ಭವಿಷ್ಯದ ಪತ್ರಕರ್ತರ ನೇಮಕಕ್ಕಾಗಿ ಝೀ ಮೀಡಿಯಾದಿಂದ ಪತ್ರಿಕೋದ್ಯಮ ಪ್ರವೇಶ ಪರೀಕ್ಷೆ

ಭವಿಷ್ಯದ ಪತ್ರಕರ್ತರು, ವರದಿಗಾರರನ್ನು ನೇಮಕ ಮಾಡಲು ಭಾರತದ ಅತಿದೊಡ್ಡ ಮೀಡಿಯಾ ಸಂಸ್ಥೆ ಝೀ ಮೀಡಿಯಾ ಆಲ್ ಇಂಡಿಯಾ ಪತ್ರಿಕೋದ್ಯಮ ಪ್ರವೇಶ ಪರೀಕ್ಷೆ ಪ್ರಾರಂಭಿಸಿದೆ.

Last Updated : Dec 28, 2018, 05:47 PM IST
ಭವಿಷ್ಯದ ಪತ್ರಕರ್ತರ ನೇಮಕಕ್ಕಾಗಿ ಝೀ ಮೀಡಿಯಾದಿಂದ ಪತ್ರಿಕೋದ್ಯಮ ಪ್ರವೇಶ ಪರೀಕ್ಷೆ title=

ಝೀ ಮೀಡಿಯಾ, ಎಸ್ಸೆಲ್ ಗ್ರೂಪ್ ಎಂಟಿಟಿ ಮತ್ತು ಭಾರತದ ಅತಿದೊಡ್ಡ ನ್ಯೂಸ್ ನೆಟ್ವರ್ಕ್, ಭವಿಷ್ಯದ ಪತ್ರಕರ್ತರು ಮತ್ತು ವರದಿಗಾರರ ನೇಮಕಕ್ಕಾಗಿ ಪತ್ರಿಕೋದ್ಯಮ ಪ್ರವೇಶ ಪರೀಕ್ಷೆಯನ್ನು ಪ್ರಾರಂಭಿಸಿದೆ.

ಝೀ ಮೀಡಿಯಾಗೆ ಆಯ್ಕೆ ಪ್ರಕ್ರಿಯೆಯು ಅತ್ಯಂತ ಕಠಿಣವಾಗಿದ್ದು, ಕೆಳಗಿನ ಹಂತಗಳು ಸೇರಿದಂತೆ ಅನೇಕ ಸುತ್ತುಗಳನ್ನು ಒಳಗೊಂಡಿರುತ್ತದೆ:

* ಝೀ ಆಪ್ಟಿಟ್ಯೂಡ್ ಟೆಸ್ಟ್ (ZAT) ಎಂದು ಕರೆಯಲ್ಪಡುವ ಪ್ಯಾನ್-ಇಂಡಿಯಾ ರಾಷ್ಟ್ರೀಯ ಲಿಖಿತ ಪರೀಕ್ಷೆ (Round 1)

* ವಿದ್ಯಾರ್ಥಿ ನಿಯೋಜನೆಗಳನ್ನು(assignments) ಸಲ್ಲಿಸುವುದು (Round 2)

* ಸಂಪಾದಕರು ಮತ್ತು HR ನೊಂದಿಗೆ ಸಂದರ್ಶನ (Round 3)

ಆಯ್ಕೆಯಾದ ವಿದ್ಯಾರ್ಥಿಗಳನ್ನು ಮೊಬೈಲ್ ಟೂಲ್ಸ್, ಮೊಬೈಲ್ ಜರ್ನಲಿಸಂ(MoJo) ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸೇರಿದಂತೆ ಬಹು-ಭಾಷಾ, ತಂತ್ರಗಳಲ್ಲಿ ನಿಪುಣ ಪತ್ರಕರ್ತರಾಗಲು ತರಬೇತಿ ನೀಡಲಾಗುತ್ತದೆ.

ಝೀ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಆರ್ಟ್ಸ್(ZIMA)ನಿಂದ ಏಪ್ರಿಲ್ / ಮೇ 2019 ರಿಂದ ಪ್ರಾರಂಭವಾಗುವ ಈ ತರಬೇತಿ ಅವಧಿಯು ಒಟ್ಟು 9 ತಿಂಗಳು.  ಇದಕ್ಕಾಗಿ ವಿದ್ಯಾರ್ಥಿಗಳು 1.5 ಲಕ್ಷ ರೂ. ಮತ್ತು ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ತರಬೇತಿಯು ಝೀ ಮೀಡಿಯಾದಲ್ಲಿ 3 ತಿಂಗಳ ಪಾವತಿ ಇಂಟರ್ನ್ಶಿಪ್(ತಿಂಗಳಿಗೆ 10,000 ರೂ.) ಅನ್ನು ಒಳಗೊಂಡಿದೆ.

ಆಯ್ಕೆ ಪ್ರಕ್ರಿಯೆಯ ಮೊದಲ ಹೆಜ್ಜೆಯೆಂದರೆ, ಝೀ ಆಪ್ಟಿಟ್ಯೂಡ್ ಟೆಸ್ಟ್ ಪರೀಕ್ಷೆಯನ್ನು 27 ಜನವರಿ 2019 (ಭಾನುವಾರ)ರಂದು ಬೆಳಿಗ್ಗೆ 10 ರಿಂದ 12 ರವರೆಗೆ ನಿಗದಿಪಡಿಸಲಾಗಿದೆ. ಪರೀಕ್ಷೆ ಸಾಮಾನ್ಯ ಜ್ಞಾನ MCQ ಗಳು ಮತ್ತು ವ್ಯಕ್ತಿನಿಷ್ಠ, ಪ್ರಬಂಧ ಆಧಾರಿತ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಪ್ರವೇಶ ಪರೀಕ್ಷೆಗೆ ಅರ್ಹತೆ ಪಡೆಯಲು, ವಿದ್ಯಾರ್ಥಿ ಬ್ಯಾಚುಲರ್ ಪದವಿ ಅಥವಾ ಸಮಾನತೆಯ ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 50% ಅಂಕಗಳನ್ನು ಅಥವಾ ಸಮಾನ ಸಿಜಿಪಿಎವನ್ನು ಪಡೆದಿರಬೇಕು. ತಮ್ಮ ಸ್ನಾತಕೋತ್ತರ ಪದವಿಯ ಅಂತಿಮ ವರ್ಷ ಮತ್ತು ತಮ್ಮ ಪದವಿಯ ಅಗತ್ಯತೆಗಳನ್ನು ಪೂರ್ಣಗೊಳಿಸಿದ ಮತ್ತು ಫಲಿತಾಂಶಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಭಾರತದಾದ್ಯಂತ ಹಲವಾರು ನಗರಗಳಲ್ಲಿ ಈ ಆಲ್ ಇಂಡಿಯಾ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಗರ್ತಲಾ, ಅಹಮದಾಬಾದ್, ಐಜಾವಾಲ್, ಅಮೃತಸರ್, ಹೈದರಾಬಾದ್, ಭಟಿಂಡಾ, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಗ್ವಾಲಿಯರ್, ಹರಿದ್ವಾರ, ಹಿಸಾರ್, ಇಂಫಾಲ್, ಇಂದೋರ್, ಇಟಾನಗರ್, ಕಾನ್ಪುರ್, ಕೊಹಿಮಾ, ಕೊಟ್ಟಾಯಂ, ಲಕ್ನೋ, ಲುಧಿಯಾನ, ಮೀರತ್, ಮುಂಬೈ, ನಾಶಿಕ್, ನವದೆಹಲಿ, ನೊಯ್ಡಾ, ಪಣಜಿ, ಪಟಿಯಾಲ, ಪ್ರೇಗ್ರಾಜ್, ಪುಣೆ, ಶಿಲ್ಲಾಂಗ್, ಶ್ರೀನಗರ, ವಾರಣಾಸಿ, ವಿಶಾಖಪಟ್ಟಣಂ ಸೇರಿದಂತೆ ಭಾರತದ ಹಲವು ನಗರಗಳಲ್ಲಿ ಈ ಆಲ್ ಇಂಡಿಯಾ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. 

ಪ್ರವೇಶ ಪರೀಕ್ಷೆಯ ದಾಖಲಾತಿ ಪ್ರತಿ ವಿದ್ಯಾರ್ಥಿಗೆ ರೂ. 1000 /- ಆಗಿರುತ್ತದೆ. ಈ ಲಿಂಕ್ನಲ್ಲಿ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಆನ್ಲೈನ್ನಲ್ಲಿ ಪಾವತಿಸಬಹುದಾಗಿದೆ. Www.zimainstitute.com/zat-registration.aspx.

ಎಸ್ಸೆಲ್ ಗ್ರೂಪ್ ಮತ್ತು ಸಿಟಿ ನೆಟ್ವರ್ಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಸಿಧಾರ್ಥ್ ಬಾಲಕೃಷ್ಣ ZAT ಬಗ್ಗೆ ಮಾತನಾಡುತ್ತ, ರಚನಾತ್ಮಕ ಆಯ್ಕೆ, ತರಬೇತಿ ಮತ್ತು ಆನ್ ಬೋರ್ಡಿಂಗ್ ಕಾರ್ಯಕ್ರಮದ ಮೂಲಕ ಈ ದೇಶದ ಯುವಜನರಿಗೆ ಪ್ರಯೋಜನವಾಗಲು ಎರಡು ಎಸ್ಸೆಲ್ ಘಟಕಗಳು ಒಟ್ಟಿಗೆ ಬರುವುದು ಸಂತೋಷದ ಸಂಗತಿ. ಇದು ನಿಜವಾದ ಆಟದ-ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ದೇಶಾದ್ಯಂತ ಮಾಧ್ಯಮಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಉತ್ತಮ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಸದಾ ನಮ್ಮನ್ನು ಕನಸು ಮತ್ತು ದೊಡ್ಡ ದೊಡ್ಡ ಚಿಂತನೆ ಮಾಡುವಂತೆ ಪ್ರೇರೇಪಿಸುವ ಗ್ರೂಪ್ ಚೇರ್ಮನ್ ಈ ಹೆಜ್ಜೆಗೆ ಸ್ಪೂರ್ತಿ ಎಂದಿದ್ದಾರೆ.

ಝೀ ಲರ್ನ್ ಸಿಇಒ ದೆಬ್ಶಂಕರ್ ಮುಖೋಪಾಧ್ಯಾಯ್ ಮಾತನಾಡುತ್ತಾ, "ZMCL ಸಹಯೋಗದೊಂದಿಗೆ ZIMA ಪ್ರಾರಂಭಿಸಿದ ಈ 9 ತಿಂಗಳ ತರಬೇತಿ ಕಾರ್ಯಕ್ರಮ ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣದಲ್ಲಿ ಒಂದು ಮಾದರಿಯಾಗಲಿದೆ. ಪತ್ರಿಕೋದ್ಯಮದಲ್ಲಿ ಅವರ ವೃತ್ತಿಜೀವನವನ್ನು ಬಯಸುವ ವ್ಯಕ್ತಿಗಳು ಪತ್ರಿಕೋದ್ಯಮದ ಎಲ್ಲಾ ಕೌಶಲ್ಯ ಮತ್ತು ತಂತ್ರಗಳನ್ನು ಕಲಿಯಲು ಉತ್ತಮ ಅವಕಾಶವನ್ನು ಪಡೆಯುತ್ತಾರೆ" ಎಂದರು.

"ZAT ಝೀ ಮಿಡಿಯಾ ಮತ್ತು ಡಿಎನ್ಎ ಯ ರಾಷ್ಟ್ರೀಯ ಪ್ರತಿಭೆ ಹುಡುಕಾಟವು ಸೃಜನಶೀಲ ತಾಜಾ ಪದವೀಧರರಿಗೆ ಬಹು-ರೂಪ ಮತ್ತು ಬಹು-ಭಾಷಾ ಪತ್ರಕರ್ತರಾಗಿ (ಪ್ರಸಾರ + ಮುದ್ರಣ + ಡಿಜಿಟಲ್ ಸುದ್ದಿಗಳನ್ನು ನಿರ್ವಹಿಸುವ ಸಾಮರ್ಥ್ಯ) ನಮ್ಮ ಕಂಪೆನಿಯಲ್ಲಿ ಸೇರಲು ಉತ್ಸುಕರಾಗಿದ್ದೇವೆ.  ಭಾರತದ ಅತಿದೊಡ್ಡ ಸುದ್ದಿ ಜಾಲಗಳಲ್ಲಿ ಒಂದನ್ನು ಮಾಧ್ಯಮ ವಲಯದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಲು ದೇಶದ ಮೂಲೆ ಮೂಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಇದು ಒಂದು ಅದ್ಭುತ ಅವಕಾಶ" ಎಂದು ಝೀ ಮಿಡಿಯಾ CHRO ಸುಶೀಲ್ ಜೋಶಿ ಹೇಳಿದರು. 

ಹೆಚ್ಚಿನ ಮಾಹಿತಿಗಾಗಿ, www.zimainstitute.com/zat-registration.aspx ಗೆ ಲಾಗ್ ಆನ್ ಆಗಿ.

Trending News