಸ್ನಿಂದ 1,300ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿರುವ ರಾಜ್ಯದ ಜನತೆ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದು ಹೇಳಿದ್ದಾರೆ.
100 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲ ಮುಂದುವರಿದಿದ್ದು, ಈಗಾಗಿ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಸಮಯ ತೆಗೆದುಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. 224 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ ಪ್ರಸ್ತುತ 68 ಶಾಸಕರನ್ನು ಹೊಂದಿದ್ದು, ರಾಜ್ಯ ಸ್ಕ್ರೀನಿಂಗ್ ಕಮಿಟಿ ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
ಎಸ್ಸಿ/ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗದ ಉಪಜಾತಿಗಳಿಗೂ ಪಕ್ಷ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ರಾಜ್ಯ ನಾಯಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Ayodhya Ram Mandir: ಅಯೋಧ್ಯೆಯ ಶ್ರೀರಾಮ ಮೂರ್ತಿಗೆ ಕಾರ್ಕಳದ ಕೃಷ್ಣಶಿಲೆ
ಕಾಂಗ್ರೆಸ್ ಮೊದಲ ಫೈನಲ್ ಪಟ್ಟಿಯ ಅಭ್ಯರ್ಥಿಗಳು
1. ಚಿಕ್ಕೋಡಿ – ಗಣೇಶ ಹುಕ್ಕೇರಿ
2. ಯಮಕನಮರಡಿ – ಸತೀಶ್ ಜಾರಕಿಹೊಳಿ
3. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್
4. ಖಾನಾಪುರ – ಅಂಜಲಿ ನಿಂಬಾಳ್ಕರ್
5. ಬೈಲಹೊಂಗಲ : ಮಹಾಂತೇಶ ಕೌಜಲಗಿ
6. ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ
7. ಬಬಲೇಶ್ವರ : ಎಂ. ಬಿ. ಪಾಟೀಲ
8. ಬಸವನಬಾಗೇವಾಡಿ : ಶಿವಾನಂದ ಪಾಟೀಲ್
9. ಇಂಡಿ : ಯಶವಂತಗೌಡ ಪಾಟೀಲ
10. ಅಫಜಲಪುರ : ಎಂ. ವೈ. ಪಾಟೀಲ
11. ಅಳಂದ : ಬಿ. ಆರ್. ಪಾಟೀಲ
12. ಜೇವರ್ಗಿ : ಅಜಯ್ ಸಿಂಗ್
13. ಚಿತ್ತಾಪುರ : ಪ್ರಿಯಾಂಕ ಖರ್ಗೆ
14. ಷಹಾಪುರ : ಶರಣಪ್ಪ ದರ್ಶನಾಪುರ
15. ಹುಮ್ನಾಬಾದ್ : ರಾಜಶೇಖರ ಪಾಟೀಲ
16. ಬಾಲ್ಕಿ : ಈಶ್ವರ ಖಂಡ್ರೆ
17. ಬೀದರ್ : ರಹೀಂಖಾನ್
18. ಮಸ್ಕಿ : ಬಸವನಗೌಡ ತುರ್ವಿಹಾಳ
19. ಕುಷ್ಟಗಿ : ಅಮರೇಗೌಡ ಬಯ್ಯಾಪುರ
20. ಯಲಬುರ್ಗ : ಬಸವರಾಜ ರಾಯರೆಡ್ಡಿ
21. ಕೊಪ್ಪಳ : ರಾಘವೇಂದ್ರ ಹಿಟ್ನಾಳ
22. ಗಂಗಾವತಿ : ಇಕ್ಬಾಲ್ ಅನ್ಸಾರಿ
23. ಕನಕಗಿರಿ : ಶಿವರಾಜ ತಂಗಡಗಿ
24. ಗದಗ : ಹೆಚ್. ಕೆ. ಪಾಟೀಲ
25. ರೋಣ : ಜೆ. ಎಸ್. ಪಾಟೀಲ
26. ಕಲಘಟಗಿ ಸಂತೋಷ್ ಲಾಡ್
27. ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ
28. ಹಾನಗಲ್ : ಶ್ರೀನಾಸ್ ಮಾನೆ
29. ಬ್ಯಾಡಗಿ : ಬಸವರಾಜ ಶಿವಣ್ಣನವರ
30. ಹಿರೇಕೆರೂರ : ಯು. ಬಿ. ಬಣಕಾರ
31. ಹೂವಿನ ಹಡಗಲಿ : ಪರಮೇಶ್ವರನಾಯ್ಕ
32. ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ
33. ಕಂಪ್ಲಿ : ಗಣೇಶ್
34. ಬಳ್ಳಾರಿ ಗ್ರಾಮೀಣ : ನಾಗೇಂದ್ರ
35. ಚಿತ್ರದುರ್ಗ : ಕೆ ಸಿ ವೀರೇಂದ್ರ
36. ಮೊಳಕಾಲ್ಮೂರು : ಯೋಗೀಶ್ ಬಾಬು
37. ಚಳ್ಳಕೆರೆ : ರಘುಮೂರ್ತಿ
38. ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ
39. ದಾವಣಗೆರೆ ಉತ್ತರ : ಎಸ್. ಎಸ್. ಮಲ್ಲಿಕಾರ್ಜುನ
40. ಭದ್ರಾವತಿ : ಸಂಗಮೇಶ್
41. ಸೊರಬ : ಮಧು ಬಂಗಾರಪ್ಪ
42. ಶೃಂಗೇರಿ : ರಾಜೇಗೌಡ
43. ಕುಣಿಗಲ್ : ರಂಗನಾಥ್
44. ಕೊರಟಗೆರೆ : ಡಾ. ಪರಮೇಶ್ವರ
45. ಗೌರಿಬಿದನೂರು : ಶಿವಶಂಕರರೆಡ್ಡಿ
46. ಬಾಗೇಪಲ್ಲಿ : ಸುಬ್ಬಾರೆಡ್ಡಿ
47. ಶಿಡ್ಲಘಟ್ಟ : ವಿ. ಮುನಿಯಪ್ಪ
48. ಶ್ರೀನಿವಾಸಪುರ : ರಮೇಶ್ ಕುಮಾರ್
49. ಕೆಜಿಎಫ್ : ರೂಪ ಶಶಿಧರ್
50. ಬಂಗಾರಪೇಟೆ : ನಾರಾಯಣಸ್ವಾಮಿ
51. ಮಾಲೂರು : ನಂಜೇಗೌಡ
52. ಬ್ಯಾಟರಾಯನಪುರ : ಕೃಷ್ಣಭೈರೇಗೌಡ
53. ಹೆಬ್ಬಾಳ : ಸುರೇಶ್ (ಭೈರತಿ)
54. ಪುಲಿಕೇಶಿನಗರ : ಅಖಂಡ ಶ್ರೀನಿವಾಸ್
55. ಸರ್ವಜ್ಙನಗರ : ಕೆ. ಜೆ. ಜಾರ್ಜ್
56. ಶಾಂತಿನಗರ : ಹಾರೀಸ್
57. ಶಿವಾಜಿನಗರ : ರಿಜ್ವಾನ್ ಹರ್ಷದ್
58. ಗಾಂಧಿನಗರ : ದಿನೇಶ್ ಗುಂಡೂರಾವ್
59. ವಿಜಯನಗರ : ಎಂ. ಕೃಷ್ಣಪ್ಪ
60. ಗೋವಿಂದರಾಜನಗರ : ಪ್ರಿಯಾಕೃಷ್ಣ
61. ಬಿಟಿಎಂ ಲೇಔಟ್ : ರಾಮಲಿಂಗಾರೆಡ್ಡಿ
62. ಜಯನಗರ : ಸೌಮ್ಯರೆಡ್ಡಿ
63. ಆನೇಕಲ್ : ಬಿ. ಶಿವಣ್ಣ
64. ಹೊಸಕೋಟೆ : ಶರತ್ ಬಚ್ಚೇಗೌಡ
65. ಕನಕಪುರ : ಡಿ. ಕೆ. ಶಿವಕುಮಾರ್
66. ಮಾಗಡಿ : ಬಾಲಕೃಷ್ಣ
67. ಮಂಗಳೂರು : ಯು.ಟಿ. ಖಾದರ್
68. ಮೂಡುಬಿದರೆ : ಮಿಥುನರೈ
69. ಬೆಳ್ತಂಗಡಿ : ವಸಂತ ಬಂಗೇರ
70. ಭಂಟ್ವಾಳ : ರಮಾನಾಥರೈ
71. ಪುತ್ತೂರು : ಶಕುಂತಲಾಶೆಟ್ಟಿ
72. ನಾಗಮಂಗಲ : ಚಲುವರಾಯಸ್ವಾಮಿ
73. ಹುಣಸೂರು : ಹೆಚ್. ಪಿ. ಮಂಜುನಾಥ
74. ಪಿರಿಯಾಪಟ್ಟಣ : ವೆಂಕಟೇಶ್
75. ಕೆ. ಆರ್. ನಗರ : ರವಿಶಂಕರ್
76. ಹೆಚ್.ಡಿ. ಕೋಟೆ : ಅನಿಲ್
77. ವರುಣ : ಡಾ. ಯತೀಂದ್ರ ಸಿದ್ದರಾಮಯ್ಯ
78. ಚಾಮರಾಜನಗರ : ಪುಟ್ಟರಂಗಶೆಟ್ಟಿ
79. ಹನೂರು : ನರೇಂದ್ರ
80. ಕೋಲಾರ : ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.