Virat kholi Ganguly Issue : ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿರುವ ಕುರಿತು ಭಾರತ ಕ್ರಿಕೆಟ್ ತಂಡದ ಆಟಗಾರರ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಬಾಯ್ಬಿಟ್ಟಿದ್ದಾರೆ. ಜೀ ನ್ಯೂಸ್ ನ ಸ್ಟಿಂಗ್ ಆಪರೇಷನ್ ಮೂಲಕ ಈ ವಿಚಾರ ಬೆಳಕಿಗೆ ಬಂದಿದೆ. ಚೇತನ್ ಅವರ ಹೇಳಿಕೆಯ ಬೆನ್ನಲ್ಲೆ ಬಿಸಿಸಿಐನಲ್ಲಿ ಬಿರುಗಾಳಿ ಎದ್ದಿದೆ. ವಿರಾಟ್ ಕೊಹ್ಲಿ ಮತ್ತು ಗಂಗೂಲಿ ನಡುವಿನ ಶೀತಲ ಸಮರ, ವಿರಾಟ್ ಅವರನ್ನು ನಾಯಕತ್ವದಿಂದ ಹೇಗೆ ತೆಗೆದುಹಾಕಲಾಯಿತು ಎಂಬ ಶಾಕಿಂಗ್ ವಿಚಾರವನ್ನು ಚೇತನ್ ಎಳೆ ಎಳೆಯಾಗಿ ಬಿಟ್ಟಿದ್ದಾರೆ.
ಅಲ್ಲದೆ, ಸೌರವ್ ಗಂಗೂಲಿ ವಿರಾಟ್ ಕೊಹ್ಲಿಯನ್ನು ಇಷ್ಟಪಡುತ್ತಿದ್ದಿಲ್ಲ. ಹೀಗಾಗಿ ಕೊಹ್ಲಿಯನ್ನು ನಾಯಕತ್ವದಿಂದ ಕಿತ್ತೊಗೆಯಲಾಗಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಸರಿಯಾದ ಸಮಯಕ್ಕಾಗಿ ಕಾಯುತ್ತಿರುವಾಗ ವಿರಾಟ್ ಫಾರ್ಮ್ ಕಳೆದುಕೊಂಡಿದ್ದು, ಅವರನ್ನು ತೆಗೆಯಲು ಉತ್ತಮ ಅವಕಾಶವಾಗಿತ್ತು. ಅದರ ಆಧಾರದ ಮೇಲೆ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಅದೇ ವೇಳೆ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಬೆಂಬಲಿಸಲು ಹಿಂದೇಟು ಹಾಕಿತ್ತು. ಆದ್ರೆ, ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಏಕೈಕ ಕಾರಣಕ್ಕಾಗಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಯಿತು ಎಂಬ ಶಾಕಿಂಗ್ ವಿಚಾರ ಚೇತನ್ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: eam India : ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡ ಟೀಂ ಇಂಡಿಯಾ!
ಇದೀಗ ಚೇತನ್ ಈ ಹೇಳಿಕೆ ಬಿಸಿಸಿಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದಲ್ಲದೆ, ಡ್ರಗ್ ಪರೀಕ್ಷೆಯಲ್ಲಿ ವಿಫಲವಾದ ಆಟಗಾರರು, ಡ್ರಗ್ಸ್ ಚುಚ್ಚುಮದ್ದು ಸೇರಿದಂತೆ ವಿವಿಧ ಆಘಾತಕಾರಿ ಮಾಹಿತಿಯನ್ನು ಚೇತನಶರ್ಮಾ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಜೀ ನ್ಯೂಸ್ ಈ ವೀಡಿಯೊವನ್ನು ಪ್ರಕಟಿಸಿದ ನಂತರ, ಕ್ರಿಕೆಟ್ ಅಭಿಮಾನಿಗಳು ಚೇತನ್ ಶರ್ಮಾ ಮತ್ತು ಆಯ್ಕೆಗಾರರು, ಬಿಸಿಸಿಐ ಮತ್ತು ಸೌರವ್ ಗಂಗೂಲಿಯನ್ನು ಟೀಕಿಸುತ್ತಿದ್ದಾರೆ.
ಸದ್ಯ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನ ಸ್ಟೇಟಸ್ ವಿಭಾಗದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಅದರಲ್ಲಿ ದೆಹಲಿ ಸ್ಟೇಡಿಯಂ ರಸ್ತೆಯ ಮೂಲಕ ಹಾದು ಹೋಗುತ್ತಿದ್ದೇನೆ ಎಂದು ಖುಷಿಯಿಂದ ತಿಳಿಸಿದ್ದಾರೆ. ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿರುವ ಉದ್ದೇಶ ಮತ್ತು ಸೌರವ್ ಗಂಗೂಲಿ ದ್ವೇಷದ ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ. ವಿವಿಧ ರೀತಿಯಲ್ಲಿ ಮೆಮ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.