ನವದೆಹಲಿ: ಆಧುನಿಕ ಜೀವನ ಶೈಲಿಯಿಂದಾಗಿ ಬೆಳಗ್ಗಿನಿಂದ ಸಂಜೆಯವರೆಗೂ ದುಡಿಮೆಯಲ್ಲಿಯೇ ಬ್ಯುಸಿ ಆಗುವ ದಂಪತಿಗಳು ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು, ಪೌಷ್ಟಿಕ ಆಹಾರ ಸೇವನೆ ಬಗ್ಗೆ ಅಸಡ್ಡೆ, ಮಾನಸಿಕ ಒತ್ತಡದಿಂದಾಗಿ ಲೈಂಗಿಕ ಆಸಕ್ತಿಯೂ ಕಡಿಮೆಯಾಗಿ ಸಂಸಾರದಲ್ಲಿ ಹುರುಪನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಈ ಕೆಳಗಿನ ಆಹಾರ ಪದಾರ್ಥಗಳು ಮನುಷ್ಯನ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿ, ಸಂತೋಷಮಯ ಮತ್ತು ಸುಗಮ ಸಂಸಾರಕ್ಕೆ ಅನುವು ಮಾಡಿಕೊಡುತ್ತವೆ.
1. ಬಾದಾಮಿ, ವಾಲ್ನೆಟ್, ಕಡಲೆ ಬೀಜ, ಗೋಡಂಬಿ
ಗೋಡಂಬಿ ಮತ್ತು ಬಾದಾಮಿಯಲ್ಲಿ ಜಿಂಕ್ ಅಂಶ ಹೆಚ್ಚಾಗಿರುವುದರಿಂದ ಇದು ರಕ್ತಪರಿಚಲನೆಗೆ ಸಹಾಯ ಮಾಡಲಿದೆ. ಅಲ್ಲದೆ, ಬಾದಾಮಿ ನಪುಂಸಕತೆ ಮತ್ತು ಗರ್ಭಪಾತವನ್ನು ತಡೆಯುತ್ತದೆ. ಇನ್ನು, ವಾಲ್ನೆಟ್'ನಲ್ಲಿ ಸೆಕ್ಸ್ ಹಾರ್ಮೋನ್ ಉತ್ಪಾದನೆಗೆ ಅಗತ್ಯವಾದ ಮೆಲಟೋನಿನ್ ಅಂಶವಿದ್ದು, ಲೈಂಗಿಕ ಆಸಕ್ತಿ ಹೆಚ್ಚಾಗಲು ಸಹಕರಿಸುತ್ತದೆ.
2. ಸೇಬು, ಕಪ್ಪು ದ್ರಾಕ್ಷಿ, ಈರುಳ್ಳಿ
ಪ್ರತಿನಿತ್ಯ ಒಂದು ಸೇಬು ಸೇವಿಸಿ ವೈದ್ಯರಿಂದ ದೂರವಿರಿ ಎಂಬ ಮಾತು ಎಲ್ಲರೂ ಕೇಳಿರುತ್ತೀರಿ. ಅದು ಖಂಡಿತಾ ನಿಜ. ನಿಮ್ಮ ಲೈಂಗಿಕ ಜೀವನ ಸುಖಮಯವಾಗಿರಲು ಸೇಬು, ಚೆರ್ರಿ, ಈರುಳ್ಳಿ, ಕಪ್ಪು ದ್ರಾಕ್ಷಿಗಳನ್ನು ಹೆಚ್ಚು ಸೇವಿಸಿ.
3. ನಿಂಬೆ, ಕಿತ್ತಳೆ ಹಣ್ಣು ಸೇವನೆ
ನಿಂಬೆ, ಕಿತ್ತಳೆ ಹಾಗೂ ದ್ರಾಕ್ಷಿಗಳಂತಹ ಸಿಟ್ರಸ್ ಫ್ರೂಟ್ ಗಳನ್ನು ಹೆಚ್ಚು ಸೇವಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚುವುದರ ಜತೆಗೆ ಲೈಂಗಿಕಾಸಕ್ತಿ ಹೆಚ್ಚಲು ಸಹಕಾರಿಯಾಗಿದೆ.
4. ಡಾರ್ಕ್ ಚಾಕೋಲೆಟ್
ಡಾರ್ಕ್ ಚಾಕೋಲೆಟ್ ತಿನ್ನುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ. ಅಷ್ಟೇ ಅಲ್ಲದೆ ಮೆದುಳಿನಲ್ಲಿ ಸೆಕ್ಸ್ ಗೆ ಬೇಕಾದ ಕೆಮಿಕಲ್ ಉತ್ಪಾದನೆಗೆ ಹೆಚ್ಚು ಸಹಕಾರಿಯಾಗಿದೆ.