ಇನ್ನೊಂದು ವಾರದಲ್ಲಿ ಈ ರಾಶಿಯವರ ಜೀವನದ ಕಷ್ಟಗಳು ಹೆಚ್ಚುವುದು .!

ಜನವರಿ 18 ರಂದು ಬುಧ ನೇರ ನಡೆಗೆ ಮರಳಲಿದ್ದಾನೆ.  ಧನು ರಾಶಿಯಲ್ಲಿ ಬುಧನ ನೇರ ಚಲನೆ ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.   

Written by - Ranjitha R K | Last Updated : Jan 13, 2023, 04:09 PM IST
  • ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ.
  • ಜನವರಿ 18 ರಂದು ಬುಧ ನೇರ ನಡೆಗೆ ಮರಳಲಿದ್ದಾನೆ.
  • ಈ ರಾಶಿಯವರು ಸ್ವಲ್ಪ ಸಮಯದವರೆಗೆ ಜಾಗರೂಕರಾಗಿರಬೇಕು.
ಇನ್ನೊಂದು ವಾರದಲ್ಲಿ ಈ ರಾಶಿಯವರ ಜೀವನದ ಕಷ್ಟಗಳು ಹೆಚ್ಚುವುದು .!  title=

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಬುಧನನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಬುಧ ತನ್ನ ಚಲನೆಯನ್ನು ಬದಲಾಯಿಸಿದಾಗ, ಎಲ್ಲಾ ರಾಶಿಯವರ ಸಂಪತ್ತು, ವೃತ್ತಿ, ಮಾತು ಇತ್ಯಾದಿಗಳ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಜನವರಿ 18 ರಂದು ಬುಧ ನೇರ ನಡೆಗೆ ಮರಳಲಿದ್ದಾನೆ.  ಧನು ರಾಶಿಯಲ್ಲಿ ಬುಧನ ನೇರ ಚಲನೆ ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ 3 ರಾಶಿಯವರ ಮೇಲೆ ಬುಧನ ನೇರ ಚಲನೆ  ಕೆಟ್ಟ ಪರಿಣಾಮವನ್ನೇ ಬೀರಲಿದೆ. ಈ  ರಾಶಿಯವರು ಸ್ವಲ್ಪ ಸಮಯದವರೆಗೆ ಜಾಗರೂಕರಾಗಿರಬೇಕು.

ವೃಷಭ ರಾಶಿ : ವೃಷಭ ರಾಶಿಯವರಿಗೆ ಬುಧ ಸಂಕ್ರಮಣ ಶುಭವಾಗಿರುವುದಿಲ್ಲ.ಈ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ಸಣ್ಣ ಸಮಸ್ಯೆ ಇದ್ದರೂ ತಕ್ಷಣ ತಜ್ಞರನ್ನು ಸಂಪರ್ಕಿಸಿ. ವೈಯಕ್ತಿಕ ಜೀವನದಲ್ಲಿ ತೊಂದರೆಗಳು ಉಂಟಾಗಬಹುದು. ಈ ಸಮಯದಲ್ಲಿ ತಾಳ್ಮೆ ವಹಿಸಿ ನಿಮ್ಮ ಮಾತು ಕೋಪದ ಮೇಲೆ ನಿಯಂತ್ರಣವಿರಲಿ. 

ಇದನ್ನೂ ಓದಿ :  Guru Mahadasha : ಜಾತಕದಲ್ಲಿ 16 ವರ್ಷ ಗುರು ಮಹಾದಶ : ಇವರಿಗೆದೆ ರಾಜಯೋಗ ಶುಭ!

ಕರ್ಕಾಟಕ ರಾಶಿ : ಬುಧ ಗ್ರಹದ ನೇರ ಚಲನೆಯು ಕರ್ಕಾಟಕ ರಾಶಿಯವರನ್ನು ಕೆಲವು ಕಾಯಿಲೆಗಳಿಗೆ ತಳ್ಳಬಹುದು. ಇದರಿಂದ ಚಿಕಿತ್ಸೆಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು. ಸಣ್ಣ ಸಮಸ್ಯೆ ಎಂದು ಯಾವುದೇ ಕಾರಣಕ್ಕೂ ಸುಮ್ಮನಾಗಬೇಡಿ. ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದರೆ ಉಗುರಿನಲ್ಲಿ ಕಳೆಯುವುದಕ್ಕೆ ಕೊಡಲಿ ಎತ್ತು ಕೊಂಡ ಹಾಗೆ ಆಗಬಹುದು. ಉದ್ಯೋಗಿಗಳಿಗೆ ಸಮಯವು ಸಾಮಾನ್ಯವಾಗಿರುತ್ತದೆ. ವ್ಯಾಪಾರ ನಡೆಸುವವರಾದರೆ ನೋಡಿಕೊಂಡು ಹೂಡಿಕೆ ಮಾಡಿ. 

ಮಕರ ರಾಶಿ: ಮಕರ ರಾಶಿಯವರಿಗೆ ಬುಧನು ವೃತ್ತಿಯಲ್ಲಿ ತೊಂದರೆಗಳನ್ನು ನೀಡಬಹುದು. ಈ ರಾಶಿಯವರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಉದ್ಯೋಗಸ್ಥರು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳಿ. 

ಇದನ್ನೂ ಓದಿ : Shani Dev Upay: ಶನಿ ಮುನಿಸಿಕೊಂಡರೆ ಜೀವನವೇ ನರಕಾಗುತ್ತದೆ, ಈ ಉಪಾಯ ಅನುಸರಿಸಿ

 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News