ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ

ಇದೆ ಮೊದಲನೇ ಬಾರಿಗೆ ಶೈಕ್ಷಣಿಕ ಉತ್ಕೃಷ್ಟತೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳು ಮತ್ತು ಅದರ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಆಶೀರ್ವದಿಸಲ್ಪಟ್ಟಿತು.

Written by - Zee Kannada News Desk | Last Updated : Jan 28, 2023, 08:27 PM IST
  • ಶಿಕ್ಷಣ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ
  • ಸಮಗ್ರ ಹಾಗು ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಉತ್ಕೃಷ್ಟತೆಗಾಗಿ ಪ್ರಾರಂಭಿಸಲಾಯಿತು
  • ಆಧುನಿಕ ಶಿಕ್ಷಕರನ್ನು ಗೌರವಿಸುತ್ತಿರುವುದು ನನಗೆ ಅತ್ಯಂತ ಸಂತೋಷದ ಕ್ಷಣವಾಗಿದೆ
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮೊಟ್ಟಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ 2023 ಪ್ರಧಾನ title=

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅನುಕರಣೀಯ ಕೊಡುಗೆಗಾಗಿ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ಸ್ಥಾಪಿಸಿರುವ ಪ್ರತಿಷ್ಠಿತ ಶ್ರೀ ಶ್ರೀ ಶಿಕ್ಷಣ 2023 ಪ್ರಶಸ್ತಿಗಳನ್ನು ಶನಿವಾರ ಪ್ರದಾನ ಮಾಡಲಾಯಿತು.

ಇದೆ ಮೊದಲನೇ ಬಾರಿಗೆ ಶೈಕ್ಷಣಿಕ ಉತ್ಕೃಷ್ಟತೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಶಾಲೆಗಳು ಮತ್ತು ಅದರ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಆಶೀರ್ವದಿಸಲ್ಪಟ್ಟಿತು.

ಇದನ್ನೂ ಓದಿ: ಗ್ವಾಲಿಯರ್ ಬಳಿ ಸುಖೋಯ್, ಮಿರಜ್ ಫೈಟರ್ ಜೆಟ್ ಪತನ, 1 ಪೈಲಟ್ ಸಾವು

ಕಾರ್ಯಕ್ರಮಕ್ಕೆ ಆಗಮಿಸಿದ ಇತರ ಗೌರವಾನ್ವಿತ ಗಣ್ಯರುಗಳಾದ ಸನ್ಮಾನ್ಯರು.

# ಡಾ. ರಾಜ್‌ಕುಮಾರ್ ರಂಜನ್ ಸಿಂಗ್ -ಗೌರವಾನ್ವಿತ MoS (ಶಿಕ್ಷಣ);

#ಸನ್ಮಾನ್ಯ ಶ್ರೀ. ಬಿ ಸಿ ನಾಗೇಶ್ -- ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರು, ಕರ್ನಾಟಕ;

# ಸನ್ಮಾನ್ಯ ಡಾ. ಅಶ್ವಥ್ ನಾರಾಯಣ್ ಸಿ.ಎನ್ -ಉನ್ನತ ಶಿಕ್ಷಣ ಐಟಿ ಮತ್ತು ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಸಚಿವ; ಮತ್ತು

# ಗೌರವ. ಶ್ರೀ ಟಿಮ್ ಡ್ರೇಪರ್ ಸಂಸ್ಥಾಪಕ, ಡ್ರೇಪರ್ ಅಸೋಸಿಯೇಟ್.

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತಂದ ಆಧುನಿಕ ಶಿಕ್ಷಕರನ್ನು ಗೌರವಿಸುತ್ತಿರುವುದು ನನಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ಗುರುದೇವ ಅವರು ಅವರ ಶಾಲೆಗಳಲ್ಲಿ ಈಗಾಗಲೇ ಪರಿಚಯಿಸಿದ ಹೊಸ ಶಿಕ್ಷಣ ನೀತಿಯನ್ನು ನಾವು ಸಹ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ. ಶ್ರೀ ಸ್ವಾಮಿ ವಿವೇಕಾನಂದರು ಹೇಳಿದಂತೆ ಶಿಕ್ಷಣದ ಉದ್ದೇಶ ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದು, ಗುರುದೇವರು ನಮಗೆಲ್ಲರಿಗೂ ಅದೇ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ, ಗುರುದೇವರು ಬುಡಕಟ್ಟು ಪ್ರದೇಶಗಳಲ್ಲಿ ನಮ್ಮ ಸರ್ಕಾರವು ಇನ್ನೂ ತಲುಪದ ಸ್ಥಳಗಳಲ್ಲಿಯೂ ಸಹ ಶಾಲೆಗಳನ್ನು ನಡೆಸುತ್ತಿದ್ದಾರೆ, ”ಎಂದು ಮಾನ್ಯ ಶಾಲಾ ಶಿಕ್ಷಣ ಸಚಿವರಾದ  ಬಿ.ಸಿ.ನಾಗೇಶ್ ಹೇಳಿದರು.

ತಮ್ಮ ಅನನ್ಯ ಕೊಡುಗೆಯನ್ನು ಗುರುತಿಸಿ ಸಮಾಜದಲ್ಲಿ ಬದಲಾವಣೆಯನ್ನು ತಂದಿದ್ದಕ್ಕಾಗಿ ತಮ್ಮ ಆಳವಾದ ಮೆಚ್ಚುಗೆಯನ್ನು ಪ್ರಶಸ್ತಿ ಪುರಸ್ಕೃತರು ವ್ಯಕ್ತಪಡಿಸಿದರು.3000 ಕ್ಕೂ ಹೆಚ್ಚು ಜನರು ಮೈದಾನದಲ್ಲಿ ಒಟ್ಟುಗೂಡಿದರು ಮತ್ತು ಸಾವಿರಾರು ಜನರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ: 

ಶಿಕ್ಷಣದಲ್ಲಿ ಒಟ್ಟಾರೆ ಶ್ರೇಷ್ಠತೆಗಾಗಿ ಶ್ರೀ ಶ್ರೀ ಪ್ರಶಸ್ತಿಗಳನ್ನು ಸ್ವೀಕರಿಸಿದ ಶಾಲೆ

 ಆರ್ಮಿ ಪಬ್ಲಿಕ್ ಸ್ಕೂಲ್, ಶಂಕರ್ ವಿಹಾರ್ - ದೆಹಲಿ ಕ್ಯಾಂಟ್

 ದಿ ಹೆರಿಟೇಜ್ ಸ್ಕೂಲ್, ಕೋಲ್ಕತ್ತಾ

ವಿಶೇಷ ಉಲ್ಲೇಖ:

ಅಮಿಟಿ ಇಂಟರ್‌ನ್ಯಾಶನಲ್ ಸ್ಕೂಲ್, ಗುರುಗ್ರಾಮ್ •

ದೆಹಲಿ ಪಬ್ಲಿಕ್ ಸ್ಕೂಲ್ - ಬೆಂಗಳೂರು ಉತ್ತರ •

ಮೌಂಟ್ ಅಬು ಪಬ್ಲಿಕ್ ಸ್ಕೂಲ್, ರೋಹಿಣಿ, ನವದೆಹಲಿ

ಸಮಗ್ರ ಶಿಕ್ಷಣಕ್ಕಾಗಿ ಶ್ರೀ ಶ್ರೀ ಪ್ರಶಸ್ತಿ:

ಶ್ರೀಮತಿ. ಸುಲೋಚನಾದೇವಿ ಸಿಂಘಾನಿಯಾ ಶಾಲೆ - ಥಾಣೆ •

 ಮೇಯೊ ಕಾಲೇಜು - ಅಜ್ಮೀರ್

ಪೂರ್ವ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು

 ಜೆಮ್‌ಶೆಡ್‌ಪುರದ ವಿದ್ಯಾಭಾರತಿ ಚಿನ್ಮಯ ವಿದ್ಯಾಲಯದಿಂದ ಶ್ರೀಮತಿ ಸಹನಾ.

ಉತ್ತರ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು-

KIIT ವರ್ಲ್ಡ್ ಗುರ್ಗಾಂ ನಿಂದ ಶ್ರೀಮತಿ ಪ್ರಿಯಾಂಕಾ ಯಾದವ್

ದಕ್ಷಿಣ ವಲಯದಿಂದ ಉತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು 

ಡಾ. ಗೀತಾ ಲಕ್ಷ್ಮಣ್ ಸಿಂಧಿ ಶಾಲೆ, ಹೆಬ್ಬಾಳ, ಬೆಂಗಳೂರು

ಪಶ್ಚಿಮ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು

ಶ್ರೀಮತಿ ಸುನೀತಾ ಚಂದ್ DAV ಪಬ್ಲಿಕ್ ಸ್ಕೂಲ್, ಐರೋಲಿ, ನವಿ ಮುಂಬೈ

ವಿಶೇಷ ಉಲ್ಲೇಖ-

ಅಡ್ವಕೇಟ್. ರಾಜೇಂದರ್ ಅಪ್ಪಾ ಸಾಹೇಬ್ ಕೋಲಿ ಸರ್ಕಾರಿ ಪ್ರಾಥಮಿಕ ಶಾಲೆ, ಮಂಗಳವೇಧ, ಜಿಲ್ಲೆ. ಶೋಲಾಪುರ

ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಅತ್ಯುತ್ತಮ ಕೊಡುಗೆ

ಶ್ರೀ ಪೋಲಾ ಭಾಸ್ಕರ್-ಕಾಲೇಜು ಶಿಕ್ಷಣದ ಕಮಿಷನರ್ ಕಾರ್ಯದರ್ಶಿ, GAD (ಸೇವೆಗಳು ಮತ್ತು HRM)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News