Oscar Award: ನಿಮಗೊಂದು ವಿಷಯ ಗೊತ್ತಾ? ಸಿನಿಲೋಕದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಮೌಲ್ಯ ಜಸ್ಟ್ 82 ರೂ.!

Oscar Award 2023: ಈ ಬಾರಿಯ ಆಸ್ಕರ್ ಪ್ರಶಸ್ತಿ ಭಾರತೀಯರಿಗೆ ಕೊಂಚ ಮಹತ್ವದ್ದಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಒಂದು ಕಾರಣ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ನಿರೂಪಣೆ ಮಾಡಲಿರುವುದು. ಮತ್ತೊಂದು ವಿಚಾರವೆಂದರೆ ಆರ್ ಆರ್ ಆರ್ ಸಿನಿಮಾದ ‘ನಾಟು ನಾಟು’ ಹಾಡಿನ ಜೊತೆಗೆ ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿರುವುದು.

Written by - Bhavishya Shetty | Last Updated : Mar 12, 2023, 09:33 PM IST
    • ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಕ್ಷಣಗಣನೆ ಶುರುವಾಗಿದೆ
    • ಈ ಬಾರಿಯ ಆಸ್ಕರ್ ಪ್ರಶಸ್ತಿ ಭಾರತೀಯರಿಗೆ ಕೊಂಚ ಮಹತ್ವದ್ದಾಗಿ ಕಾಣಿಸಿಕೊಳ್ಳುತ್ತಿದೆ
    • ಇದನ್ನು ತಯಾರಿಸಲು ಎಷ್ಟು ಖರ್ಚಾಗುತ್ತದೆ ಎಂಬುದು ಕೂಡ ನಿಖರವಾಗಿಲ್ಲ
Oscar Award: ನಿಮಗೊಂದು ವಿಷಯ ಗೊತ್ತಾ? ಸಿನಿಲೋಕದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಮೌಲ್ಯ ಜಸ್ಟ್ 82 ರೂ.!  title=
Oscar Award

Oscar Award 2023: ಆಸ್ಕರ್ ಗಾಲಾ ಈ ವರ್ಷ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌’ಗೆ ನಡೆಯಲಿದೆ. ಇನ್ನು ಈಗಾಗಲೇ ಈ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಕ್ಷಣಗಣನೆ ಶುರುವಾಗಿದ್ದು, ಅಮೆರಿಕಾದ ಕಾಲಮಾನ ಪ್ರಕಾರ ಇಂದು ರಾತ್ರಿಯಿಂದಲೇ ಕಾರ್ಯಕ್ರಮ ಶುರುವಾಗಲಿದೆ. (ಭಾರತೀಯ ಕಾಲಮಾನ ಪ್ರಕಾರ ನಾಳೆ ಬೆಳಗ್ಗೆ 6.30)

ಇದನ್ನೂ ಓದಿ: Aashika Ranganath: ರೇಷ್ಮೆ ಸೀರೆ ಅಂದ ಹೆಚ್ಚಿಸಿದ ಆಶಿಕಾ ಸೌಂದರ್ಯ: ಈ ಬ್ಯೂಟಿಗೆ ದೃಷ್ಟಿಯಾಗದಂತೆ ಕಾಪಾಡಪ್ಪಾ ‘ರಂಗನಾಥ’

ಸಿನಿರಂಗದಲ್ಲಿಯೇ ಅತೀ ಪ್ರಸಿದ್ಧಿ ಪಡೆದಿರುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಬಗ್ಗೆ ಅನೇಕ ಮಾತುಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಆದರೆ ಇಂದು ನಿಮಗೆ ತಿಳಿಯದ ಮಹತ್ವದ ವಿಷಯದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈ ಬಾರಿಯ ಆಸ್ಕರ್ ಪ್ರಶಸ್ತಿ ಭಾರತೀಯರಿಗೆ ಕೊಂಚ ಮಹತ್ವದ್ದಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಒಂದು ಕಾರಣ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ನಿರೂಪಣೆ ಮಾಡಲಿರುವುದು. ಮತ್ತೊಂದು ವಿಚಾರವೆಂದರೆ ಆರ್ ಆರ್ ಆರ್ ಸಿನಿಮಾದ ‘ನಾಟು ನಾಟು’ ಹಾಡಿನ ಜೊತೆಗೆ ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿರುವುದು.

ಆಸ್ಕರ್ ಪ್ರಶಸ್ತಿ ಪ್ರದಾನದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಅನೇಕ ಗಣ್ಯರು ಆಗಮಿಸುತ್ತಾರೆ. ಭಾರತಿಯ ಕಾಲಮಾನದ ಪ್ರಕಾರ ಮಾರ್ಚ್ 13ರಂದು ಬೆಳಗ್ಗೆ 6.30ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕಾಗಿ ಸುಮಾರು ಒಂದು ತಿಂಗಳಿಂದ ನಿರಂತರವಾಗಿ ಅಕಾಡೆಮಿ ಕೆಲಸ ಮಾಡುತ್ತಿದೆ.

ಪ್ರಶಸ್ತಿಯ ಮೌಲ್ಯವೆಷ್ಟು?

ಸಿನಿರಂಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದರೆ ಸಾಕು, ಪ್ರಪಂಚವೇ ಅವರಿಗೆ ತಲೆಬಾಗುತ್ತದೆ. ಈ ಪ್ರಶಸ್ತಿಗೆ ಅಷ್ಟೊಂದು ಬೆಲೆಯಿದೆ. ಇನ್ನು ಈ ಪ್ರಶಸ್ತಿ ಪಡೆದುಕೊಂಡವರು ಅದನ್ನು ಮಾರಲು ಬಯಸಿದರೆ, ಅದರ ಮೌಲ್ಯ ಕೇವಲ 82 ರೂಪಾಯಿ ಇರುತ್ತದೆ. ಇದನ್ನು ತಯಾರಿಸಲು ಎಷ್ಟು ಖರ್ಚಾಗುತ್ತದೆ ಎಂಬುದು ಕೂಡ ನಿಖರವಾಗಿಲ್ಲ. ಇನ್ನು ಈ ಪ್ರಶಸ್ತಿಯನ್ನು ಕಂಚಿನಿಂದ ತಯಾರಿಸಿ ಅದಕ್ಕೆ ಚಿನ್ನದ ಲೇಪನ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Aashika Ranganath: ರೇಷ್ಮೆ ಸೀರೆ ಅಂದ ಹೆಚ್ಚಿಸಿದ ಆಶಿಕಾ ಸೌಂದರ್ಯ: ಈ ಬ್ಯೂಟಿಗೆ ದೃಷ್ಟಿಯಾಗದಂತೆ ಕಾಪಾಡಪ್ಪಾ ‘ರಂಗನಾಥ’

ಇನ್ನು ಮಾರಾಟ ಮಾಡುವಾಗ ಇದರ ಮೌಲ್ಯ ಅಷ್ಟೊಂದು ಕುಸಿಯಲು ಕಾರಣವೇನು ಗೊತ್ತಾ? ಒಂದು ಬಾರಿ ಈ ಪ್ರಶಸ್ತಿಯನ್ನು ಪಡೆದವರು ಅದನ್ನು ಬೇರೆಲ್ಲೂ ಮಾರುವಂತಿಲ್ಲ. ಇದೇ ಕಾರಣದಿಂದ ಆಸ್ಕರ್ ಅಕಾಡೆಮಿ ಈ ಮೌಲ್ಯವನ್ನು ನಿರ್ಧಾರ ಮಾಡಿದೆ. ಈ ಪ್ರಶಸ್ತಿಯನ್ನೂ ಯಾರು ಮಾರಾಟ ಮಾಡಬಾರದು ಎನ್ನುವುದೇ ಇದರ ಹಿಂದಿನ ಉದ್ದೇಶ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News