Cylinder explosion: ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾಗಿರುವ ಭೀಕರ ಘಟನೆ ಇಂದು(ಜನವರಿ 12) ಬೆಳಗ್ಗೆ ಹರಿಯಾಣದ ಪಾಣಿಪತ್ನ ತೆಹಸಿಲ್ ಕ್ಯಾಂಪ್ನಲ್ಲಿರುವ ರಾಧಾ ಫ್ಯಾಕ್ಟರಿ ಬಳಿ ಸಂಭವಿಸಿದೆ. ಮೃತರಲ್ಲಿ ಪತಿ-ಪತ್ನಿ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಪಾಣಿಪತ್ನ ತೆಹಸಿಲ್ ಕ್ಯಾಂಪ್ನಲ್ಲಿರುವ ರಾಧಾ ಫ್ಯಾಕ್ಟರಿ ಬಳಿಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದ ಮನೆಯಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದೆ. ಇಂದು ಬೆಳಿಗ್ಗೆ ಅಡುಗೆ ಮಾಡಲೆಂದು ಸ್ಟೌವ್ ಹಚ್ಚಿದಾಗ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸಮಯದಲ್ಲಿ ಮನೆಯ ಬಾಗಿಲು ತೆರೆಯದ ಕಾರಣ ಕುಟುಂಬದ ಎಲ್ಲರೂ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಚಿರಾಗ್ ಪಾಸ್ವಾನ್ ಜೀವಕ್ಕೆ ಬೆದರಿಕೆ, ಕೇಂದ್ರದಿಂದ ಜೆಡ್ ಕೆಟಗರಿ ಭದ್ರತೆ
ಈ ದುರ್ಘಟನೆ ಸಂಭವಿಸಿದಾಗ ಪತಿ-ಪತ್ನಿ ತಮ್ಮ ನಾಲ್ವರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ನಾಲ್ವರು ಮಕ್ಕಳಲ್ಲಿ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಎನ್ನಲಾಗಿದೆ. ಮೃತರನ್ನು ಅಬ್ದುಲ್ ಕರೀಂ (50), ಅವರ ಪತ್ನಿ ಅಫ್ರೋಜಾ (46), ಹಿರಿಯ ಮಗಳು ಇಶ್ರತ್ ಖಾತುನ್ (17-18), ರೇಷ್ಮಾ (16), ಅಬ್ದುಲ್ ಶಕೂರ್ (10) ಮತ್ತು ಅಫಾನ್ (7) ಎಂದು ಗುರುತಿಸಲಾಗಿದೆ. ಮೂಲತಃ ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರದವರಾದ ಇವರು ಉದ್ಯೋಗದ ಸಲುವಾಗಿ ಹರಿಯಾಣದ ಪಾಣಿಪತ್ನಲ್ಲಿ ಬಂದು ನೆಲೆಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಮಗಳನ್ನು ಕೊಂದು ರಾತ್ರೋರಾತ್ರಿ ಸುಟ್ಟು ಹಾಕಿದ ತಂದೆ-ತಾಯಿ! ಕಾರಣವೇನು ಗೊತ್ತಾ?
ಆದಾಗ್ಯೂ, ಸಿಲಿಂಡರ್ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ತಿಳಿದುಬಂದಿಲ್ಲ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.