Astro Tips: ಶುಕ್ರವಾರ ಈ ಒಂದು ಕೆಲಸ ಮಾಡಿದ್ರೆ ಲಕ್ಷ್ಮಿದೇವಿ ಆಶೀರ್ವಾದದಿಂದ ಧನಲಾಭವಾಗಲಿದೆ

ಶುಕ್ರವಾರವು ಲಕ್ಷ್ಮಿದೇವಿಗೆ ಸಮರ್ಪಿತವಾಗಿದೆ. ಈ ದಿನ ಶ್ರದ್ಧಾ-ಭಕ್ತಿಯಿಂದ ಮಾಡುವ ಪೂಜೆ ಮತ್ತು ಕೆಲವು ಜ್ಯೋತಿಷ್ಯ ಕ್ರಮಗಳು ವಿಶೇಷ ಫಲಿತಾಂಶಗಳನ್ನು ನೀಡುತ್ತವೆ. ಲಕ್ಷ್ಮಿದೇವಿಯ ಆಶೀರ್ವಾದವನ್ನು ಹೊಂದಿರುವವರಿಗೆ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಕೊರತೆಯಿಲ್ಲವೆಂದು ನಂಬಲಾಗಿದೆ.

Written by - Puttaraj K Alur | Last Updated : Feb 17, 2023, 04:33 PM IST
  • ಶಾಸ್ತ್ರಗಳ ಪ್ರಕಾರ ಶುಕ್ರವಾರ ಲಕ್ಷ್ಮಿದೇವಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದು ಮಂಗಳಕರ
  • ಸಂತೋಷ & ಸಮೃದ್ಧಿ ಮತ್ತು ಪ್ರಗತಿಗಾಗಿ ಶುಕ್ರವಾರ ಲಕ್ಷ್ಮಿದೇವಿಗೆ ಕಮಲದ ಹೂ ಅರ್ಪಿಸಬೇಕು
  • ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಕೆಲವರು ಶುಕ್ರವಾರ ಉಪವಾಸ ಆಚರಿಸುತ್ತಾರೆಂದು ನಂಬಲಾಗಿದೆ
Astro Tips: ಶುಕ್ರವಾರ ಈ ಒಂದು ಕೆಲಸ ಮಾಡಿದ್ರೆ ಲಕ್ಷ್ಮಿದೇವಿ ಆಶೀರ್ವಾದದಿಂದ ಧನಲಾಭವಾಗಲಿದೆ title=
Friday Remedies

ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳು& ಸಂಪತ್ತನ್ನು ಪಡೆಯುವ ಕನಸು ಕಾಣುತ್ತಾನೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ. ಆದರೆ ವ್ಯಕ್ತಿಯ ಪ್ರತಿಯೊಂದು ಕನಸು ಈಡೇರುವುದಿಲ್ಲ. ಇದಕ್ಕಾಗಿ ವ್ಯಕ್ತಿಗೆ ಅದೃಷ್ಟದ ಬೆಂಬಲವೂ ಬೇಕು. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಿತಿಯಿಂದ ವ್ಯಕ್ತಿಯ ಜೀವನದಲ್ಲಿ ಹಣದ ಕೊರತೆಯಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರವನ್ನು ಲಕ್ಷ್ಮಿದೇವಿಗೆ ಸಮರ್ಪಿಸಲಾಗಿದೆ. ಶ್ರದ್ಧಾಭಕ್ತಿಯಿಂದ ಲಕ್ಷ್ಮಿದೇವಿಯನ್ನು ಪೂಜಿಸಿದರೆ ಭಕ್ತರು ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸುವುದಿಲ್ಲ. ಶುಕ್ರವಾರ ಕೆಲವು ವಿಶೇಷ ಕ್ರಮ ಕೈಗೊಂಡರೆ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.  

ಶುಕ್ರವಾರ ಈ ಪರಿಹಾರ ಮಾಡಿ

- ಶಾಸ್ತ್ರಗಳ ಪ್ರಕಾರ ಶುಕ್ರವಾರದಂದು ಲಕ್ಷ್ಮಿದೇವಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಸಂಪತ್ತಿನ ಅಧಿದೇವತೆ ಸಂತೋಷವಾಗುತ್ತಾಳೆಂದು ಹೇಳಲಾಗುತ್ತದೆ. ಇದರೊಂದಿಗೆ ಲಕ್ಷ್ಮೀದೇವಿಯ ಶ್ರೀ ಸೂಕ್ತ ಪಠ್ಯ ಅಥವಾ ಕನಕಧಾರಾ ಮೂಲವನ್ನು ಪಠಿಸುವುದರಿಂದ ವಿಶೇಷ ಲಾಭ ದೊರೆಯುತ್ತದೆ. ಹಣದ ಆಗಮನಕ್ಕಾಗಿ ಇದನ್ನು ಪಠಿಸುವುದರಿಂದ ಲಕ್ಷ್ಮಿದೇವಿಯು ಶೀಘ್ರವಾಗಿ ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರ ಮೇಲೆ ಅನುಗ್ರಹ ನೀಡುತ್ತಾಳೆಂದು ಹೇಳಲಾಗುತ್ತದೆ. 

ಇದನ್ನೂ ಓದಿ: Vastu Tips : ಈ 2 ವಸ್ತುವನ್ನು ಯಾವತ್ತೂ ಮನೆಯಲ್ಲಿ ಇಡಬೇಡಿ, ಇಡೀ ಕುಟುಂಬವೇ ದಿವಾಳಿಯಾಗುತ್ತೆ!

- ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಪಡೆಯಲು ಮತ್ತು ಪ್ರಗತಿ ಸಾಧಿಸಲು ಶುಕ್ರವಾರದಂದು ಲಕ್ಷ್ಮಿದೇವಿಗೆ ಕಮಲದ ಹೂ ಅರ್ಪಿಸಬೇಕೆಂದು ಹೇಳಲಾಗುತ್ತದೆ. ಕಮಲ ಅಥವಾ ಗುಲಾಬಿ ಹೂವು ಸಂಪತ್ತಿನ ದೇವತೆಗೆ ತುಂಬಾ ಪ್ರಿಯವಾಗಿದೆ. ಕಮಲದ ಹೂವಿನಲ್ಲಿ ಲಕ್ಷ್ಮಿದೇವಿಯೇ ನೆಲೆಸಿದ್ದಾಳೆಂದು ನಂಬಲಾಗಿದೆ. ಈ ಹೂವುಗಳನ್ನು ಲಕ್ಷ್ಮಿದೇವಿಗೆ ಅರ್ಪಿಸಿದರೆ ಅವಳು ಮನೆಯನ್ನು ಪ್ರವೇಶಿಸುತ್ತಾಳಂತೆ.

- ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಕೆಲವರು ಶುಕ್ರವಾರ ಉಪವಾಸ  ಆಚರಿಸುತ್ತಾರೆಂದು ನಂಬಲಾಗಿದೆ. ಈ ದಿನ ತಾಯಿಗೆ ಖೀರ್ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತಾಯಿಗೆ ಪ್ರಸಾದ ಅರ್ಪಿಸಿದ ನಂತರ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರಿಗೆ ಅದನ್ನು ಹಂಚಬೇಕು. ಈ ಪರಿಹಾರ ಮಾಡುವುದರಿಂದ ಯಾವುದೇ ವ್ಯಕ್ತಿಯು ಸಾಲದಿಂದ ಮುಕ್ತನಾಗುತ್ತಾನೆ ಮತ್ತು ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. 

ಇದನ್ನೂ ಓದಿ: Aghori Baba: ಕರಾಳ ರಾತ್ರಿ, ತಂತ್ರ-ಮಂತ್ರ.. ಶವ ತಿನ್ನುತ್ತಾ ಶಿವಾರಾಧನೆ.. ಹೀಗಿರುತ್ತೆ ಅಘೋರ ಸಾಧನ.!

- ಶುಕ್ರವಾರದಂದು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಿದ ನಂತರ ಅದೃಷ್ಟ ಮತ್ತು ಆರೋಗ್ಯಕ್ಕಾಗಿ ಸುಹಾಗ್ನ ಪದಾರ್ಥಗಳನ್ನು ಅರ್ಪಿಸುವುದು ಶುಭ ಫಲಿತಾಂಶ ನೀಡುತ್ತದೆ. ವಿವಾಹಿತ ಮಹಿಳೆಯರಿಗೆ ಈ ವಸ್ತುಗಳನ್ನು ನೀಡುವುದರಿಂದ ತಾಯಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಶೀಘ್ರದಲ್ಲೇ ಈಡೇರಿಸುತ್ತಾಳಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News