ನವದೆಹಲಿ: ಉದ್ಯಮಿಗಳ ಸಾಲವನ್ನು ಮನ್ನಾ ಮಾಡುವುದಾದರೆ ಅದರಂತೆ ರೈತರ ಸಾಲವನ್ನು ಸಹಿತ ಮನ್ನಾ ಮಾಡಬೇಕೆಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ದೆಹಲಿಯಲ್ಲಿ ರೈತರು ಹಮ್ಮಿಕೊಂಡಿರುವ ಕಿಸಾನ್ ಮುಕ್ತಿ ಮಾರ್ಚ್ ಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ರಾಹುಲ್ ಗಾಂಧಿ" ಪ್ರಧಾನಿ ಮೋದಿ ರೈತರಿಗೆ ಹಲವಾರು ಭರವಸೆಗಳನ್ನು ನೀಡಿದ್ದರು ಆದರೆ ಅವುಗಳನ್ನೂ ಅವರು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿದರೆ ಏನೂ ಆಗುವುದಿಲ್ಲ ಎಂದರು.ಇನ್ನು ಮುಂದುವರೆದು ಮಾತನಾಡಿದ ಅವರು ಉದ್ಯಮಿಗಳ ಸಾಲವನ್ನು ಮನ್ನಾ ಮಾಡುವುದಾದರೆ ಅದರಂತೆ ರೈತರ ಸಾಲವನ್ನು ಸಹ ಮನ್ನಾ ಮಾಡಬೇಕೆಂದು ಅವರು ಆಗ್ರಹಿಸಿದರು.
Rahul Gandhi at farmers’ protest in Delhi: Modi ji had promised MSP will be increased, PM promised bonus, but look at the situation right now, empty speeches are being given and nothing else pic.twitter.com/JVYM1RJOpf
— ANI (@ANI) November 30, 2018
Delhi: Farmers from all across the nation hold protest for the second day over their demands of debt relief, better MSP for crops, among others; latest #visuals from near Jantar Mantar pic.twitter.com/zwnHQHALkk
— ANI (@ANI) November 30, 2018
ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಪಿಎಂ ನಾಯಕ ಸೀತಾರಾಮ ಯೆಚೂರಿ "ಬಿಜೆಪಿ,ಪ್ರಧಾನಿ ಮೋದಿ,ಆರೆಸೆಸ್ಸ್ ಕೈಯಲ್ಲಿ ಕೇವಲ ಒಂದೇ ಶಸ್ತ್ರವಿದೆ ಅದು ರಾಮ ಮಂದಿರ. ಚುನಾವಣೆಗಳು ಹತ್ತಿರಬಂದಂತೆ ಅವರು ಈಗ ರಾಮ ರಾಮ ಎಂದು ಜಪ ಮಾಡುತ್ತಿದ್ದಾರೆ" ಎಂದು ಕೀಡಿ ಕಾರಿದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮಾತನಾಡುತ್ತಾ " ಲೋಕಸಭಾ ಚುನಾವಣೆಗೆ ಕೇವಲ ಐದು ತಿಂಗಳು ಬಾಕಿ ಇದೇ ಆದ್ದರಿಂದ ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿಯನ್ನು ಜಾರಿಗೆ ಗೊಳಿಸಬೇಕೆಂದು ಒತ್ತಾಯಿಸಿದರು.