ಬೆಂಗಳೂರು: ಠಾಣೆಗೆ ದೂರು ನೀಡಲು ಬಂದ ಮಹಿಳೆಗೆ ಇನ್ಸ್‌ಪೆಕ್ಟರ್ ಅವಾಜ್ ಹಾಕಿ ಸೆಟಲ್ಮೆಂಟ್ ಮಾಡಿಕೊಳ್ಳಿ ಎಂದಿರುವ ಆರೋಪ ಕೇಳಿ ಬಂದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಇನ್ಸ್‌ಪೆಕ್ಟರ್ ಉದಯರವಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ವಿವಿಪುರಂ ಎಸಿಪಿಗೆ ಮಹಿಳೆ ದೂರು ನೀಡಿದ್ದಾರೆ.
ಇದನ್ನೂ ಓದಿ: “ಸುಳ್ಳಿನ ಕಾರ್ಖಾನೆಯ ಮತ್ತೊಂದು ಹೆಸರು ಬಿಜೆಪಿ”-ಡಿಕೆಶಿ ವಾಗ್ದಾಳಿ
ಕತ್ರಿಗುಪ್ಪೆ ನಿವಾಸಿಯಾಗಿರುವ ಮಹಿಳೆ ಜನತಾ ಬಜಾರ್ ಸಿಗ್ನಲ್ ಬಳಿ ತೆರಳುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಟಿಟಿ ವಾಹನ ಸಿಗ್ನಲ್ ಜಂಪ್ ಮಾಡಿದೆ. ಸಿಗ್ನಲ್ ಯಾಕೆ ಜಂಪ್ ಮಾಡಿದೆ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಟಿಟಿ ಚಾಲಕ ಮಹಿಳೆಗೆ ಅಶ್ಲೀಲವಾಗಿ ನಿಂದಿಸಿದಲ್ಲದೇ ಎದೆ ಭಾಗ ಮುಟ್ಟಿ ಟಿಟಿ ಮೈಮೇಲೆ ಹತ್ತಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಬಿಜೆಪಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ: ಶಾಸಕ ರಘುಪತಿ ಭಟ್
ಘಟನೆಯಿಂದ ನೊಂದ ಮಹಿಳೆ ಮಹಿಳೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಮಹಿಳೆ ಜೊತೆ ಮಾತನಾಡಿದ್ದ ಇನ್ಸ್‌ಪೆಕ್ಟರ್ ಉದಯರವಿ ಕೇವಲ ಬಟ್ಟೆ ಹರಿದಿದ್ದಾರೆ. ಸಣ್ಣ ಜಗಳವೆಂದು ದೂರಿನಲ್ಲಿ ಉಲ್ಲೇಖಿಸಿ ಎಂದು ಮಹಿಳೆಗೆ ಹೇಳಿದ್ದಾರಂತೆ. ಮಹಿಳೆ ಸಹ ನಾನು ಇನ್ಸ್‌ಪೆಕ್ಟರ್ ಮಾತಿಗೆ ಒಪ್ಪದಿದ್ದಾಗ ಎಫ್ಐಆರ್ ದಾಖಲಿಸದೇ ಸೆಟ್ಲ್ಮೆಂಟ್ ಮಾಡಿಕೊಳ್ಳಿ ಎಂದು ಹಿಯಾಳಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಉದಯರವಿ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.