Shiva Temple: ಧರ್ಮ ಮೀರಿ ಶಿವ ದೇವಾಲಯ ನಿರ್ಮಿಸಿದ ಕ್ರಿಶ್ಚಿಯನ್ ಅಧಿಕಾರಿ!

Shiva Temple: ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿ ಇರುವ  ಶಿವಾಲಯವೊಂದು  ವಿಸ್ಮಯಕ್ಕೆ ಕಾರಣವಾಗಿದೆ. ಏಕೆಂದರೆ  ಇದನ್ನು ಕಟ್ಟಿಸಿದವರು ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿಯಿಂದ ನಿರ್ಮಾಣವಾಗಿದೆ.

Written by - Zee Kannada News Desk | Last Updated : Feb 18, 2023, 03:34 PM IST
  • ಕ್ರಿಶ್ಚಿಯನ್ ಅಧಿಕಾರಿಯಿಂದ ಶಿವ ದೇವಾಲಯ ನಿರ್ಮಾಣ
  • ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿ ಇರುವ ಶಿವಾಲಯ
  • 1883ರಲ್ಲಿ ಅವರು ಹದಿನೈದು ಸಾವಿರ ರೂಪಾಯಿಗಳಿಂದ ರೂಪಿತವಾದ ದೇವಾಲಯ
Shiva Temple: ಧರ್ಮ ಮೀರಿ ಶಿವ ದೇವಾಲಯ ನಿರ್ಮಿಸಿದ ಕ್ರಿಶ್ಚಿಯನ್ ಅಧಿಕಾರಿ! title=

Shiva Temple: ಅಂದಿನಿಂದ ಇಂದಿನವರೆಗೂ ಧರ್ಮಕ್ಕಾಗಿ ಜಟಾಪಟಿ ನಡೆಯುವ ಮಧ್ಯೆ  ಶಿವ ದೇವಾಲಯದ ನಿರ್ಮಾಣದಲ್ಲಿ ಕ್ರಿಶ್ಚಿಯನ್ ಅಧಿಕಾರಿಯ ಸಹಮತದ ಕಥೆಯೊಂದು ಬೆಳಕಿಗೆ ಬಂದಿದೆ.

ಯಾವ  ಕ್ರಿಶ್ಚಿಯನ್ ಅಧಿಕಾರಿಯಿಂದ ಶಿವ ದೇವಾಲಯ ನಿರ್ಮಾಣವಾಯಿತು ...ಇದರ ಹಿಂದಿರುವ ರೋಚಕಥೆಯೇನು ತಿಳಿಯೋಣ..
 ಮಧ್ಯಪ್ರದೇಶದ ಶಾಜಾಪೂರ್ ಜಿಲ್ಲೆಯ ಅಗರ್ ಎಂಬಲ್ಲಿ ಇರುವ  ಶಿವಾಲಯವೊಂದು  ವಿಸ್ಮಯಕ್ಕೆ ಕಾರಣವಾಗಿದೆ. ಏಕೆಂದರೆ  ಇದನ್ನು ಕಟ್ಟಿಸಿದವರು ಬ್ರಿಟಿಷ್ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಾರ್ಟಿನ್ ಎಂಬ ಕ್ರಿಶ್ಚಿಯನ್ ಅಧಿಕಾರಿಯಿಂದ ನಿರ್ಮಾಣವಾಗಿದೆ.

ಇದನ್ನೂ ಓದಿ:FD Rates Hike: ಈ ಬ್ಯಾಂಕ್ ಶೇ.9.5ರಷ್ಟು ನೀಡುತ್ತಿದೆ! ಕೂಡಲೇ ಹೂಡಿಕೆ ಮಾಡಿ 

1879ರಲ್ಲಿ ಮಾರ್ಟಿನ್ ಅಫ್ಘಾನಿಸ್ಥಾನದ ಯುದ್ಧರಂಗದಲ್ಲಿದ್ದರು  ಅವರ ಪತ್ನಿ ಮಧ್ಯಪ್ರದೇಶದಲ್ಲಿ ನೆಲೆಸಿದ್ದರು .  ತಮ್ಮ ಯೋಗಕ್ಷೇಮವನ್ನು ಪತ್ರ ಮೂಲಕ  ಪತ್ನಿಗೆ ತಿಳಿಸುತ್ತಿದ್ದರು. ಇದ್ದಕ್ಕಿದ್ದಂತೆ ಪತ್ರಗಳು ಬರುವುದು ನಿಂತುಹೋದಾಗ  ಮಾರ್ಟಿನ್ ಪತ್ನಿ  ಚಿಂತೆಗೊಳಗಾದರು.ಒಮ್ಮೆ ಆಕೆ ಅಲ್ಲಿದ್ದ ಬೈಜನಾಥ್ ಮಹಾದೇವ ಮಂದಿರದ ಬಳಿ ಹೋಗುತ್ತಿದ್ದಾಗ ದೇವಾಲಯದೊಳಗಿನಿಂದ ಕೇಳಿಬರುತ್ತಿದ್ದ ಮಂತ್ರೋಚ್ಛಾರಣೆಯ ಮತ್ತು ಶಂಖ- ಜಾಗಟೆಗಳ ಶಬ್ದ ಆಕೆಯನ್ನು ಆಕರ್ಷಿಸಿತು.

ಆಕೆ ಕುತೂಹಲದಿಂದ ದೇವಾಲಯದೊಳಕ್ಕೆ ಹೋಗಿ ನಿಂತುಕೊಂಡರು. ಅಲ್ಲಿ ಪೂಜೆ ಮಾಡುತ್ತಿದ್ದ ಪುರೋಹಿತರು ಆಕೆ ಚಿಂತಾಕ್ರಾಂತಳಾಗಿರುವ ಕಾರಣವನ್ನು ಕೇಳಿದರು. ಆಕೆ "ನನ್ನ ಪತಿ ಯುದ್ಧರಂಗಕ್ಕೆ ಹೋಗಿದ್ದಾರೆ. ಅವರಿಂದ ಹಲವಾರು ದಿನಗಳಿಂದ ಯಾವ ಸಂದೇಶವೂ ಬಂದಿಲ್ಲ. ಅವರಿಗೆ ಏನಾಗಿದೆಯೋ ಏನೋ?" ಎಂದು ಗೋಳಾಡಿದರು.

ಇದನ್ನೂ ಓದಿ: ಪ್ರಧಾನ ಮಂತ್ರಿ ಮಂಧನ್ ಯೋಜನೆಯಿಂದ ಯಾರಿಗೆ ಲಾಭ ..?

ಪುರೋಹಿತರು ಸಂದರ್ಭೋಚಿತವಾಗಿ ಸಾಂತ್ವನ ಹೇಳುತ್ತಾ "ನೀವು ಶಿವನನ್ನು ನಂಬಿ ಪ್ರಾರ್ಥಿಸಿ. ಕಷ್ಟಗಳಿಂದ ಪಾರುಗೊಳಿಸುತ್ತಾನೆ" ಎಂದರು. ಆಕೆ ಏನು ಪ್ರಾರ್ಥನೆ ಮಾಡಬೇಕೆಂದು ಕೇಳಿದಾಗ ಅವರು 'ಲಘುರುದ್ರ ಅನುಷ್ಠಾನವನ್ನೂ, ಓಂ ನಮಃ ಶಿವಾಯ ಮಂತ್ರಜಪವನ್ನೂ ಹನ್ನೊಂದು ದಿನಗಳ ಕಾಲ ಮಾಡಲು' ಸೂಚಿಸಿದರು.

ಆಕೆ ಅದರಂತೆ ಹನ್ನೊಂದು ದಿನ ಶ್ರದ್ಧೆಯಿಂದ ಮಂತ್ರಜಪವನ್ನು ಮಾಡಿದರು. ಹನ್ನೊಂದನೆಯ ದಿನ ಮಾರ್ಟಿನ್ನರಿಂದ ಒಂದು ಪತ್ರ ಬಂದಿತು. ಅದರಲ್ಲಿ "ಇಲ್ಲಿ ಯುದ್ಧರಂಗದಲ್ಲಿ ಇದ್ದಕ್ಕಿದ್ದಂತೆ ಪಠಾಣರು ನಮ್ಮನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದಿದ್ದರು. ತಪ್ಪಿಸಿಕೊಳ್ಳಲು ಯಾವುದೇ ಅವಕಾಶಗಳಿರಲಿಲ್ಲ. ಸಾವು ಖಚಿತವೆನಿಸಿತ್ತು ಹಾಗಾಗಿ ನಿನಗೆ ಸಂದೇಶಗಳನ್ನು ಕಳುಹಿಸುತ್ತಿರಲಿಲ್ಲ. ಏನೂ ತೋಚದ ಪರಿಸ್ಥಿತಿಯಲ್ಲಿದ್ದಾಗ, ಇದ್ದಕ್ಕಿದ್ದಂತೆ ಒಬ್ಬ ಭಾರತೀಯ ಯೋಗಿ ಅಲ್ಲಿಗೆ ಬಂದರು. ಆತ ಆಜಾನುಬಾಹು, ಉದ್ದ ಜಡೆ, ಕೈಯಲ್ಲಿ ತ್ರಿಶೂಲ, ಚರ್ಮದ ಉಡುಪು, ಬೆರಗುಗೊಳಿಸುವ ವ್ಯಕ್ತಿತ್ವ ಹೊಂದಿದ್ದ. ಆತ ಕೈಯಲ್ಲಿ ತ್ರಿಶೂಲವನ್ನು ಹಿಡಿದು ತಿರುಗಿಸುವ ರೀತಿಯನ್ನು ನೋಡಿ ಪಠಾಣರು ಪ್ರಾಣಭಯದಿಂದ ಓಡಿಹೋದರು.

ಇದನ್ನೂ ಓದಿ:ಸೇನೆಯ ನೂತನ ಉಪ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್ ನೇಮಕ

 ಆಜಾನುಬಾಹುನಿಂದ ಜೀವ ಬದುಕುಳಿಯಲು ಕಾರಣವಾಯಿತು.  ಆ ಕೂಡಲೇ  ಯೋಗಿಗೆ ವಂದಿಸಿದೆ  ಆತ "ನಿಮ್ಮ ಪತ್ನಿಯ ಪ್ರಾರ್ಥನೆಯಿಂದಾಗಿ ನಿಮ್ಮನ್ನು ರಕ್ಷಿಸಲು ನಾನಿಲ್ಲಿ ಬಂದಿದ್ದೇನೆ ಎಂದರು" ಎಂದು ಬರೆದಿತ್ತು. ಕಾಗದವನ್ನು ಓದುತ್ತಿದ್ದಂತೆ  ಮಾರ್ಟಿನ್ ಪತ್ನಿ  ಸಂತೋಷದ ಕಣ್ಣೀರು ಸುರಿಸಿದರು. ಅವರ ಹೃದಯ ತುಂಬಿ ಬಂತು. ಅವರು ತಮ್ಮ ಮನೆಯಲ್ಲಿಟ್ಟು ಪೂಜಿಸುತ್ತಿದ್ದ ಶಿವನ ಮೂರ್ತಿಗೆ ಮತ್ತೆಮತ್ತೆ ನಮಸ್ಕಾರ ಮಾಡಿದರು. ಇದಾದ ಕೆಲವೇ ವಾರಗಳಲ್ಲಿ ಮಾರ್ಟಿನ್ ಹಿಂದಿರುಗಿ ಬಂದರು.

ಮಾರ್ಟಿನ್ ಪತ್ನಿ  ಇಲ್ಲಿ ಲಘುರುದ್ರ ಅನುಷ್ಠಾನ, 'ಓಂ ನಮಃ ಶಿವಾಯ' ಮಂತ್ರ ಜಪಿಸಿದ್ದನ್ನೂ ತಿಳಿಸಿದರು. ಅಂದಿನಿಂದ ದಂಪತಿಗಳಿಬ್ಬರೂ ಶಿವಭಕ್ತರಾದರು. 1883ರಲ್ಲಿ ಅವರು ಹದಿನೈದು ಸಾವಿರ ರೂಪಾಯಿಗಳನ್ನು ಕೊಟ್ಟು ದೇವಾಲಯದ ಇರುವ ಒಂದು ಶಿಲಾಶಾಸನದಲ್ಲಿ ಈ ಘಟನೆಯ ವಿವರಗಳು ಕೆತ್ತಲ್ಪಟ್ಟಿದೆ. ಭಾರತವನ್ನು ಆಳಿದ ಬ್ರಿಟೀಷರು ಕೆತ್ತಿಸಿ ಕೊಟ್ಟ ಏಕೈಕ ಹಿಂದೂ ದೇವಾಲಯ ಈಗಲೂ ಅಲ್ಲಿದೆ.

 ದೇವರು ಯಾರಾದರೇನು? ಭಕ್ತರು ಯಾರಾದರೇನು? ನಂಬಿ ಕರೆದೊಡೆ ದೇವರು ಓ ಎನ್ನದಿರುತ್ತಾನೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News