Sankranti 2023: ಇಂದು ಮಧ್ಯ ರಾತ್ರಿಯಿಂದ ಈ ಜನರ ನಕ್ಷತ್ರಗಳಲ್ಲಿ ಭಾರಿ ಬದಲಾವಣೆ, ಅಪಾರ ಧನವೃಷ್ಟಿ

Surya Gochar 2023: ಜನವರಿ 14ರ ಮಧ್ಯರಾತ್ರಿಯಿಂದ ಸೂರ್ಯ ದೇವನು ಧನು ರಾಶಿಯಿಂದ ಮಕರರಾಶಿಗೆ ಸಾಗಲಿದ್ದಾನೆ. ಈ ಕಾರಣದಿಂದ ನಾಳೆ ಅಂದರೆ ಜನವರಿ 15 ರಂದು ಮಕರ ಸಂಕ್ರಾಂತಿ ಉತ್ಸವವನ್ನು ಆಚರಿಸಲಾಗುತ್ತಿದೆ. ಸೂರ್ಯನ ಈ ಸಂಕ್ರಮನದಿಂದ ಹಲವು ರಾಶಿಗಳ ಜನರು ಅಪಾರ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇನ್ನೊಂದೆಡೆ ಕೆಲ ಜನರಿಗೆ ಸೂರ್ಯನ ಈ ರಾಶಿ ಪರಿವರ್ತನೆಯಿಂದ ನಷ್ಟ ಕೂಡ ಉಂಟಾಗಲಿದೆ. ಸೂರ್ಯನ ಈ ರಾಶಿ ಪರಿವರ್ತನೆ ಯಾರ ಪಾಲಿಗೆ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 14, 2023, 10:31 PM IST
  • ಜೋತಿಷ್ಯ ಶಾಸ್ತ್ರ ತುಂಬಾ ಪ್ರಾಚೀನ ವಿಜ್ಞಾನವಾಗಿದೆ.
  • ಇದರಲ್ಲಿ, ಗ್ರಹಗಳ ರಾಶಿ ಬದಲಾವಣೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.
  • ಎಲ್ಲಾ ರಾಶಿಗಳ ಜನರು ಗ್ರಹಗಳ ಈ ರಾಶಿ ಪರಿವರ್ತನೆಯ ಪ್ರಭಾವಕ್ಕೆ ಒಳಗಾಗುತ್ತಾರೆ.
Sankranti 2023: ಇಂದು ಮಧ್ಯ ರಾತ್ರಿಯಿಂದ ಈ ಜನರ ನಕ್ಷತ್ರಗಳಲ್ಲಿ ಭಾರಿ ಬದಲಾವಣೆ, ಅಪಾರ ಧನವೃಷ್ಟಿ title=
Surya Rashi Parivartan 2023

Sun Transit 2023: ಜೋತಿಷ್ಯ ಶಾಸ್ತ್ರ ತುಂಬಾ ಪ್ರಾಚೀನ ವಿಜ್ಞಾನವಾಗಿದೆ. ಇದರಲ್ಲಿ, ಗ್ರಹಗಳ ರಾಶಿ ಬದಲಾವಣೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಎಲ್ಲಾ ರಾಶಿಗಳ ಜನರು ಗ್ರಹಗಳ ಈ ರಾಶಿ ಪರಿವರ್ತನೆಯ ಪ್ರಭಾವಕ್ಕೆ ಒಳಗಾಗುತ್ತಾರೆ. ಜನವರಿ 14 ರ ಮಧ್ಯರಾತ್ರಿಯ ನಂತರ, ಸೂರ್ಯ ದೇವ ಧನು ರಾಶಿಯಿಂದ ಮಕರ ರಾಶಿಗೆ ಸಾಗಲಿದ್ದಾನೆ. ಈ ಕಾರಣಕ್ಕಾಗಿ ಜನವರಿ 15 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಈ ಸಂಕ್ರಮಣದಿಂದ ಈ ರಾಶಿಗಳ ಜನರು ಅಪಾರ ಪ್ರಯೋಜನಗಳನ್ನು ಪಡೆಯಲಿದ್ದಾರೆ, ಆದರೆ ಕೆಲವು ರಾಶಿಯ ಜನರು ನಷ್ಟ ಕೂಡ ಅನುಭವಿಸಲಿದ್ದಾರೆ. ಸೂರ್ಯನ ಸಂಚಾರದಿಂದ ಯಾವ ರಾಶಿಗೆ ಲಾಭ ಹಾಗೂ ಯಾವ ರಾಶಿಗೆ ನಷ್ಟ ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ - ವ್ಯಾಪಾರಕ್ಕಾಗಿ ವಿದೇಶ ಪ್ರವಾಸದ ಸಾಧ್ಯತೆಗಳಿವೆ, ಆದರೆ ಅಜ್ಞಾತ ಭಯದಿಂದಾಗಿ ನೀವು ಒತ್ತಡದಲ್ಲಿ ಉಳಿಯಬಹುದು. ಅಧಿಕಾರಿಗಳು ಕೆಲಸದಲ್ಲಿ ಸಹಕರಿಸುವರು. ಆದಾಯದ ಮೂಲಗಳು ನಿರ್ಮಾಣಗೊಳ್ಳಲಿವೆ. ಮುಂದೆ ಸಾಗಲು ಮಾರ್ಗಗಳು ತೆರೆದುಕೊಳ್ಳಲಿವೆ. ಆದರೆ ಕುಟುಂಬದಿಂದ ದೂರ ಹೋಗಬೇಕಾಗಬಹುದು.

ವೃಷಭ ರಾಶಿ - ಈ ಅವಧಿಯಲ್ಲಿ ನೀವು ಹೆಚ್ಚು ಪರಿಶ್ರಮಪಡಬೇಕಾಗಬಹುದು. ಕೆಲಸ ಮತ್ತು ಕೆಲಸದ ಸ್ಥಳದಲ್ಲಿ ಬದಲಾವಣೆಗಳಾಗಬಹುದು. ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ನೀವು ವೈಮನಸ್ಸನ್ನು ಹೊಂದಿರಬಹುದು. ಆತ್ಮವಿಶ್ವಾಸ ಹೆಚ್ಚಾಗಲಿದೆ. ಖರ್ಚು ಹೆಚ್ಚಾಗಲಿದೆ.

ಮಿಥುನ ರಾಶಿ - ಧಾರ್ಮಿಕ ಪ್ರವಾಸದ ಯೋಜನೆಯನ್ನು ರೂಪಿಸಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅಪರಿಚಿತ ಭಯದಿಂದ ತೊಂದರೆ ಉಂಟಾಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಯಾಣ ಸಾಧ್ಯತೆ ಇದೆ. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ಉತ್ತಮ ಸ್ಥಿತಿಯಲ್ಲಿರುವಿರಿ. ಕೆಲಸದ ಸ್ಥಳದಲ್ಲಿ ವಿಷಯಗಳು ನಿಮಗೆ ಅನುಕೂಲಕರವಾಗಿರುತ್ತದೆ.

ಕರ್ಕ ರಾಶಿ - ಆತ್ಮವಿಶ್ವಾಸ ಹೆಚ್ಚಾಗಲಿದೆ. ಅನಗತ್ಯ ವಿವಾದಗಳಿಂದ ತೊಂದರೆಯಾಗಬಹುದು. ವ್ಯವಹಾರದಲ್ಲಿ ತೊಂದರೆಗಳು ಉಂಟಾಗಬಹುದು. ಆದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಲಿದೆ.

ಸಿಂಹ ರಾಶಿ - ಉದ್ಯೋಗದಲ್ಲಿ ಪ್ರಗತಿಯ ಹಾದಿ ತೆರೆದುಕೊಳ್ಳಲಿದೆ. ಆದಾಯ ಹೆಚ್ಚಾಗಲಿದೆ ಮತ್ತು ವ್ಯಾಪಾರವೂ ವಿಸ್ತರಣೆಯಾಗಲಿದೆ. ಕುಟುಂಬ ಜೀವನದಲ್ಲಿ ತೊಂದರೆಗಳು ಎದುರಾಗಬಹುದು. ಮನಸ್ಥಿತಿಯಲ್ಲಿ ಕಿರಿಕಿರಿ ಇರುವ ಸಾಧ್ಯತೆ ಇದೆ. ಯಾವುದಾದರೊಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಸಂಗಾತಿಯೊಂದಿಗೆ ವೈಮನಸ್ಸು ಉಂಟಾಗಬಹುದು. ಅತಿ ಉತ್ಸಾಹವನ್ನು ತಪ್ಪಿಸಿ

ಕನ್ಯಾ ರಾಶಿ - ಆರೋಗ್ಯದ ಬಗ್ಗೆ ಗಮನ ಹರಿಸಿ. ಕುಟುಂಬದ ಬೆಂಬಲವನ್ನು ಸಿಗಲಿದೆ ಮತ್ತು ಹಿರಿಯ ಮಹಿಳೆಯಿಂದ ನೀವು ಹಣವನ್ನು ಪಡೆಯುವ ಸಾಧ್ಯತೆ ಇದೆ. ವಿದೇಶ ಪ್ರವಾಸದ ಅವಕಾಶಗಳು ಒದಗಿಬರುತ್ತಿವೆ. ಈ ಸಮಯದಲ್ಲಿ ಸಾಕಷ್ಟು ಓಡಾಟದಿಂದ ಕೂಡಿರುತ್ತದೆ. ಮನಸ್ಸು ಚಂಚಲವಾಗಿರಲಿದೆ.

ತುಲಾ ರಾಶಿ - ತುಲಾ ರಾಶಿಯವರ ಆದಾಯ ಹೆಚ್ಚಾಗಲಿದೆ. ಧಾರ್ಮಿಕ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಬಹುದು. ವ್ಯಾಪಾರ ವೃದ್ಧಿಯಾಗಲಿದೆ. ಮನಸ್ಸು ಸಂತೋಷದಿಂದ ಕೂಡಿರುತ್ತದೆ ಮತ್ತು ತಾಳ್ಮೆ ಹೆಚ್ಚಾಗಲಿದೆ. ಅತಿಯಾದ ಕೋಪವನ್ನು ತಪ್ಪಿಸಿ. ಆರೋಗ್ಯ ಸಂಬಂಧಿ ಸಮಸ್ಯೆಗಳಿರಬಹುದು.

ವೃಶ್ಚಿಕ ರಾಶಿ - ಕುಟುಂಬದೊಂದಿಗೆ ಯಾವುದೇ ಧಾರ್ಮಿಕ ಪ್ರವಾಸವನ್ನು ಕೈಗೊಳ್ಳಬಹುದು. ಮಾನಸಿಕ ನೆಮ್ಮದಿ ಸಿಗಲಿದೆ. ವಾಹನ ಖರೀದಿಯ ಅವಕಾಶ ಒದಗಿ ಬರಲಿದೆ. ಕೆಲಸದ ಸ್ಥಳದಲ್ಲಿ ಹೆಚ್ಚು ಕಷ್ಟಪಡಬೇಕಾಗುತ್ತದೆ. ತಾಯಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಉದ್ಯೋಗದಲ್ಲಿ ಮುಂದುವರೆಯುವ ಅವಕಾಶವಿರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಧನು ರಾಶಿ - ಹೃದಯವು ಸಂತೋಷದಿಂದ ಕೂಡಿರುತ್ತದೆ ಮತ್ತು ವ್ಯಾಪಾರವೂ ಹೆಚ್ಚಾಗಲಿದೆ. ವ್ಯಾಪಾರದ ನಿಮಿತ್ತ ವಿದೇಶ ಪ್ರಯಾಣ ಸಂಭವಿಸಬಹುದು. ಸಂಭಾಷಣೆಯಲ್ಲಿ ತಾಳ್ಮೆಯಿಂದಿರಿ. ತಂದೆಯಿಂದ ವಿರಹ ಉಂಟಾಗಬಹುದು. ಓದು ಬರಹದಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಮಕರ ರಾಶಿ - ಮಕರ ರಾಶಿಯಲ್ಲಿ ಸೂರ್ಯದೇವನ ಸಂಚಾರ ನಡೆಯುತ್ತಿದೆ. ಇದರಿಂದ ಖರ್ಚು ಹೆಚ್ಚಾದರೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕಷ್ಟ ಹೆಚ್ಚಾಗಲಿದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ವ್ಯವಹಾರದಲ್ಲಿ ಹೆಚ್ಚು ಗಮನ ಕೊಡಿ.

ಕುಂಭ ರಾಶಿ - ತಾಳ್ಮೆ ಕಡಿಮೆಯಾಗಲಿದೆ. ಸ್ನೇಹಿತರಿಂದ ಸಹಕಾರ ದೊರೆಯಲಿದೆ. ಖರ್ಚು-ವೆಚ್ಚಗಳು ಹೆಚ್ಚಾಗಲಿವೆ ಮತ್ತು ಮನಸ್ಸಿಗೆ ತೊಂದರೆ ಉಂಟಾಗಲಿದೆ. ಈ ಅವಧಿಯಲ್ಲಿ, ಹೆಚ್ಚು ಕಠಿಣ ಪರಿಶ್ರಮವನ್ನು ಮಾದಬೇಕಾಗಲಿದೆ ಮತ್ತು ಧ್ವನಿಯಲ್ಲಿಯೂ ನಿಷ್ಟುರತೆ ಇರಲಿದೆ. ಕೆಲಸದ ಸ್ಥಳದಲ್ಲಿ ತೊಂದರೆಗಳು ಉಂಟಾಗಬಹುದು.

ಇದನ್ನೂ ಓದಿ-Love Proposal Mistakes: ಸಂಗಾತಿಗೆ ಪ್ರಪೋಸ್ ಮಾಡುವಾಗ ಮರೆತೂ ಕೂಡ ಈ ತಪ್ಪು ಮಾಡ್ಬೇಡಿ, ಇಲ್ದಿದ್ರೆ ಡೈರೆಕ್ಟ್ ರಿಜೆಕ್ಟ್

ಮೀನ ರಾಶಿ - ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಅನಾವಶ್ಯಕ ಚರ್ಚೆಗಳನ್ನು ತಪ್ಪಿಸಿ. ಕಷ್ಟಗಳನ್ನು ಎದುರಿಸಬೇಕಾಗಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪಿತ್ರಾರ್ಜಿತ ಆಸ್ತಿಯಿಂದ ಧನಲಾಭ ಸಿಗಲಿದೆ.

ಇದನ್ನೂ ಓದಿ-Good News: ಇನ್ಮುಂದೆ ನೀವು 8 ಲಕ್ಷ ರೂ.ಗಳ ಆದಾಯದ ಮೇಲೆ ತೆರಿಗೆ ಉಳಿತಾಯ ಮಾಡಬಹುದು, ವಿಧಾನ ಹೇಳಿಕೊಟ್ಟ ವಿತ್ತ ಸಚಿವೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News