ಆರೋಗ್ಯ ಚೆನ್ನಾಗಿರಬೇಕು ಎಂದಾದರೆ ನಿದ್ರೆ ಬಹಳ ಮುಖ್ಯ.
ಆರೋಗ್ಯವಂತರಾಗಿರಲು ಆಹಾರದಂತೆ ನಿದ್ರೆಯೂ ಕೊಡ ಬಹಳ ಮುಖ್ಯ. ಆದರೆ, ಈ ಒತ್ತಡಭರಿತ ಜೀವನಶೈಲಿಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುವುದು ಕೂಡ ಒಂದು ಕನಸಿದ್ದಂತೆ. ಆದರೆ, ನಿಮ್ಮ ಜೀವನಶೈಲಿಯಲ್ಲಿ ಪಂಚ ಸೂತ್ರಗಳನ್ನು ಅನುಸರಿಸಿದರೆ ಸುಖವಾದ ನಿದ್ರೆಯನ್ನು ಪಡೆಯಲು ಇದು ಸಹಕಾರಿ ಎಂದು ಸಾಬೀತುಪಡಿಸಬಹುದು. ಸುಖ ನಿದ್ರೆಗೆ ಆ ಪಂಚಸೂತ್ರಗಳು ಯಾವುವು ಎಂದು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನೀವು ಪ್ರತಿ ಕೆಲಸಕ್ಕೂ ಟೈಮ್ ಟೇಬಲ್ ರೂಪಿಸುವಂತೆ ಮಲಗಲು ಮತ್ತು ಏಳಲು ಕೂಡ ಟೈ ಟೇಬಲ್ ರೂಪಿಸಿ. ಮಾತ್ರವಲ್ಲ, ನಿಮ್ಮ ನಿಗದಿತ ಸಮಯದಲ್ಲಿ ಮಲಗಲು ಪ್ರಯತ್ನಿಸಿ.
ಈ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರಿಗೂ ಕೂಡ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಗ್ಯಾಜೆಟ್ ಗಳನ್ನು ಬಿಟ್ಟಿರುವ ಅಭ್ಯಾಸವೇ ಇಲ್ಲ. ಆದರೆ, ನೀವು ಮಲಗುವ ಸಮಯದಲ್ಲಿ ಗ್ಯಾಜೆಟ್ಗಳಿಂದ ಅಂತರ ಕಾಯ್ದುಕೊಂಡರೆ ಬೇಗ ನಿದ್ದೆ ಬರುತ್ತದೆ.
ಬೆಳಕಿಗಿಂತ ಕತ್ತಲಲ್ಲಿ ಉತ್ತಮ ನಿದ್ರೆ ಬರುತ್ತದೆ. ಹಾಗಾಗಿ, ಮಲಗುವ ಕೋಣೆಯಲ್ಲಿ ಉತ್ತಮ ನಿದ್ರೆಯ ವಾತಾವರಣವನ್ನು ಸೃಷ್ಟಿಸುವುದು ಬಹಳ ಮುಖ್ಯ. ಈ ಬಗ್ಗೆ ಗಮನ ಹರಿಸಿ.
ನಶೆ ಎಂದೊಡನೆ ಮೊದಲು ನೆನಪಾಗುವುವು ಮದ್ಯಪಾನ. ಆದರೆ, ಮದ್ಯಪಾನ ಮಾತ್ರವಲ್ಲ ರಾತ್ರಿ ಮಲಗುವ ವೇಳೆ ಟೀ-ಕಾಫಿ ಸೇವಿಸುವುದು ಕೂಡ ಬಹಳ ಮುಖ್ಯ.
ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಿ. ಇದು ಕೂಡ ನಿದ್ರಿಸಲು ಸಹಾಯಕವಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.