Cristiano Ronaldo : ಕ್ರಿಸ್ಟಿಯಾನೊ ರೊನಾಲ್ಡೊ ಡೇಟ್‌ ಮಾಡಿದ ಟಾಪ್‌ 5 ಬ್ಯೂಟೀಸ್‌ ಇವರೇ ನೋಡಿ..!

Cristiano Ronaldo Birthday : ಸ್ಟಾರ್‌ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಂದು ಬರ್ತ್‌ಡೇ ಸಂಭ್ರಮ. ಅವರು 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೌದಿ ಅರೇಬಿಯಾ ಕ್ಲಬ್ ಅಲ್-ನಾಸ್ರ್‌ಗಾಗಿ ಆಡುತ್ತಿರುವ ಪೋರ್ಚುಗಲ್ ಸ್ಟಾರ್, ಫೆಬ್ರವರಿ 5, 1985 ರಂದು ಫಂಚಲ್‌ನಲ್ಲಿ ಜನಿಸಿದರು. ಕ್ರೀಡೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ (GOAT) ಗಳಲ್ಲಿ ರೊನಾಲ್ಡೊ ಕೂಡ ಒಬ್ಬರು. ಐದು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಸೇರಿ ಹಲವು ದಾಖಲೆಗಳನ್ನು ಕ್ರಿಸ್ಟಿಯಾನೋ ಹೊಂದಿದ್ದಾರೆ. ಹ್ಯಾಂಡ್ಸಮ್ ಹಂಕ್‌ ರೊನಾಲ್ಡೊಗೆ ಗರ್ಲ್ಸ್‌ ಪಾಲೋಯಿಂಗ್‌ ಅತೀ ಹೆಚ್ಚು. ಇಲ್ಲಿಯವರೆಗೆ ರೊನಾಲ್ಡೊ ಡೇಟ್ ಮಾಡಿದ 5 ಕ್ಯೂಟ್‌ ಬೆಡಗಿಯರ ವಿವರ ಇಲ್ಲಿದೆ ನೋಡಿ..

ಸ್ಟಾರ್‌ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಂದು ಬರ್ತ್‌ಡೇ ಸಂಭ್ರಮ. ಅವರು 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸೌದಿ ಅರೇಬಿಯಾ ಕ್ಲಬ್ ಅಲ್-ನಾಸ್ರ್‌ಗಾಗಿ ಆಡುತ್ತಿರುವ ಪೋರ್ಚುಗಲ್ ಸ್ಟಾರ್, ಫೆಬ್ರವರಿ 5, 1985 ರಂದು ಫಂಚಲ್‌ನಲ್ಲಿ ಜನಿಸಿದರು. ಕ್ರೀಡೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ (GOAT) ಗಳಲ್ಲಿ ರೊನಾಲ್ಡೊ ಕೂಡ ಒಬ್ಬರು. ಐದು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿ ಸೇರಿ ಹಲವು ದಾಖಲೆಗಳನ್ನು ಕ್ರಿಸ್ಟಿಯಾನೋ ಹೊಂದಿದ್ದಾರೆ. ಹ್ಯಾಂಡ್ಸಮ್ ಹಂಕ್‌ ರೊನಾಲ್ಡೊಗೆ ಗರ್ಲ್ಸ್‌ ಪಾಲೋಯಿಂಗ್‌ ಅತೀ ಹೆಚ್ಚು. ಇಲ್ಲಿಯವರೆಗೆ ರೊನಾಲ್ಡೊ ಡೇಟ್ ಮಾಡಿದ 5 ಕ್ಯೂಟ್‌ ಬೆಡಗಿಯರ ವಿವರ ಇಲ್ಲಿದೆ ನೋಡಿ..

1 /5

ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಐರಿನಾ 2010 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಐರಿನಾ ರಷ್ಯಾದ ಮಾಡೆಲ್ ಹಾಗೂ ಟಿವಿ ಸೆಲೆಬ್ರೆಟಿ. 2011 ರ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಈಜುಡುಗೆ ಸಂಚಿಕೆಯಲ್ಲಿ ಕಾಣಿಸಿಕೊಂಡ ಮೊದಲ ರಷ್ಯಾದ ಮಾಡೆಲ್ ಐರಿನಾ. ರೊನಾಲ್ಡೊ ಮತ್ತು ಐರಿನಾ ಮದುವೆಯಾಗ್ತಾರೆ ಅಂತ ಇಬ್ಬರ ಫ್ಯಾನ್ಸ್‌ ಅಂದುಕೊಂಡಿದ್ದರು. ಆದ್ರೆ, 5 ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ ಜೋಡಿ ದೂರವಾಗಿದ್ದರು. (ಚಿತ್ರ ಮೂಲ: Instagram)

2 /5

ನಟಿ ಮತ್ತು ಫಿಟ್ನೆಸ್ ಗುರು ಗೆಮ್ಮಾ ಅಟ್ಕಿನ್ಸನ್ ಸೌಂದರ್ಯಕ್ಕೆ ರೊನಾಲ್ಡೊ ಮರುಳಾಗಿದ್ದರು. ಇಬ್ಬರು 2007 ರಿಂದ ಸುಮಾರು ನಾಲ್ಕು ತಿಂಗಳ ಕಾಲ ಡೇಟಿಂಗ್ ಮಾಡಿದರು.   

3 /5

ಐರಿನಾ ಲವ್‌ ಬ್ರೇಕ್‌ ಅಪ್‌ ನಂತರ ರೊನಾಲ್ಡೊ ಲೂಸಿಯಾ ವಿಲ್ಲಾನ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಲೂಸಿಯಾ ವಿಲ್ಲಲೋನ್ ಟಿವಿ ಪತ್ರಕರ್ತೆಯಾಗಿದ್ರು. ಅದ್ರೆ ಮದುವೆ ಬಗ್ಗೆ ಇಬ್ಬರೂ ಅಷ್ಟೊಂದು ಇಂಟ್ರೆಸ್ಟಿಂಗ್‌ ತೊರಿಸಲಿಲ್ಲ ಎನ್ನಲಾಗಿದೆ. (ಚಿತ್ರ ಮೂಲ: Instagram)  

4 /5

ರೊನಾಲ್ಡೊ 2008 ರಲ್ಲಿ ನೆರೆಡಾ ಜೊತೆ ಡೇಟ್‌ ಮಾಡಲು ಶುರು ಮಾಡಿದ್ರು. ಸ್ಪ್ಯಾನಿಷ್ ಬೆಡಗಿ ಪೋರ್ಚುಗಲ್ ಫುಟ್‌ಬಾಲ್ ಸ್ಟಾರ್‌ ಜೊತೆ ಹಲವು ವರ್ಷಗಳ ಕಾಲ ಉತ್ತಮ ಸಂಬಂಧವನ್ನು ಹೊಂದಿದ್ದರು.   

5 /5

2005 ರಿಂದ 2006 ರವರೆಗೆ ಮೆರ್ಚೆ ರೊಮೆರೊ ರೊನಾಲ್ಡೊ ಜೊತೆ ಪ್ರೀತಿಯಲ್ಲಿದ್ದರು. ಆನಂತರ ಇಬ್ಬರು ದೂರವಾದರು. ಮೆರ್ಚೆ ರೊಮೆರೊ ಮೊದಲು ಪೋರ್ಚುಗೀಸ್ ಮಾಡೆಲ್ ಆಗಿದ್ದರು, ನಂತರ ಟಿವಿ ನಿರೂಪಕರಾಗಿ ಕೆಲಸ ಪ್ರಾರಂಭಿಸಿದರು. ಇಬ್ಬರ ಬ್ರೇಕ್‌ ಅಪ್‌ ವಿಚಾರ ಸಖತ್‌ ಸದ್ದು ಮಾಡಿತ್ತು. (ಚಿತ್ರ ಮೂಲ: Instagram)