Lalit Modi: ತನ್ನ 4555 ಕೋಟಿ ರೂ. ಮೌಲ್ಯದ ಟ್ರಸ್ಟ್ ಉತ್ತರಾಧಿಕಾರಿ ಘೋಷಿಸಿದ ಲಲಿತ್ ಮೋದಿ

Lalit Modi Announcement: ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಮಹತ್ವದ ಘೋಷಣೆಯೊಂದನ್ನು ಮೊಳಗಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೇಲೆ ಪೋಸ್ಟ್ ಹಂಚಿಕೊಂಡ ಲಲಿತ್ ಮೋದಿ, ತನ್ನ ಆಸ್ತಿಗೆ ಉತ್ತರಾಧಿಕಾರಿಯ ಹೆಸರನ್ನು ಘೋಷಣೆ ಮಾಡಿದ್ದಾರೆ.   

Written by - Nitin Tabib | Last Updated : Jan 15, 2023, 08:06 PM IST
  • ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ
  • ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮೆಕ್ಸಿಕೋ ಸಿಟಿಯಿಂದ ಲಂಡನ್‌ಗೆ ಕರೆತರಲಾಗಿದ್ದು,
  • ಅವರಿಗೆ ಕೃತಕ ಆಮ್ಲಜನಕವನ್ನು ನೀಡಲಾಗುತ್ತಿದೆ.
Lalit Modi: ತನ್ನ 4555 ಕೋಟಿ ರೂ. ಮೌಲ್ಯದ ಟ್ರಸ್ಟ್  ಉತ್ತರಾಧಿಕಾರಿ ಘೋಷಿಸಿದ ಲಲಿತ್ ಮೋದಿ title=
Lalit Modi Big Announcement

Lalit Modi's successor: ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಅವರು ಕಳೆದ ಮೂರು ವಾರಗಳಿಂದ ಕಂಫೈನ್ಮೆಂಟ್ ನಲ್ಲಿದ್ದಾರೆ, ಏಕೆಂದರೆ ಅವರು ಎರಡು ವಾರಗಳಲ್ಲಿ ಎರಡು ಬಾರಿ ಇನ್ಫ್ಲುಯೆನ್ಸ ಮತ್ತು ನ್ಯುಮೋನಿಯಾ ಜೊತೆಗೆ ಕೊರೊನಾವೈರಸ್ (ಕೋವಿಡ್ 19) ಗೆ ಗುರಿಯಾಗಿದ್ದಾರೆ. ಇವೆಲ್ಲವುಗಳ ಮಧ್ಯೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಲಲಿತ್ ಮೋದಿ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಘೋಷಿಸಿದ್ದಾರೆ.

ಲಲಿತ್ ಮೋದಿ ಉತ್ತರಾಧಿಕಾರಿ ಇವರು
ಉದ್ಯಮ ಸಮೂಹ ಕೆಕೆ ಮೋದಿ ಫ್ಯಾಮಿಲಿ ಟ್ರಸ್ಟ್‌ನಲ್ಲಿ ನಡೆಯುತ್ತಿರುವ ಆಸ್ತಿ ವಿವಾದದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಪುತ್ರ ರುಚಿರ್ ಮೋದಿ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವುದಾಗಿ ಲಲಿತ್ ಮೋದಿ ಭಾನುವಾರ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಕರೋನವೈರಸ್‌ನಿಂದ ಬಳಲುತ್ತಿರುವ ಹಿನ್ನೆಲೆ ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮೋದಿ, ಕುಟುಂಬದ ವಿಷಯಗಳಲ್ಲಿ ರುಚಿರ್ ಮೋದಿಯನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಪುತ್ರಿ ಆಲಿಯಾ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ-Unique Business Idea: ಕಾಗದದ ರದ್ದಿಯಿಂದ ವಿದೇಶದಲ್ಲಿ ಯಶಸ್ಸಿನ ಬಾವುಟ ಹಾರಿಸಿದ ಈಕೆ ಇಂದು ಕೋಟ್ಯಾಂತರ ಮೌಲ್ಯದ ಕಂಪನಿಗೆ ಒಡತಿ

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಲಲಿತ್ ಮೋಡಿ
ಈ ಕುರಿತು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದುಕೊಂಡಿರುವ ಲಲಿತ್, 'ನಾನು ನನ್ನ ಮಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ ಮತ್ತು ಎಲ್‌ಕೆಎಂ (ಲಲಿತ್ ಕುಮಾರ್ ಮೋದಿ) ಕುಟುಂಬದ ವ್ಯವಹಾರಗಳು ಮತ್ತು ಟ್ರಸ್ಟ್‌ನಲ್ಲಿ ನನ್ನ ಲಾಭದಾಯಕ ಹಿತಾಸಕ್ತಿಗಳ ನಿಯಂತ್ರಣವನ್ನು ನಾನು ಬಿಟ್ಟುಕೊಡಬೇಕೆಂದು ನಾವಿಬ್ಬರೂ ಅಭಿಪ್ರಾಯಪಟ್ಟಿದ್ದೇವೆ. ಅದನ್ನು ಪುತ್ರ ರುಚಿರ್ ಮೋದಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದ್ದೇವೆ' ಎಂದಿದ್ದಾರೆ. ಕುಟುಂಬದೊಳಗಿನ ಆಸ್ತಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿ ಅವರು ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ವಿವಾದ ನಡೆಯುತ್ತಿದೆ. ಈ ಕಾನೂನು ವಿವಾದವು ಒಂದು ಸುದೀರ್ಘ, ಬೇಸರದ ಮತ್ತು ಕಷ್ಟಕರ ವಿವಾದ ಎಂದು ವಿವರಿಸಿದ ಮೋದಿ, "ಇದನ್ನು ಇತ್ಯರ್ಥಗೊಳಿಸಲು ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ ಆದರೆ ನನ್ನ ದೃಷ್ಟಿಯಲ್ಲಿ ಅಂತ್ಯವಿಲ್ಲ" ಎಂದು ಹೇಳಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Budget 2023: ಬಜೆಟ್ ಗೂ ಮುನ್ನವೇ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ವಿತ್ತ ಸಚಿವಾಲಯ

ಅನಾರೋಗ್ಯದ ಕಾರಣದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಮೆಕ್ಸಿಕೋ ಸಿಟಿಯಿಂದ ಲಂಡನ್‌ಗೆ ಕರೆತರಲಾಗಿದ್ದು, ಅವರಿಗೆ ಕೃತಕ ಆಮ್ಲಜನಕವನ್ನು ನೀಡಲಾಗುತ್ತಿದೆ. ರುಚಿರ್ ಅವರನ್ನು ಕುಟುಂಬದಲ್ಲಿ ಉತ್ತರಾಧಿಕಾರಿಯನ್ನಾಗಿ ಮಾಡುವುದರ ಹೊರತಾಗಿ, ಈಗ ಕುಟುಂಬ ಟ್ರಸ್ಟ್‌ಗೆ ಯಾವುದೇ ಆಸಕ್ತಿ ಅಥವಾ ಆದಾಯದ ಬಗ್ಗೆ ಆಸಕ್ತಿ ಇರುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಆದರೂ ಕೂಡ ತಾವು  KKMFT ಯ ಟ್ರಸ್ಟಿಯಾಗಿ ಮುಂದುವರೆಯುವುದಾಗಿ ಲಲಿತ್ ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News