Good News: ಟ್ವಿಟ್ಟರ್ ನೀಡುತ್ತಿದೆ ನಿಮಗೆ ಹಣಗಳಿಕೆಗೆ ಅವಕಾಶ! ಈ ಬಳಕೆದಾರರಿಗೆ ಹಣ ಹಂಚಿಕೆ ಮಾಡಲಿದ್ದಾರೆ ಮಸ್ಕ್

Twitter ಬಳಕೆದಾರರ ಪಾಲಿಗೊಂದು ಬಂಬಾಟ್ ಸುದ್ದಿ ಪ್ರಕಟವಾಗಿದೆ. ಹೌದು, ಶುಕ್ರವಾರ ಈ ಕುರಿತು ಮಾತನಾಡಿರುವ ಟ್ವಿಟ್ಟರ್ ಹೊಸ ಸಿಇಓ ಎಲಾನ್ ಮಸ್ಕ್, ಟ್ವಿಟ್ಟರ್ ಕೆಲ ಕಂಟೆಂಟ್ ಕ್ರಿಯೇಟರ್ ಗಳ ಜೊತೆಗೆ ಜಾಹೀರಾತಿನಿಂದ ಬಂದ ಗಳಿಕೆಯ ಭಾಗವನ್ನು ಹಂಚಿಕೊಳ್ಳಲು ಆರಂಭಿಸಲಿದೆ ಎಂದು ಘೋಷಿಸಿದ್ದಾರೆ.  

Written by - Nitin Tabib | Last Updated : Feb 4, 2023, 02:13 PM IST
  • ಈ ಕುರಿತು ಕಂಪನಿಯ ಅಧಿಕಾರ ಸ್ವೀಕಾರದ ನಂತರ ಮಾತನಾಡಿದ್ದ ಎಲಾನ್ ಮಸ್ಕ್,
  • ಆದಾಯದ ಹೊಸ ನಿಯಮಗಳನ್ನು ರಚಿಸಲು ಟ್ವಿಟ್ಟರ್ ಪ್ರಸ್ತುತ ಒತ್ತು ನೀಡಲಿದೆ ಎಂದಿದ್ದರು.
  • ಅಕ್ಟೋಬರ್ ತಿಂಗಳಿನಲ್ಲಿ $44 ಬಿಲಿಯನ್ (3.4 ಲಕ್ಷ ಕೋಟಿ ರೂ.)ಗೆ ಕಂಪನಿ ಖರೀದಿಸಿದ ಬಳಿಕ ಕಂಪನಿಯು ಜಾಹೀರಾತು ಆದಾಯದಲ್ಲಿ ಭಾರಿ ನಷ್ಟ ಅನುಭವಿಸಿತ್ತು.
Good News: ಟ್ವಿಟ್ಟರ್ ನೀಡುತ್ತಿದೆ ನಿಮಗೆ ಹಣಗಳಿಕೆಗೆ ಅವಕಾಶ! ಈ ಬಳಕೆದಾರರಿಗೆ ಹಣ ಹಂಚಿಕೆ ಮಾಡಲಿದ್ದಾರೆ ಮಸ್ಕ್ title=
ಟ್ವಿಟ್ಟರ್ ನಿಂದ ಹಣಗಳಿಕೆ

Twitter ಬಳಕೆದಾರರ ಪಾಲಿಗೊಂದು ಬಂಬಾಟ್ ಸುದ್ದಿ ಪ್ರಕಟವಾಗಿದೆ. ಹೌದು, ಶುಕ್ರವಾರ ಈ ಕುರಿತು ಮಾತನಾಡಿರುವ ಟ್ವಿಟ್ಟರ್ ಹೊಸ ಸಿಇಓ ಎಲಾನ್ ಮಸ್ಕ್, ಟ್ವಿಟ್ಟರ್ ಕೆಲ ಕಂಟೆಂಟ್ ಕ್ರಿಯೇಟರ್ ಗಳ ಜೊತೆಗೆ ಜಾಹೀರಾತಿನಿಂದ ಬಂದ ಗಳಿಕೆಯ ಭಾಗವನ್ನು ಹಂಚಿಕೊಳ್ಳಲು ಆರಂಭಿಸಲಿದೆ ಎಂದು ಘೋಷಿಸಿದ್ದಾರೆ. ಯಾವುದೇ ಕ್ರಿಯೇಟರ್ ಗಳ ಥ್ರೆಡ್ ಮೇಲೆ ಕಾಣಿಸಿಕೊಳ್ಳುವ ಜಾಹೀರಾತುಗಳ ಗಳಿಕೆಯ ಭಾಗವನ್ನು ಆ ಕ್ರಿಯೇಟರ್ ಜೊತೆಗೆ ಹಂಚಿಕೊಳ್ಳಲಾಗುವುದು ಎಂದು ಮಸ್ಕ್ ಶುಕ್ರವಾರ ಹೇಳಿದ್ದಾರೆ. ಆದರೆ, ಇದಕ್ಕಾಗಿ ಬಳಕೆದಾರರಿಗೆ ಬ್ಲೂ ಟಿಕ್ ವೆರಿಫಿಕೆಶನ್ ಹೊಂದಿರುವುದು ಆವಶ್ಯಕವಾಗಿದೆ. ಆದರೆ, ಗಳಿಕೆಯ ಎಷ್ಟು ಭಾಗವನ್ನು ಟ್ವಿಟ್ಟರ್ ಕ್ರಿಯೇಟರ್ ಗಳ ಜೊತೆಗೆ ಹಂಚಿಕೊಳ್ಳಲಿದೆ ಎಂಬುದನ್ನು ಮಾತ್ರ ಮಸ್ಕ್ ಬಹಿರಂಗಪಡಿಸಿಲ್ಲ.

ಕಂಟೆಂಟ್ ಮಾಡ್ಯೂಲೆಶನ್ ನಿಯಮಗಳಿಗಾಗಿ ಮಸ್ಕ್ ಅವರ ದೃಷ್ಟಿಕೋನದ ಕುರಿತಾದ ಆತಂಕಗಳ ನಡುವೆ ಟ್ವಿಟ್ಟರ್ ಜಾಹೀರಾತು ನೀಡುವವರ ಜೊತೆಗಿನ ತನ್ನ ರೆವಿನ್ಯೂ ಪ್ರಭಾವಿತಗೊಂಡಿರುವುದನ್ನು ಗಮನಿಸಲಾಗಿತ್ತು. ಕಂಪನಿಯ ಜವಾಬ್ದಾರಿಯನ್ನು ಹೊತ್ತ ಬಳಿಕ ಈ ಕುರಿತು ಹೇಳಿಕೆ ನೀಡಿದ್ದ ಮಸ್ಕ್ ಟ್ವಿಟ್ಟರ್ ಗಳಿಕೆಯಲ್ಲಿ ಭಾರಿ ಇಳಿಕೆ ಗಮನಿಸಲಾಗಿದೆ ಮತ್ತು ಜಾಹೀರಾತು ನೀಡುವವರ ಮೇಲೆ ಒತ್ತಡ ಹೇರಿದ್ದಕ್ಕೆ ಕಾರ್ಯಕಾರಿ ಗುಂಪಿಗೆ ಹೊಣೆಯಾಗಿಸಿದ್ದರು.

ಟ್ವಿಟ್ಟರ್ ಸಿಇಓ ಆಗಿ ಮಸ್ಕ್ ಟ್ವಿಟ್ಟರ್ ನ ಬ್ಲೂ ಟಿಕ್ ಸಬ್ಸ್ಕ್ರಿಪ್ಶನ್ ಸರ್ವಿಸ್ ಪಡೆಯಲು ನೀಡಬೇಕಾದ ಶುಲ್ಕ ಪರಿಷ್ಕರಣೆ ಹಾಗೂ ಹೊಸ ಯೋಜನೆಗಳ ಮೇಲೆ ಗಮನ ಕೇಂದ್ರೀಕರಿಸುವ ಕೆಲಸ ಈಗಾಗಲೇ ಆರಂಭಿಸಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಈ ಸೇವೆ ವೇರಿಫೈಡ್ಬ್ಯಾಜ್ ನೀಡುತ್ತದೆ. 

ಇದನ್ನೂ ಓದಿ-nstagram Offer: Reels ತಯಾರಿಸಿ ನೀವು ಕೈತುಂಬಾ ಹಣ ಸಂಪಾದಿಸಿ! 

ಇನ್ನೊಂದೆಡೆ ಲಿಗೆಸಿ ವೆರಿಫೈಡ್ ಅನ್ನು ಕೆಲವೇ ತಿಂಗಳು ಗಳಲ್ಲಿ ತೆಗೆದು ಹಾಕಲಾಗುವುದು ಎಂದು ಮಸ್ಕ್ ಹೇಳಿದ್ದಾರೆ. ಇದಕ್ಕೆ ಕಾರಣಗಳನ್ನು ಹೇಳಿದ ಅವರು ಅದು 'ಡೀಪಲಿ ಕರಪ್ಟೆಡ್' ಆಗಿದೆ ಎಂದಿದ್ದಾರೆ.

ಇದನ್ನೂ ಓದಿ-Honda Activa ಗ್ರಾಹಕರನ್ನು ತನ್ನತ್ತ ಸೆಳೆಯಲು ಬಂತು Hero Xoom, ಅದ್ಭುತ ವೈಶಿಷ್ಟ್ಯಗಳು ಮತ್ತು ಬೆಲೆಯೂ 10 ಸಾವಿರ ಕಮ್ಮಿ

ಕೆಲ ದಿನಗಳ ಹಿಂದೆಯಷ್ಟೇ ಪ್ರಕಟಗೊಂಡ ವರದಿಯೊಂದರ ಪ್ರಕಾರ ಮೈಕ್ರೋಬ್ಲಾಗಿಂಗ್ ಸೈಟ್ ಸಾಮಾಜಿಕ ಮಾಧ್ಯಮ ವೇದಿಕೆ ಪೇಮೆಂಟ್ ಮಾಡುವ ಪದ್ಧತಿಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿತ್ತು. ಇದಕ್ಕಾಗಿ ರೆಗುಲೇಟರಿ ಲೈಸನ್ಸ್ ಪಡೆದುಕೊಳ್ಳಲು ಕಂಪನಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ಆರಂಭಿಸಿದೆ ಎಂದು ಮತ್ತೊಂದು ವರದಿ ಹೇಳಿತ್ತು.

ಇದನ್ನೂ ಓದಿ-NASA: 24 ಜನರ ಹುಡುಕಾಟದಲ್ಲಿ ನಾಸಾ, ಕೆಲಸ ಹಾಸಿಗೆಯಲ್ಲಿ ಮಲಗಿಕೊಂಡೆ ಇರಬೇಕು, ವೇತನ 1.5 ಲಕ್ಷ ರೂ.

ಟ್ವಿಟ್ಟರ್ ಆಗಲಿದೆ 'ದಿ ಎವ್ರಿಥಿಂಗ್ ಆಪ್'
ಈ ಕುರಿತು ಕಂಪನಿಯ ಅಧಿಕಾರ ಸ್ವೀಕಾರದ ನಂತರ ಮಾತನಾಡಿದ್ದ ಎಲಾನ್ ಮಸ್ಕ್, ಆದಾಯದ ಹೊಸ ನಿಯಮಗಳನ್ನು ರಚಿಸಲು ಟ್ವಿಟ್ಟರ್ ಪ್ರಸ್ತುತ ಒತ್ತು ನೀಡಲಿದೆ ಎಂದಿದ್ದರು. ಅಕ್ಟೋಬರ್ ತಿಂಗಳಿನಲ್ಲಿ $44 ಬಿಲಿಯನ್ (3.4 ಲಕ್ಷ ಕೋಟಿ ರೂ.)ಗೆ ಕಂಪನಿ ಖರೀದಿಸಿದ ಬಳಿಕ ಕಂಪನಿಯು  ಜಾಹೀರಾತು ಆದಾಯದಲ್ಲಿ ಭಾರಿ ಇಳಿಕೆಯನ್ನು ಎದುರಿಸಿತ್ತು  ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News