ನವದೆಹಲಿ: ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪೋಷಕ ಕಂಪನಿ ಮೆಟಾ (Meta) ಮತ್ತೆ ಉದ್ಯೋಗಿಗಳಿಗೆ ಶಾಕ್ ನೀಡಿದೆ. 2ನೇ ಸುತ್ತಿನಲ್ಲಿ ಮೆಟಾ ಬರೋಬ್ಬರಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.
ಕಂಪನಿಯು ದೊಡ್ಡಮಟ್ಟದ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವುದರಿಂದ 2ನೇ ಸುತ್ತಿನಲ್ಲಿ 10 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. Lay Off ಸುದ್ದಿ ಹೊರಬಿದ್ದ ನಂತರ Metaದ ಷೇರುಗಳು ಶೇ6ರಷ್ಟು ಏರಿಕೆಯಾಗಿದೆ. ಈ ಉದ್ಯೋಗ ಕಡಿತ ವ್ಯಾಪಕವಾದ ಪುನರ್ರಚನೆಯ ಭಾಗವಾಗಿದ್ದು, ಕಂಪನಿಯು 5 ಸಾವಿರ ಹೊಸ ಉದ್ಯೋಗಿಗಳ ನೇಮಕಾತಿಯನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: ಪಾರ್ಟಿಗೆಂದು ಮನೆಗೆ ಕರೆದ, ಲೈಂಗಿಕ ಕ್ರಿಯೆ ನಡೆಸಿದ, ನಂತರ ಗರ್ಲ್ ಫ್ರೆಂಡ್ ಳನ್ನು ತುಂಡುತುಂಡಾಗಿ ಕತ್ತರಿಸಿ ತಿಂದ!
ಈ ಮೊದಲು ಮೆಟಾ ಕೆಲವು ನೌಕರರನನ್ನು ಕೆಲಸದಿಂದ ತೆಗೆದು ಹಾಕಿತ್ತು. ಇದೀಗ ಮತ್ತೆ ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ದೊಡ್ಡ ಶಾಕ್ ನೀಡಿದೆ. ‘ಈ ಹೊಸ ಆರ್ಥಿಕ ವಾಸ್ತವತೆಯು ಹಲವು ವರ್ಷಗಳವರೆಗೆ ಮುಂದುವರಿಯುವ ಸಾಧ್ಯತೆಗಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಮೆಟಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಸಿಬ್ಬಂದಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.
ಹೆಚ್ಚುತ್ತಿರುವ ಬಡ್ಡಿದರಗಳಿಂದ ಆರ್ಥಿಕ ಕುಸಿತದ ಚಿಂತೆಗಳು ಕಾರ್ಪೊರೇಟ್ ಅಮೆರಿಕದಾದ್ಯಂತ ಸಾಮೂಹಿಕ ಉದ್ಯೋಗ ಕಡಿತ ನಡೆಯುತ್ತಿದೆ. ವಾಲ್ ಸ್ಟ್ರೀಟ್ ಬ್ಯಾಂಕ್ಗಳಾದ ಗೋಲ್ಡ್ಮನ್ ಸ್ಯಾಚ್ಸ್ ಮತ್ತು ಮೋರ್ಗಾನ್ ಸ್ಟಾನ್ಲಿಯಿಂದ ಹಿಡಿದು Amazon.com ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಬಿಗ್ ಟೆಕ್ ಸಂಸ್ಥೆಗಳು ತಮ್ಮ ಉದ್ಯೋಗಗಳಿಗೆ ಗೇಟ್ಪಾಸ್ ನೀಡುತ್ತಿವೆ.
ಇದನ್ನೂ ಓದಿ: ಉಕ್ರೇನ್ನಲ್ಲಿ ರಷ್ಯಾ ಆಕ್ರಮಣ: ಅಂತಾರಾಷ್ಟ್ರೀಯ ಪರಿಣಾಮಗಳು ಮತ್ತು ಬದಲಾಗುವ ಜಾಗತಿಕ ಚಿತ್ರಣಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.