Bone Health: ಮೂಳೆಗಳ ಕ್ಯಾಲ್ಸಿಯಂ ನಾಶಪಡಿಸುವ ಈ 5 ಆಹಾರಗಳಿಂದ ಇರಲಿ ಅಂತರ

Worst Foods For Bone: ನಾವು ಸೇವಿಸುವ ಕೆಲವು ಆಹಾರಗಳು ನಮ್ಮ ಮೂಳೆಗಳ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇವು ಮೂಳೆಗಳ ಕ್ಯಾಲ್ಸಿಯಂ ಅನ್ನು ನಾಶಪಡಿಸುತ್ತವೆ. ಹಾಗಾಗಿ, ಮೂಳೆಗಳ ಆರೋಗ್ಯಕ್ಕಾಗಿ ಇಂತಹ ಆಹಾರಗಳಿಂದ ದೂರವಿರುವುದು ಅಗತ್ಯ ಎನ್ನುತ್ತಾರೆ ತಜ್ಞರು.

Worst Foods For Bone: ಆರೋಗ್ಯಕರ ಮೂಳೆಗಳನ್ನು ಪಡೆಯಲು ಕ್ಯಾಲ್ಸಿಯಂ ಬಹಳ ಮುಖ್ಯ. ಆದರೆ, ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಆದರೆ, ಮೂಳೆ ಕ್ಯಾನ್ಸರ್, ಕಡಿಮೆ ಮೂಳೆ ಸಾಂದ್ರತೆ, ಮೂಳೆ ಸೋಂಕು, ಆಸ್ಟಿಯೊಪೊರೋಸಿಸ್, ಆಸ್ಟಿಯೋನೆಕ್ರೊಸಿಸ್, ರಿಕೆಟ್ಸ್ ಮತ್ತು ಆಸ್ಟಿಯೋಮಲೇಶಿಯಾ ಮುಂತಾದ ಅನೇಕ ಕಾಯಿಲೆಗಳನ್ನು ಅನುಭವಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ನಮ್ಮ ಆಹಾರದ ಬಗ್ಗೆ ಸರಿಯಾಗಿ ನಿಗಾವಹಿಸುವುದು ಅತ್ಯಗತ್ಯ. ವಾಸ್ತವವಾಗಿ, ನಾವು ಸೇವಿಸುವ ಕೆಲವು ಆಹಾರಗಳು ನಮ್ಮ ಮೂಳೆಗಳ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇವು ಮೂಳೆಗಳ ಕ್ಯಾಲ್ಸಿಯಂ ಅನ್ನು ನಾಶಪಡಿಸುತ್ತವೆ. ಹಾಗಾಗಿ, ಮೂಳೆಗಳ ಆರೋಗ್ಯಕ್ಕಾಗಿ ಇಂತಹ ಆಹಾರಗಳಿಂದ ದೂರವಿರುವುದು ಅಗತ್ಯ ಎನ್ನುತ್ತಾರೆ ತಜ್ಞರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕಾಫಿ- ಟೀ ಹೆಸರು ಕೇಳಿದರೆ ಕೆಲವರಿಗೆ ಮೂಡ್ ಫ್ರೆಶ್ ಆಗುತ್ತದೆ. ಆದರೆ, ಇವುಗಳನ್ನು ಹೆಚ್ಚಾಗಿ ಕುಡಿಯುವುದರಿಂದ ನಿಮ್ಮ ಮೂಲಗಳಲ್ಲಿ ಸಾಂದ್ರತೆ ಕಡಿಮೆ ಆಗುತ್ತದೆ. 

2 /5

ಸಿಹಿ ಹೆಸರು ಕೇಳಿದರೆ ಸಾಕು ಮಕ್ಕಳಿಂದ ಮುದುಕರವರೆಗೂ ಬಾಯಿಯಲ್ಲಿ ನೀರು ಬರುತ್ತದೆ. ಆದರೆ, ಸಿಹಿ ತಿನಿಸುಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಅವು ಮೂಳೆಗಳ ಆರೋಗ್ಯಕ್ಕೂ ಹಾನಿಕಾರಕವಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಸಿಹಿಯ ಸೇವನೆ ಹಿತ-ಮಿತವಾಗಿದ್ದರೆ ಒಳಿತು.

3 /5

ಮದ್ಯ ಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಕೂಡ ನಮ್ಮಲ್ಲಿ ಹಲವರು ಮದ್ಯ ವ್ಯಸನಿಗಳಾಗಿರುತ್ತಾರೆ. ಆದರೆ, ಇದು ಮೂಳೆಗಳ ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳುತ್ತಾರೆ.

4 /5

ಅಡಿಗೆಗೆ ಉಪ್ಪಿಲ್ಲದೆ ರುಚಿಯೇ ಇರುವುದಿಲ್. ಆದರೆ, ಇದು ಅತಿಯಾದರೆ ರಕ್ತದೊತ್ತಡ ಹೆಚ್ಚಾಗುವುದು ಮಾತ್ರವಲ್ಲ, , ಮೂಳೆಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ. ಅತಿಯಾದ ಉಪ್ಪು ಸೇವನೆ ಮೂಳೆಗಳ ಮುರಿತಕ್ಕೂ ಕಾರಣವಾಗಬಹುದು.

5 /5

ಯಾವುದೇ ಪಾರ್ಟಿಯಿರಲಿ ಅಲ್ಲಿ ತಂಪು ಪಾನೀಯ ಇಲ್ಲ ಎಂದರೆ ಪಾರ್ಟಿ ಪಾರ್ಟಿಯೇ ಅಲ್ಲ ಎನ್ನುವ ಹಲವು ಮಂದಿ ನಮ್ಮ ಮಧ್ಯೆ ಇದ್ದಾರೆ. ಆದರೆ, ಈ ತಂಪು ಪಾನೀಯ, ಕೂಲ್ ಡ್ರಿಂಕ್ಸ್ ಗಳು ನಿಮ್ಮ ಮೂಳೆಗಳನ್ನು ತೀವ್ರವಾಗಿ ಹಾನಿಗೊಳಿಸಬಹುದು ಎಂದು ನಿಮಗೆ ತಿಳಿದಿದೆಯೇ? ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.