ಟರ್ಕಿಯಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 4,300ಕ್ಕೆ ಏರಿಕೆ! ಭಾರತ ಸೇರಿದಂತೆ ಹಲವು ದೇಶಗಳಿಂದ ಸಹಾಯ ಹಸ್ತ

Turkey Earthquake Magnetic Effect: ಪ್ರಬಲ ಭೂಕಂಪಕ್ಕೆ ಟರ್ಕಿ ನಲುಗಿ ಹೋಗಿದೆ. ಇಲ್ಲಿಯವರೆಗೆ ಭೂಕಂಪದ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 4,300 ಕ್ಕೆ ಏರಿದೆ.  

Written by - Ranjitha R K | Last Updated : Feb 7, 2023, 11:51 AM IST
  • ಪ್ರಬಲ ಭೂಕಂಪಕ್ಕೆ ಟರ್ಕಿ ನಲುಗಿ ಹೋಗಿದೆ.
  • ಮೃತಪಟ್ಟವರ ಸಂಖ್ಯೆ 4,300 ಕ್ಕೆ ಏರಿದೆ.
  • ಸಹಾಯ ಹಸ್ತ ಚಾಚಿದ ಭಾರತ
ಟರ್ಕಿಯಲ್ಲಿ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 4,300ಕ್ಕೆ ಏರಿಕೆ!  ಭಾರತ ಸೇರಿದಂತೆ ಹಲವು ದೇಶಗಳಿಂದ ಸಹಾಯ ಹಸ್ತ  title=

Turkey Earthquake : ಪ್ರಬಲ ಭೂಕಂಪಕ್ಕೆ ಟರ್ಕಿ ನಲುಗಿ ಹೋಗಿದೆ. ಇಲ್ಲಿಯವರೆಗೆ ಭೂಕಂಪದ ಪರಿಣಾಮವಾಗಿ ಮೃತಪಟ್ಟವರ ಸಂಖ್ಯೆ 4,300 ಕ್ಕೆ ಏರಿದೆ. ಬದುಕುಳಿದವರನ್ನು ಅವಶೇಷಗಳಡಿಯಿಂದ ಹೊರತೆಗೆಯುವ ಕಾರ್ಯ ಇನ್ನೂ ಮುಂದುವರೆದಿದೆ.  ಈ ಮಧ್ಯೆ, ಭಾರತೀಯ ವಾಯುಪಡೆಯ ವಿಮಾನದ ಮೂಲಕ ಟರ್ಕಿಗೆ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.  

ಭೂಕಂಪ ನಡೆದ ಕೆಲವೇ ಘಂಟೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿಯ ತಂಡವು ವಿಶೇಷ ತರಬೇತಿ ಪಡೆದ ಶ್ವಾನದಳಗಳೊಂದಿಗೆ ವೈದ್ಯಕೀಯ ಸರಬರಾಜು, ಸುಧಾರಿತ ಡ್ರಿಲ್ಲಿಂಗ್ ಯಂತ್ರಗಳು ಮತ್ತು ಇತರ ಅಗತ್ಯ ಉಪಕರಣಗಳು ಸೇರಿದಂತೆ  ಘಟನಾ ಸ್ಥಳಕ್ಕೆ ಧಾವಿಸಿದೆ.   ಈ ಮೂಲಕ ಭೂಕಂಪಕ್ಕೆ ನಳುಗಿದವರನ್ನು ರಕ್ಷಿಸುವ ಕಾರ್ಯದಲ್ಲಿ ಭಾರತ ಕೈ ಜೋಡಿಸಿದೆ. 

ಇದನ್ನೂ ಓದಿ :   Earthquake: ಬೆಂಕಿಪೊಟ್ಟಣದಂತೆ ಪುಡಿಪುಡಿಯಾಯ್ತು ಟರ್ಕಿ-ಸಿರಿಯಾ: 2300 ಮಂದಿಯ ಸಾವಿಗೆ ಕಾರಣವಾಯ್ತು ಭೂಕಂಪನ

ಭಾರತದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಸಾಮರ್ಥ್ಯಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. NDRF ತಂಡ, ವಿಶೇಷವಾಗಿ ತರಬೇತಿ ಪಡೆದ ಶ್ವಾನದಳ, ವೈದ್ಯಕೀಯ ಸರಬರಾಜು, ಕೊರೆಯುವ ಯಂತ್ರಗಳು ಮತ್ತು ಇತರ ಅಗತ್ಯ ಉಪಕರಣಗಳೊಂದಿಗೆ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಬ್ಯಾಚ್ ಟರ್ಕಿಗೆ ತೆರಳಿದೆ ಎಂದು ಹೇಳಿದ್ದಾರೆ. 

 

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಭೂಕಂಪದ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ಪ್ರಧಾನಿ ಮೋದಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಇದನ್ನೂ ಓದಿ :  ಟರ್ಕಿಯಲ್ಲಿ 9 ಗಂಟೆಗಳಲ್ಲಿ ಮೂರನೇ ಬಾರಿ ಪ್ರಬಲ ಭೂಕಂಪ

ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತ ಸರ್ಕಾರದ ನೆರವಿನ ಪ್ರಸ್ತಾಪಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ  ಅಗತ್ಯ ಸಂದರ್ಭದಲ್ಲಿ ಸಹಾಯಕ್ಕೆ ಬರುವವನೇ ನಿಜವಾದ ಗೆಳೆಯ ಎಂದು ಬರೆದುಕೊಂಡಿದ್ದಾರೆ. 

 

ಟರ್ಕಿ ಮತ್ತು ಸಿರಿಯಾದಲ್ಲಿ ಮೈ  ಕೊರೆಯುವ ಚಳಿ. ಈ ಮಧ್ಯೆ, ಭೂ ಕಂಪದಿಂದ ನಿರಾಶ್ರಿತರಾದ ಜನ. ಎಲ್ಲ ನಿರಾಶ್ರಿತರು ಭೂಕಂಪದ ಕೇಂದ್ರದಿಂದ ಸುಮಾರು 33 ಕಿಮೀ ದೂರದಲ್ಲಿರುವ ಟರ್ಕಿಯ ಪ್ರಾಂತೀಯ ರಾಜಧಾನಿ ಗಾಜಿಯಾಂಟೆಪ್‌ನಲ್ಲಿರುವ ಶಾಪಿಂಗ್ ಮಾಲ್‌ಗಳು, ಕ್ರೀಡಾಂಗಣಗಳು, ಮಸೀದಿಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ  ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ, ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ. 

ಇದನ್ನೂ ಓದಿ :   ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ

ಇನ್ನೊಂದೆಡೆ, ಭೂಕಂಪದಿಂದ ನಲುಗಿರುವ ಟರ್ಕಿಯ ನೆರವಿಗೆ ವಿವಿಧ ದೇಶಗಳು ಧಾವಿಸಿದ್ದು, ಅಗತ್ಯ ನೆರವಿಗೆ ಮುಂದಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News