ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬರಕನಹಾಲ್ ತಾಂಡ್ಯ ಬಳಿಯ ಒಂಟಿ ಮನೆಯಲ್ಲಿ ದುರಂತವೊಂದು ಸಂಭವಿಸಿದೆ. ಈ ಘಟನೆಯಿಂದ ತಾಂಡ್ಯದ ಜನರೇ ಬೆಚ್ಚಿಬಿದ್ದಿದ್ದಾರೆ. ಮೂವರು ಅನಾಥ ಸಹೋದರಿಯರು ನೇಣಿಗೆ ಕೊರಳೊಡ್ಡಿದ ದಾರುಣ ಘಟನೆ ಸಂಭವಿಸಿದೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ರಂಜಿತಾ (24), ಬಿಂದು (21), ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ತಿಳಿದುಬಂದಿದೆ. ಹಲವು ವರ್ಷಗಳ ಹಿಂದೆಯೇ ಈ ಮೂವರುಹೆಣ್ಣು ಮಕ್ಕಳ ಪೋಷಕರು ಮೃತಪಟ್ಟಿದ್ದರು. ಅಂದಿನಿಂದ ಅಜ್ಜಿ ಜೊತೆಯಲ್ಲಿ ಮೂವರು ಸಹೋದರಿಯರು ವಾಸವಿದ್ದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ: ರಾಮಪಟ್ಟಣ ಸರ್ಕಲ್ನಲ್ಲಿ ನವಜಾತ ಶಿಶು ಪತ್ತೆ
ಆದರೆ ದುರ್ವಿಧಿ ಎಂಬಂತೆ ಇತ್ತೀಚೆಗೆ ಅವರನ್ನು ಸಲಹುತ್ತಿದ್ದ ಅಜ್ಜಿ ಸಹ ಸಾವನ್ನಪ್ಪಿದ್ದಾರೆ. ಹಲವು ವರ್ಷಗಳಿಂದ ತಂದೆ - ತಾಯಿಯಿಲ್ಲದ ದುಃಖದ ಜೊತೆಗೆ ಸಾಕಿ, ಸಲುಹಿದ ಅಜ್ಜಿಯ ಸಾವು ಇವರಲ್ಲಿ ಅನಾಥಭಾವ ಮೂಡಿಸಿದೆ. ಅಜ್ಜಿಯ ಮರಣದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಇಬ್ಬರು ಸಹೋದರಿಯರು ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅನಾಥ ಪ್ರಜ್ಞೆಯಿಂದ ಮನನೊಂದು 9 ದಿನಗಳ ಹಿಂದೆ ಒಂಟಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅನುಮಾನ ಮೂಡಿದೆ. ಶವ ಕೊಳೆತು ವಾಸನೆ ಬಂದ ಬಳಿಕ ಅಲ್ಲಿನ ಜನ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Cold Weather : ರಾಜ್ಯದಲ್ಲಿ ಕೊರೆಯುವ ಚಳಿಗೆ ಕರಾವಳಿ ಸೇರಿ ಉತ್ತರ ಕರ್ನಾಟಕ ತತ್ತರ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.