ಮಂಗೇಶ್ಕರ್ ಸಹೋದರಿಯರು ಹಾಡಿದ ಏಕೈಕ ಕನ್ನಡ ಸಿನಿಮಾ ಯಾವುದು ಗೊತ್ತೇ?

1945 ರಲ್ಲಿ ಬಿಡುಗಡೆಯಾದ 'ಬಡಿ ಮಾ' ಚಲನಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ತದನಂತರ ತಮ್ಮ ಮಧುರ ಕಂಠದಿಂದ ಕೋಟ್ಯಾಂತರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಅವರು ಹಿಂದಿಯ ಜೊತೆಗೆ ಇತರ ಭಾಷೆಗಳಲ್ಲೂ ಕೂಡ ಹಾಡುವ ಮೂಲಕ ಎಲ್ಲರ ಸೆಳೆಯುವಲ್ಲಿ ಯಶಸ್ವಿಯಾದರು.

Written by - Zee Kannada News Desk | Last Updated : Feb 6, 2023, 12:51 PM IST
  • ಇನ್ನೂ ಕನ್ನಡದ ವಿಷಯಕ್ಕೆ ಬಂದಾಗ ಅವರು ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಒಟ್ಟಾರೆಯಾಗಿ ಹಾಡಿರುವ ಹಾಡುಗಳ ಸಂಖ್ಯೆ ಎರಡು..!
  • ಹೌದು, ಇದು ನಿಮಗೆ ಅಚ್ಚರಿ ತರಿಸಬಹುದಾದ ಸಂಗತಿಯಾಗಿದ್ದರೂ ಕೂಡ ಸತ್ಯ
  • ಲತಾ ಮಂಗೇಶ್ಕರ್ ಹಾಡಿರುವ ಎರಡು ಹಾಡುಗಳು 1967 ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ್ದು
ಮಂಗೇಶ್ಕರ್ ಸಹೋದರಿಯರು ಹಾಡಿದ ಏಕೈಕ ಕನ್ನಡ ಸಿನಿಮಾ ಯಾವುದು ಗೊತ್ತೇ? title=
Photo Courtsey: Twitter

ಬೆಂಗಳೂರು : ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ನಿಧನರಾಗಿ ಒಂದು ವರ್ಷವಾಗುತ್ತಾ ಬಂತು, ಅವರು ಇಂದಿಗೂ ಕೂಡ ತಮ್ಮ ಹಾಡುಗಳ ಮೂಲಕ ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಸ್ಥಿತಸ್ಥಾಯಿಯಾಗಿ ಉಳಿದಿದ್ದಾರೆ.

1945 ರಲ್ಲಿ ಬಿಡುಗಡೆಯಾದ 'ಬಡಿ ಮಾ' ಚಲನಚಿತ್ರದೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ತದನಂತರ ತಮ್ಮ ಮಧುರ ಕಂಠದಿಂದ ಕೋಟ್ಯಾಂತರ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.ಅವರು ಹಿಂದಿಯ ಜೊತೆಗೆ ಇತರ ಭಾಷೆಗಳಲ್ಲೂ ಕೂಡ ಹಾಡುವ ಮೂಲಕ ಎಲ್ಲರ ಸೆಳೆಯುವಲ್ಲಿ ಯಶಸ್ವಿಯಾದರು.

ಇನ್ನೂ ಕನ್ನಡದ ವಿಷಯಕ್ಕೆ ಬಂದಾಗ ಅವರು ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಒಟ್ಟಾರೆಯಾಗಿ ಹಾಡಿರುವ ಹಾಡುಗಳ ಸಂಖ್ಯೆ ಎರಡು..! ಹೌದು, ಇದು ನಿಮಗೆ ಅಚ್ಚರಿ ತರಿಸಬಹುದಾದ ಸಂಗತಿಯಾಗಿದ್ದರೂ ಕೂಡ ಸತ್ಯ.ಲತಾ ಮಂಗೇಶ್ಕರ್ ಹಾಡಿರುವ ಎರಡು ಹಾಡುಗಳು 1967 ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ್ದು,ಅದರಲ್ಲಿ ಭುಜೇಂದ್ರ ಮಹಿಷವಾಡಿ ಅವರ ರಚನೆಯ ಮತ್ತು ಲಕ್ಷ್ಮಣ್ ಬೆರಳೇಕರ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಬೆಳ್ಳನೆ ಬೆಳಗಾಯಿತು ಹಾಡಿನ ಮೂಲಕ ಅವರು ಕನ್ನಡ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.ಈ ಚಿತ್ರದಲ್ಲಿ ಎಲ್ಲರೆ ಇರತಿರೋ ಎಂದಾರೆ ಬರತಿರೋ ಎಂಬ ಮತ್ತೊಂದು ಹಾಡನ್ನು ಅವರು  ಹಾಡಿದ್ದಾರೆ.ಇದೆ ಚಿತ್ರದಲ್ಲಿ ಲತಾ ಮಂಗೇಶ್ಕರ್ ಜೊತೆಗೆ ಅವರ ಇಬ್ಬರು ಸಹೋದರಿಯರಾದ ಆಶಾ ಮತ್ತು ಉಷಾ ಕೂಡ ಹಾಡಿದ್ದಾರೆ. ಆ ಮೂಲಕ ಮೂವರು ಸಹೋದರಿಯರು ಹಾಡಿರುವ ಏಕೈಕ ಚಿತ್ರ ಎನ್ನುವ ಹೆಗ್ಗಳಿಕೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಪಾತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

Trending News