Who is Sapna Gill: ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ ಹೆಸರು ಇವಾಗ ವಿವಾದಕ್ಕೆ ಸಿಲುಕಿದೆ. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಂಬೈನ ಬೀದಿಯಲ್ಲಿ ಪೃಥ್ವಿ ಶಾ ಮೇಲೆ ಯುವತಿಯೊಬ್ಬಳು ಹಲ್ಲೆ ನಡೆಸಿದ್ದಾಳೆ ಎಂಬ ಸುದ್ದಿ ಹರಿದಾಡುತ್ತಿದೆ. ಸಣ್ಣದೊಂದು ವಿಷಯ ವಿಕೋಪಕ್ಕೆ ತಿರುಗಿದ್ದು ಪೃಥ್ವಿಯ ಸ್ನೇಹಿತನ ಕಾರಿನ ಗಾಜು ಪುಡಿ ಪುಡಿ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಪೃಥ್ವಿ ಶಾ ಜೊತೆ ಗಲಾಟೆ ನಡೆದ ಯುವತಿ ಹೆಸರು ಸಪ್ನಾ ಗಿಲ್.
ಪೃಥ್ವಿ ಶಾ ಸ್ನೇಹಿತ ಎಫ್ಐಆರ್ ದಾಖಲಿಸಿದ್ದಾರೆ. ಶಾ ಅವರ ಸ್ನೇಹಿತನ ದೂರಿನ ಪ್ರಕಾರ, ಮುಂಬೈ ವಿಮಾನ ನಿಲ್ದಾಣದ ಬಳಿಯ ಐಷಾರಾಮಿ ಹೋಟೆಲ್ನಲ್ಲಿ ಬುಧವಾರ ಮುಂಜಾನೆ ಇಬ್ಬರು ಅಭಿಮಾನಿಗಳು (ಒಬ್ಬ ಪುರುಷ ಮತ್ತು ಮಹಿಳೆ) ಪೃಥ್ವಿ ಅವರನ್ನು ಸೆಲ್ಫಿಗಾಗಿ ಸಂಪರ್ಕಿಸಿದಾಗ ಈ ಜಗಳ ಪ್ರಾರಂಭವಾಗಿದೆ.
ಪೃಥ್ವಿ ಶಾ ಸ್ನೇಹಿತನ ಕಾರಿನ ಗಾಜು ಒಡೆದು 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ 8 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ನಲ್ಲಿ ಹೆಸರಿಸಲಾದ ಇಬ್ಬರನ್ನು ಶೋಭಿತ್ ಠಾಕೂರ್ ಮತ್ತು ಸಪ್ನಾ ಗಿಲ್ ಎಂದು ಗುರುತಿಸಲಾಗಿದೆ.
ಆದರೆ ಸಪ್ನಾ ಗಿಲ್ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಪೃಥ್ವಿ ತನ್ನ ಮೇಲೆ ಮೊದಲು ಹಲ್ಲೆ ನಡೆಸಿದ್ದಾನೆ ಎಂದು ಅವರ ವಕೀಲರು ಹೇಳಿದ್ದಾರೆ. ಪೃಥ್ವಿ ಶಾ ಕೈಯಲ್ಲಿ ಬೇಸ್ಬಾಲ್ ಬ್ಯಾಟ್ ಇರುವುದು ವೀಡಿಯೊದಲ್ಲಿ ಕಾಣಿಸಿಕೊಂಡಿದೆ.
ಸಪ್ನಾ ಗಿಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಅವರು ಇಲ್ಲಿಯವರೆಗೆ 1,471 ಪೋಸ್ಟ್ಗಳನ್ನು ಮಾಡಿದ್ದಾರೆ. ಜೊತೆಗೆ Instagram ನಲ್ಲಿ 218,000 ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಸಪ್ನಾ ಗಿಲ್ ಅವರು 2021 ರಲ್ಲಿ ಭೋಜ್ಪುರಿ ಚಲನಚಿತ್ರ ಮೇರಾ ವತನ್ ಮತ್ತು 2017 ರಲ್ಲಿ ಕಾಶಿ ಅಮರನಾಥ್ನಲ್ಲಿ ಕೆಲಸ ಮಾಡಿದ್ದಾರೆ.
ಎಫ್ಐಆರ್ನಲ್ಲಿ ಹೆಸರಿಸಲಾದ ವ್ಯಕ್ತಿಗಳು ಈ ಎಲ್ಲಾ ಆರೋಪಗಳನ್ನು ಪ್ರಶ್ನಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಪ್ನಾ ಗಿಲ್ ಪರ ವಕೀಲ ಅಲಿ ಕಾಶಿಫ್ ಖಾನ್, ಪೃಥ್ವಿ ಶಾ ಸಪ್ನಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಗಿಲ್ನ ಸ್ನೇಹಿತ ಚಿತ್ರೀಕರಿಸಿದ ವೀಡಿಯೊದಲ್ಲಿ ಬೇಸ್ಬಾಲ್ ಬ್ಯಾಟ್ ಶಾ ಹಿಡಿದುಕೊಂಡಿರುವುದು ಕಾಣಿಸುತ್ತದೆ.