/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಮಕ್ಕಳು ಮಲಗುವ ಕೋಣೆಯಲ್ಲಿ ಡಿಜಿಟಲ್ ಸಾಧನಗಳನ್ನು ಇಡಬಾರದು ಎಂದು ಅಧ್ಯಯನವೊಂದು ತಿಳಿಸಿದೆ. ಮಕ್ಕಳು ಮಲಗುವ ಕೋಣೆಯಲ್ಲಿ ಡಿಜಿಟಲ್ ಸಾಧನಗಳನ್ನು ತೆಗೆದುಹಾಕುವ ಮೂಲಕ ಪೋಷಕರು ಮಕ್ಕಳ ನಿದ್ರೆಯನ್ನು ಸುಧಾರಿಸಬಹುದು ಎಂದು ಇದರಲ್ಲಿ ಹೇಳಲಾಗಿದೆ.

ಮಲಗುವ ಕೊಠಡಿಯಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಹಾಕುವುದು ಮತ್ತು ಶಾಂತಗೊಳಿಸುವುದರಿಂದ ಬೆಡ್ ರೂಂ ದಿನಚರಿಯನ್ನು ಪ್ರೋತ್ಸಾಹಿಸುವುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಬೆಡ್ ರೂಂ ನಲ್ಲಿ ಮೊದಲಿಗೆ ಡಿಜಿಟಲ್ ಸಾಧನಗಳ ಬಳಕೆಯು ಮಕ್ಕಳ ನಿದ್ರೆಗೆ ಸಾಕಷ್ಟು ತೊಂದರೆ ಉಂಟುಮಾಡುತ್ತದೆ ಎಂಬುದನ್ನು ಈ ಅಧ್ಯಯನದಿಂದ ತಿಳಿದುಬಂದಿದೆ.

ಮಕ್ಕಳ ನಿದ್ರೆಯನ್ನು ಸುಧಾರಿಸಲು ಪೋಷಕರಿಗೆ ಒಂದಿಷ್ಟು ಸಲಹೆ:

  • ನಿದ್ರೆ ಮತ್ತು ಆರೋಗ್ಯಕರ ನಿದ್ರೆಯ ನಿರೀಕ್ಷೆಗಳ ಬಗ್ಗೆ ಕುಟುಂಬದ ಸದಸ್ಯರೊಂದಿಗೆ ಮಾತನಾಡುವ ಮೂಲಕ ನಿದ್ರೆಗೆ ಆದ್ಯತೆ ನೀಡಿ.
  • ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ತಪ್ಪಿಸಿ, ಶಾಂತಗೊಳಿಸುವ ಚಟುವಟಿಕೆಗಳನ್ನು ಒಳಗೊಂಡಿರುವ ಬೆಡ್ ರೂಂ ದಿನನಿತ್ಯವನ್ನು ಪ್ರೋತ್ಸಾಹಿಸಿ.
  • ಮಗುವಿನಿಂದ ಅಥವಾ ಹದಿಹರೆಯದವರ ಮಲಗುವ ಕೊಠಡಿಯಿಂದ ಟಿವಿ, ವೀಡಿಯೋ ಗೇಮ್ಸ್, ಕಂಪ್ಯೂಟರ್, ಟ್ಯಾಬ್ಲೆಟ್ ಮತ್ತು ಸೆಲ್ ಫೋನ್ಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಹಾಕಲು ಕುಟುಂಬದವರನ್ನು ಪ್ರೋತ್ಸಾಹಿಸಿ.
  • ಮಕ್ಕಳ ಮನಸ್ಥಿತಿ ಅಥವಾ ನಡವಳಿಕೆ ಅವರ ಸಮಸ್ಯೆಗಳನ್ನು ಪ್ರದರ್ಶಿಸುತ್ತದೆ, ಅಂತಹ ಸಮಯದಲ್ಲಿ ಮಕ್ಕಳ ನಡವಳಿಕೆ ಸುಧಾರಿಸಲು ಸಾಕಷ್ಟು ನಿದ್ರೆಗೆ ಅನುವು ಮಾಡಿಕೊಡಿ.

ಸಂಶೋಧಕರ ಪ್ರಕಾರ, ಇಲೆಕ್ಟ್ರಾನಿಕ್ ಸಾಧನಗಳ ಅತಿಯಾದ ಬಳಕೆ ಮಾನಸಿಕ ಪ್ರಚೋದನೆ ಮತ್ತು ನಿದ್ರೆಗೆ ತೊಡಕಾಗುತ್ತದೆ. ಇದಕ್ಕೆ ಕಾರಣ ಇಲೆಕ್ಟ್ರಾನಿಕ್ ಸಾಧನಗಳ ಬೆಳಕು ಎಂದು ತಿಳಿದುಬಂದಿದೆ. ಈ ಕಾರಣದಿಂದಲೇ ಮಕ್ಕಳ ಬೆಡ್ ರೂಮ್ನಿಂದ ಡಿಜಿಟಲ್ ಸಾಧನಗಳನ್ನು ದೂರವಿರಿಸಬೇಕು ಎಂದು ಸಂಶೋಧನೆ ಶಿಫಾರಸ್ಸು ಮಾಡಿದೆ.

Section: 
English Title: 
Why you should keep digital devices in your kids bedroom
News Source: 
Home Title: 

ಮಕ್ಕಳ ಬೆಡ್ ರೂಂನಲ್ಲಿ ಡಿಜಿಟಲ್ ಸಾಧನಗಳನ್ನೇಕೆ ಇಡಬಾರದು!

ಮಕ್ಕಳ ಬೆಡ್ ರೂಂನಲ್ಲಿ ಡಿಜಿಟಲ್ ಸಾಧನಗಳನ್ನೇಕೆ ಇಡಬಾರದು!
Caption: 
ಸಾಂದರ್ಭಿಕ ಚಿತ್ರ
Yes
Is Blog?: 
No
Tags: 
Facebook Instant Article: 
Yes
Mobile Title: 
ಮಕ್ಕಳ ಬೆಡ್ ರೂಂನಲ್ಲಿ ಡಿಜಿಟಲ್ ಸಾಧನಗಳನ್ನೇಕೆ ಇಡಬಾರದು!
Publish Later: 
No
Publish At: 
Friday, January 4, 2019 - 15:49