ವೇಗವಾಗಿ ಹರಡುತ್ತಿದೆ H3N2 ವೈರಸ್ ! ಆತಂಕ ಹೆಚ್ಚಿಸಿವೆ ಉಪ-ರೂಪಾಂತರಗಳು

IDSP-IHIP (ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, H3N2 ಸೇರಿದಂತೆ  ಈ ವೈರಸ್ ನ ವಿವಿಧ ಉಪ-ರೂಪಾಂತರಗಳ ಒಟ್ಟು 3038 ಪ್ರಕರಣಗಳು ಮಾರ್ಚ್ 9 ರವರೆಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪತ್ತೆಯಾಗಿವೆ. 

Written by - Ranjitha R K | Last Updated : Mar 14, 2023, 09:19 AM IST
  • H3N2 ಇನ್‌ಫ್ಲುಯೆಂಜಾ ವೈರಸ್ ಸೋಂಕು ವೇಗವಾಗಿ ಹರಡುತ್ತಿದೆ.
  • ವೇಗವಾಗಿ ಹರಡುವ H3N2 ಸೋಂಕು
  • ಈ ಲಕ್ಷಣಗಳು ಕಂಡ ಬಂದ ತಕ್ಷಣ ಎಚ್ಚರದಿಂದಿರಿ
ವೇಗವಾಗಿ ಹರಡುತ್ತಿದೆ H3N2 ವೈರಸ್ ! ಆತಂಕ ಹೆಚ್ಚಿಸಿವೆ ಉಪ-ರೂಪಾಂತರಗಳು title=

ಬೆಂಗಳೂರು : H3N2 ಇನ್‌ಫ್ಲುಯೆಂಜಾ ವೈರಸ್ ಸೋಂಕು ವೇಗವಾಗಿ  ಹರಡುತ್ತಿದೆ. ಈ ವೈರಸ್‌ನಿಂದ  ವ್ಯಕ್ತಿ ಮೃತಪಟ್ಟಿರುವ  ಗುಜರಾತ್ ನಲ್ಲಿ ಬೆಳಕಿಗೆ ಬಂದಿದೆ. ವಡೋದರಾದ 58 ವರ್ಷದ ಮಹಿಳೆಯೊಬ್ಬರು ಸಯಾಜಿ ಆಸ್ಪತ್ರೆಯಲ್ಲಿ ಈ ವೈರಸ್ ಕಾರಣದಿಂದಲೇ ಮೃತಪಟ್ಟಿದ್ದಾರೆ  ಎಂದು ಹೇಳಲಾಗುತ್ತಿದೆ. H3N2 ವೈರಸ್‌ನ ಪರೀಕ್ಷೆಗಾಗಿ ಮಾದರಿಗಳನ್ನು ಪುಣೆ ಲ್ಯಾಬ್‌ಗೆ ಕಳುಹಿಸಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಇದು ಹಂದಿ ಜ್ವರದಿಂದ (H1N1) ರೂಪಾಂತರಿತ ವೈರಸ್‌ನಿಂದ ದೇಶದಲ್ಲಿ ಸಂಭವಿಸುತ್ತಿರುವ ಮೂರನೇ ಸಾವು. ಈ ಹಿಂದೆ, ಕರ್ನಾಟಕದಲ್ಲಿ 82 ವರ್ಷದ ವ್ಯಕ್ತಿ ಮತ್ತು ಹರಿಯಾಣದಲ್ಲಿ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿ ಕೂಡಾ ಸಾವನ್ನಪ್ಪಿದ್ದರು.

ವೇಗವಾಗಿ ಹರಡುವ H3N2 ಸೋಂಕು :
ಭಾರತದಲ್ಲಿ H3N2 ವೈರಸ್‌ ಸೋಂಕು ನಿರಂತರವಾಗಿ ಹರಡುತ್ತಿದೆ. IDSP-IHIP (ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, H3N2 ಸೇರಿದಂತೆ  ಈ ವೈರಸ್ ನ ವಿವಿಧ ಉಪ-ರೂಪಾಂತರಗಳ ಒಟ್ಟು 3038 ಪ್ರಕರಣಗಳು ಮಾರ್ಚ್ 9 ರವರೆಗೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಪತ್ತೆಯಾಗಿವೆ. 

ಇದನ್ನೂ ಓದಿ : Congress : ಕಾಂಗ್ರೆಸ್'ಗೆ ಬಿಗ್ ಶಾಕ್ : ಕೈಗೆ ಆಂಧ್ರಪ್ರದೇಶದ ಮಾಜಿ ಸಿಎಂ ರಾಜೀನಾಮೆ!

ಈ ಲಕ್ಷಣಗಳು ಕಂಡ ಬಂದ ತಕ್ಷಣ ಎಚ್ಚರದಿಂದಿರಿ : 
H3N2 ಹಂದಿ ಜ್ವರದಿಂದ (H1N1) ರೂಪಾಂತರಗೊಂಡ ವೈರಸ್ ಆಗಿದೆ. , ಇದನ್ನು ಸಾಮಾನ್ಯವಾಗಿ ಫ್ಲೂ ಎಂದು ಕರೆಯಲಾಗುತ್ತದೆ. ಆದರೂ ಇದರ ಲಕ್ಷಣಗಳು ಕೊರೊನಾವೈರಸ್‌ನಂತೆಯೇ ಇರುತ್ತವೆ. ಆದ್ದರಿಂದ ಎರಡರ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ. ಈ ವೈರಸ್‌ನ ಸಾಮಾನ್ಯ ಲಕ್ಷಣಗಳೆಂದರೆ ದೀರ್ಘಕಾಲದ ಜ್ವರ, ಕೆಮ್ಮು,  ಮೂಗು ಸೋರುವುದು  ಮತ್ತು ಮೈ ಕೈ ನೋವು. ಇದರೊಂದಿಗೆ, ಕೆಲವು ರೋಗಿಗಳಲ್ಲಿ ಉಸಿರಾಟದ ತೊಂದರೆ ಮತ್ತು ಉಬ್ಬಸದ ಸಮಸ್ಯೆಗಳು ಕೂಡಾ ಎದುರಾಗುವ ಸಾಧ್ಯತೆ ಇದೆ. 

ಸೋಂಕು ತಡೆಗಟ್ಟುವುದು ಹೇಗೆ ? : 
ಎಚ್3ಎನ್2 ಇನ್ಫ್ಲುಯೆಂಜಾ ವೈರಸ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಮಾಸ್ಕ್ ಬಳಸುವುದು, ಕಾಲಕಾಲಕ್ಕೆ ಕೈಗಳನ್ನು ತೊಳೆಯುವಂತೆ ಸೂಚಿಸಲಾಗಿದೆ.  ಇದರೊಂದಿಗೆ, ವರ್ಷಕ್ಕೊಮ್ಮೆ  ಫ್ಲೂ ಲಸಿಕೆಯನ್ನು ಹಾಕಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. 

ಇದನ್ನೂ ಓದಿ : ModiMosa ಎಂಬ ಹ್ಯಾಷ್‌ಟ್ಯಾಗ್ ಮೂಲಕ ಮೋದಿಯನ್ನು ಕರ್ನಾಟಕಕ್ಕೆ ಸ್ವಾಗತಿಸಿದ ಕಾಂಗ್ರೇಸ್..!‌

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News