ಬೆಂಗಳೂರು: ಹೈದರಾಬಾದ್ ನಲ್ಲಿ ಭಾನುವಾರ ನಡೆದ ಕೆಜಿಎಫ್ ಬಿಡುಗಡೆ ಪೂರ್ವ ಕಾರ್ಯಕರ್ಮದಲ್ಲಿ ನಿರ್ದೇಶಕ ಎಂಎಸ್ ರಾಜಮೌಳಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಟ ಯಶ್ ಬಗ್ಗೆ ತಿಳಿದುಕೊಂಡಿರುವುದನ್ನು ವಿವರಿಸಿದ ರಾಜಮೌಳಿ "ಒಬ್ಬ ಹೊಸ ನಟ ಚಿತ್ರರಂಗಕ್ಕೆ ಬಂದಿದ್ದಾನೆ. ನನಗೆ ಹಿಟ್ ಮೇಲೆ ಹಿಟ್ ಸಿನಿಮಾ ನೀಡುವುದರ ಮೂಲಕ ಈಗ ಆತ ಎಲ್ಲಾ ಪ್ರಮುಖ ನಟರನ್ನು ಮೀರಿಸಿದ್ದಾನೆ. ಆ ನಟನ ಹೆಸರು ಯಶ್ ಆಗಿತ್ತು. ನಾನು ಆತನನ್ನು ಮತ್ತೊಮ್ಮೆ ವಿಚಾರಿಸಿದಾಗ, ಅವರು ಬಸ್ ಚಾಲಕನ ಮಗ ಎಂದು ನನಗೆ ಹೇಳಲಾಯಿತು "ಎಂದು ರಾಜಮೌಳಿ ನೆನಪಿಸಿಕೊಂಡರು.
ಇನ್ನೊಂದು ಸಂಗತಿ ಎಂದರೆ " ಯಶ್ ಸೂಪರ್ ಸ್ಟಾರ್ ಆದ ನಂತರ ಸಹ ಅವರ ತಂದೆ ಇಂದಿಗೂ ಬಸ್ ಕಂಡಕ್ಟರ್ ಕೆಲಸ ಮಾಡುತ್ತಿದ್ದಾರೆ.ಯಶ್ ಸ್ವತಃ ತಾನೇ ಬಹಳಷ್ಟು ಹಣ ಮತ್ತು ಹೆಸರನ್ನು ಮಾಡಿದ್ದರಿಂದ ಕೆಲಸವನ್ನು ತೊರೆಯುವಂತೆ ಯಶ್ ತನ್ನ ತಂದೆಗೆ ಕೇಳಿದಾಗ, ಇದಕ್ಕೆ ಅವರ ತಂದೆಯು ನಿರಾಕರಿಸಿದ್ದಾರೆ. ಈ ಕೆಲಸ ಮಾಡುವ ಮೂಲಕ ನಾನು ನಿನ್ನನ್ನು ಸೂಪರ್ಸ್ಟಾರ್ ಮಾಡಿದೆ ಎಂದು ಅವನ ತಂದೆ ಯಶ್ ಗೆ ಹೇಳಿದರು. ನಂತರ ನಿನ್ನ ಕೆಲಸದ ಬಗ್ಗೆ ನೀನು ಕೇಂದ್ರೀಕರಿಸು ನನ್ನ ಕೆಲಸದ ಮೇಲೆ ನಾನು ಕೇಂದ್ರೀಕರಿಸುತ್ತೇನೆ "ಎಂದು ಹೇಳಿದರು. ಇದನ್ನು ನಾನು ಕೇಳಿದಾಗ ಯಶ್ ಅವರ ತಂದೆಯು ಯಶ್ ಗಿಂತಲೂ ದೊಡ್ಡ ಸೂಪರ್ಸ್ಟಾರ್ ಎಂದು ನನಗೆ ಅನಿಸಿತು." ಎಂದು ರಾಜಮೌಳಿ ತಿಳಿಸಿದರು.
ಇದೇ ವೇಳೆ ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡಿದ ರಾಜಮೌಳಿ "ನಾನು ನೋಡಿದ 3 ನಿಮಿಷದ ವೀಡಿಯೊದಲ್ಲಿ ಪ್ರತಿಯೊಂದು ದೃಶ್ಯವು ಅದ್ಭುತವಾಗಿದೆ.ಅದನ್ನು ನೋಡಿದ ನಂತರ ನನಗೆ ತುಂಬಾ ಸಂತೋಷವಾಗಿದೆ "ಎಂದು ಅವರು ಹೇಳಿದರು.